Advertisment

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​; ಏನದು?

author-image
Veena Gangani
Updated On
ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ದಿವ್ಯಾ ಸುರೇಶ್​; ಏನದು?
Advertisment
  • ತ್ರಿಪುರ ಸುಂದರಿ ಸೀರಿಯಲ್ ಗಂಧರ್ವ ಕನ್ಯೆಯಾಗಿದ್ದ ನಟಿ
  • ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದುಕೊಂಡಿದ್ದ ದಿವ್ಯಾ ಸುರೇಶ್
  • ಇಷ್ಟು ದಿನ ಕಾಯುತ್ತಿದ್ದ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ದಿವ್ಯಾ

ಬಿಗ್​ಬಾಸ್​ ಬೆಡಗಿ ದಿವ್ಯಾ ಸುರೇಶ್​ ಕಿರುತೆರೆಯಿಂದ ಕಾಣೆಯಾಗಿದ್ರು. ಎಲ್ಲಿಗೆ ಹೋದ್ರು ಅಂತ ಹುಡುಕುತ್ತಿದ್ದಾಗ ಮತ್ತೇ ಸೀರಿಯಲ್​ಗೆ ಮರಳುವ ಸೂಚನೆ ಕೊಟ್ಟಿದ್ದಾರೆ.

Advertisment

ಇದನ್ನೂ ಓದಿ: ನಿಮ್ಮ ಗಮನಶಕ್ತಿಯನ್ನು ಧ್ವಂಸಗೊಳಿಸುತ್ತವೆ ಈ ಪ್ರಮುಖ ಅಭ್ಯಾಸಗಳು: ಯಾವುವು ಗೊತ್ತಾ?

publive-image

ಹೌದು, ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಗಂಧರ್ವ ಕನ್ಯೆ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ, ಸೀರಿಯಲ್​ ಮುಕ್ತಾಯದ ನಂತರ ಬೆಳ್ಳಿ ತೆರೆಯತ್ತ ಮುಖ ಮಾಡಿದ್ರು. ಒಂದಿಷ್ಟು ಸಿನಿಮಾಗಳಿಗೆ ಸೈನ್​ ಮಾಡಿದ್ದ ದಿವ್ಯಾ ಸುರೇಶ್ ಈಗ​ ಹೊಸ ಧಾರಾವಾಹಿ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಕಿರುತೆರೆಗೆ ಕಮ್ ಬ್ಯಾಕ್ ಆಗ್ತಿದ್ದಾರೆ.

Advertisment

publive-image

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಬರ್ತಿದೆ. ಶ್ರೀಗೌರಿ ಖ್ಯಾತಿಯ ನಟ, ನಿರ್ದೇಶಕ ಸುನೀಲ್​ ಪುರಾಣಿಕ್​ ಅವರು ಈ ಧಾರಾವಾಹಿಯನ್ನ ನಿರ್ದೇಶನ ಮಾಡ್ತಿದ್ದಾರೆ. ಸ್ಟೋರಿ ಏನು? ಎಂಬುದರ ಬಗ್ಗೆ ರಿವೀಲ್​ ಆಗಿಲ್ಲ. ಆದ್ರೆ ಈ ಧಾರಾವಾಹಿಯಲ್ಲಿ ದಿವ್ಯಾ ಸುರೇಶ್ ಪ್ರಮುಖ ಪಾತ್ರ ಮಾಡ್ತಿದ್ದಾರೆ.

publive-image

Advertisment

ಈಗಾಗಲೇ ಪ್ರೋಮೋ ಶೂಟಿಂಗ್​ ಆಗಿದ್ದು, ಧಾರಾವಾಹಿಯ ಪ್ರೋಮೋ ಮುಂದಿನ ತಿಂಗಳು ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳಿಗೆ ದಿವ್ಯಾ ಸುರೇಶ್ ಕೊನೆಗೂ ಗುಡ್​ನ್ಯೂಸ್ ಕೊಟ್ಟಿದ್ದಾರೆ.​ ಮತ್ತೆ ಸೀರಿಯಲ್​ನಲ್ಲಿ ಮಿಂಚೋದಕ್ಕೆ ರೆಡಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment