Advertisment

ಮಗಳ ಕಳ್ಳತನಕ್ಕೆ ಸಾಥ್​ ಕೊಟ್ಟ ಗ್ರೇಟ್​ ತಾಯಿ; ವೃದ್ದೆಗೆ ಕೋಟಿ ಕೋಟಿ ವಂಚಿಸಿ ಸಿಕ್ಕಿಬಿದ್ರು!

author-image
Ganesh Nachikethu
Updated On
ಮಗಳ ಕಳ್ಳತನಕ್ಕೆ ಸಾಥ್​ ಕೊಟ್ಟ ಗ್ರೇಟ್​ ತಾಯಿ; ವೃದ್ದೆಗೆ ಕೋಟಿ ಕೋಟಿ ವಂಚಿಸಿ ಸಿಕ್ಕಿಬಿದ್ರು!
Advertisment
  • ಇದು ವಿದ್ಯಾವಂತರ ಫ್ಯಾಮಿಲಿ, ಮಾಡೋದು ಮಾತ್ರ ಕಳ್ಳತನ..!
  • ಮಗಳ ಕಳ್ಳತನಕ್ಕೆ ಸಾಥ್​​ ಕೊಟ್ಟ ಗ್ರೇಟ್​ ತಾಯಿ ಯಾರು ಗೊತ್ತಾ?
  • ವೃದ್ದೆಯೊಬ್ಬರಿಗೆ ಕೋಟಿ ಕೋಟಿ ದುಡ್ಡು ವಂಚಿಸಿ ಮೋಸ ಮಾಡಿದ್ರು

ಬೆಂಗಳೂರು: ಅಪೂರ್ವ ಯಾದವ್​, ಎಂಬಿಎ ಪದವೀಧರೆ, ವೃತ್ತಿಯಲ್ಲಿ ಬ್ಯಾಂಕ್ ಸಿಬ್ಬಂದಿ. ಮತ್ತೊಬ್ಬರ ಹೆಸರು ವಿಶಾಲ. ಎಂಬಿಎ ಪದವೀಧರೆ ಅಪೂರ್ವಳ ತಾಯಿ. ಅರುಂಧತಿ, ಇನ್ಶುರೆನ್ಸ್​​ ಕಂಪನಿಯ ಸಿಬ್ಬಂದಿ. ರಾಕೇಶ್, ಅರುಂಧತಿ ಪತಿ. ಇದು ವೆಲ್​ ಸೆಟೆಲ್ಡ್​​ ಫ್ಯಾಮಿಲಿ.

Advertisment

ಮೂಲತಃ ಶಿವಮೊಗ್ಗ ಮೂಲದ ನಿವಾಸಿಗಳು.. ಆದ್ರೆ, ಈಗ ಓರ್ವ ವೃದ್ದೆ ಶಾಂತಾ ಎಂಬುವರಿಗೆ ಬಣ್ಣ ಬಣ್ಣದ ಮಾತುಗಳಿಂದ ಖೆಡ್ಡಾಗೆ ಕೆಡವಿ, ಪಕ್ಕಾ ಪ್ಲ್ಯಾನ್​ ಮಾಡಿ ಕೋಟಿ, ಕೋಟಿ ವಂಚಿಸಿ ಬನಶಂಕರಿ ಪೊಲೀಸರ ಕೈಯಲ್ಲಿ ಲಾಕ್​ ಆಗಿದ್ದಾರೆ.

ಹಣ ಬಳಸಿಕೊಳ್ಳೋ ಪ್ಲಾನ್​ ಮಾಡಿದ್ದವಳು ವೃದ್ಧೆಗೆ ಪರಿಚಯವಿದ್ದ ದಂಪತಿಯ ಸಹಾಯ ಪಡೆದು ಆಕೆಯ ಅಕೌಂಟ್​​ನಲ್ಲಿದ್ದ ಹಣವನ್ನ ಬೇರೆ ಬೇರೆ ಅಕೌಂಟ್​ಗೆ ಟ್ರಾನ್ಸ್​ಫರ್ ಮಾಡ್ತಾಳೆ.

ಹೀಗೆ ಹಂಚಿಹೋಗಿದ್ದ ಹಣವನ್ನೆಲ್ಲಾ ಪೊಲೀಸರು ಸದ್ಯ ರಿಕವರಿ ಮಾಡಿ ವೃದ್ಧೆಗೆ ಕೊಟ್ಟಿದ್ದಾರೆ. ಇಲ್ಲಿ ನೀವು ಚೆನ್ನಾಗಿ ಗಮನಿಸಬಹುದು. ಚೆನ್ನಾಗಿ ಓದಿ ಬ್ಯಾಂಕ್​ನಲ್ಲಿ ಕೆಲಸ ಮಾಡ್ತಿದ್ದ ಮಹಿಳೆ ಓರ್ವ ವೃದ್ಧೆಯ ಹಣದ ಮೇಲೆ ಆಸೆ ಪಟ್ಟಿದ್ದಾಳೆ.

Advertisment

ನಂಬಿಕೆಯಿಂದ ಕೆಲಸ ಕೊಟ್ಟ ಕಂಪನಿಗೆ ಮೋಸ ಮಾಡಿದ್ದಾಳೆ. ವಿದ್ಯಾವಂತರೇ ಹೀಗೆ ಅಡ್ಡದಾರಿ ಹಿಡಿದ್ರೆ ಹೇಗೆ ಅಲ್ವಾ? ಇನ್ನೂ ಮಗಳು ಮಾಡ್ತಿರೋದು ತಪ್ಪು ಅಂತ ಗೊತ್ತಿದ್ರೂ ತಿದ್ದಿ, ಬುದ್ದಿ ಹೇಳಬೇಕಾದ ತಾಯಿ ಮಗಳ ಜೊತೆ ಕೈ ಜೋಡಿಸಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment