Advertisment

ಮತ್ತೆ ಅಸಮಾಧಾನ.. ಪಾಂಡ್ಯ ಆಕ್ರೋಶದಲ್ಲಿ ‘ಜವಾಬ್ದಾರಿ ಹೊರಬೇಕಿದೆ’ ಎಂದಿದ್ದು ಯಾರಿಗೆ..?

author-image
Ganesh
Updated On
ಮತ್ತೆ ಅಸಮಾಧಾನ.. ಪಾಂಡ್ಯ ಆಕ್ರೋಶದಲ್ಲಿ ‘ಜವಾಬ್ದಾರಿ ಹೊರಬೇಕಿದೆ’ ಎಂದಿದ್ದು ಯಾರಿಗೆ..?
Advertisment
  • ಒಂದೂ ಪಂದ್ಯ ಗೆಲ್ಲದ ಮುಂಬೈ ಇಂಡಿಯನ್ಸ್
  • ಪಾಯಿಂಟ್ಸ್​ ಪಟ್ಟಿಯಲ್ಲಿ ಮುಂಬೈಗೆ ಕೊನೆಯ ಸ್ಥಾನ
  • ಗುಜರಾತ್ ವಿರುದ್ಧ ಸೋಲ್ತಿದ್ದಂತೆ ಪಾಂಡ್ಯ ಏನಂದ್ರು?

ಸೀಸನ್​-17ರಲ್ಲಿ ಛಿದ್ರ ಛಿದ್ರವಾಗಿದ್ದ ಮುಂಬೈನಲ್ಲಿ ಈಗ ಎಲ್ಲವೂ ಸರಿಯಾಗಿದೆ. ಮೆನಿ ಫ್ಯಾಮಿಲಿಯಾಗಿದ್ದ ಮುಂಬೈ ಫ್ರಾಂಚೈಸಿ ಮತ್ತೆ ಒನ್​ ಫ್ಯಾಮಿಲಿಯಾಗಿದೆ ಅಂತಾ ಎಲ್ಲರೂ ಅಂದುಕೊಂಡಿದ್ರು. ಆದರೆ ಗುಜರಾತ್ ಎದುರಿನ ಒಂದೇ ಒಂದು ಸೋಲು, ಮುಂಬೈ ಇಂಡಿಯನ್ಸ್​ನಲ್ಲಿ ಎಲ್ಲವೂ ಸರಿ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ.

Advertisment

ಕಳೆದ ಶನಿವಾರ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್​ಗೆ 197 ರನ್​​ಗಳ ಗುರಿಯನ್ನು ನೀಡಿತ್ತು. ಬೆನ್ನು ಹತ್ತಿದ್ದ ಮುಂಬೈ, 6 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿ ಸೋಲಿಗೆ ಶರಣಾಯ್ತು.

ಇದನ್ನೂ ಓದಿ: ಮುಂಬೈ ತಂಡದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ.. ಮೊನ್ನೆ ಸೂರ್ಯ-ಪಾಂಡ್ಯ ಮಧ್ಯೆ ಆಗಿದ್ದೇನು?

publive-image

36 ರನ್​ಗಳ ಅಂತರದಿಂದ ಸೋತ ಬಳಿಕ ಹಾರ್ದಿಕ್ ಪಾಂಡ್ಯ ಟಾಪ್ ಆರ್ಡರ್ ಬ್ಯಾಟರ್​​ಗಳ ಮೇಲೆ ಬೇಸರ ವ್ಯಕ್ತಪಡಿಸಿದರು. ಇದೀಗ ಪಾಂಡ್ಯ ಆಡಿದ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.

Advertisment

ಏನಂದ್ರು ಪಾಂಡ್ಯ..?

ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಎರಡೂ ಕಡೆ 15-20 ರನ್‌ಗಳ ಕೊರತೆ ಇತ್ತು ಎಂದು ಭಾವಿಸುತ್ತೇನೆ. ನಾವು ಮೈದಾನದಲ್ಲಿ ವೃತ್ತಿಪರರಾಗಿರಲಿಲ್ಲ, ನಾವು ಬೇಸಿಕ್ ತಪ್ಪುಗಳನ್ನು ಮಾಡಿದ್ದೇವೆ. ಅದರಿಂದ ನಾವು 20-25 ರನ್​​​​ಗಳಷ್ಟು ಬೆಲೆ ತೆತ್ತಿದ್ದೇವೆ.‌ ಟಿ20 ಗೇಮ್​ನಲ್ಲಿ ಅದು ಭಾರೀ ಪರಿಣಾಮ ಬೀರುತ್ತೆ. ಟಾಪ್​ ಆರ್ಡರ್​ ಬಗ್ಗೆ ಕಳವಳವೇನಿಲ್ಲ. ನಾವೆಲ್ಲರೂ ಈ ಸಮಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ. ಇದು ಆರಂಭಿಕ ಹಂತ. ಬ್ಯಾಟರ್‌ಗಳು ಜವಾಬ್ದಾರಿ ಹೊರಬೇಕಿದೆ. ಶೀಘ್ರದಲ್ಲೇ ಜವಾಬ್ದಾರಿ ತೆಗೆದುಕೊಳ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.

ನಾಯಕ ಪಾಂಡ್ಯ ಮುಂಬೈ ಸೋಲಿಗೆ ಪರೋಕ್ಷ ಟಾಪ್ ಆರ್ಡರ್​ ಬ್ಯಾಟರ್​ಗಳನ್ನೇ ಹೊಣೆಯಾಗಿಸಿದ್ರು. ಈ ಮಾತುಗಳೇ ಇದೀಗ ಮುಂಬೈ ಇಂಡಿಯನ್ಸ್​ ಕ್ಯಾಂಪ್​ನಲ್ಲಿ ಎಲ್ಲವೂ ಸರಿ ಇಲ್ವಾ ಎಂಬ ಅನುಮಾನವನ್ನ ಹುಟ್ಟು ಹಾಕಿದೆ. ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಒಟ್ಟು ಮೂರು ಪಂದ್ಯಗಳನ್ನ ಆಡಿದ್ದು, ಮೂರರಲ್ಲೂ ಸೋಲನ್ನು ಕಂಡಿದೆ.

ಇದನ್ನೂ ಓದಿ: ರಾತ್ರೋರಾತ್ರಿ CSK ಈ ಅಭಿಮಾನಿ ಫೇಮಸ್.. ಧೋನಿ ಔಟ್ ಆಗ್ತಿದ್ದಂತೆ ಕೋಪಿಸಿಕೊಂಡಿದ್ದು ಯಾರ ಮೇಲೆ..?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment