Advertisment

WATCH: ಇಸ್ರೋ ವಿಜ್ಞಾನಿಗಳಿಗೆ 3 ತಿಂಗಳಿಂದ ಸಂಬಳ ಸಿಕ್ಕಿಲ್ವಾ?; ಏನಿದು ವಿವಾದ? ಅಸಲಿ ವಿಷ್ಯ ಇಲ್ಲಿದೆ ನೋಡಿ

author-image
admin
Updated On
WATCH: ಇಸ್ರೋ ವಿಜ್ಞಾನಿಗಳಿಗೆ 3 ತಿಂಗಳಿಂದ ಸಂಬಳ ಸಿಕ್ಕಿಲ್ವಾ?; ಏನಿದು ವಿವಾದ? ಅಸಲಿ ವಿಷ್ಯ ಇಲ್ಲಿದೆ ನೋಡಿ
Advertisment
  • ಕೇಂದ್ರ ಸರ್ಕಾರ ಇಸ್ರೋ ವಿಜ್ಞಾನಿಗಳಿಗೆ ಸಂಬಳವೇ ಕೊಟ್ಟಿಲ್ವಾ?
  • ವೇತನದ ವಿವಾದಕ್ಕೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸ್ಪಷ್ಟನೆ
  • ಯಾರು ಈ ತೆಹ್ಸೀನ್ ಪೂನಾವಾಲಾ? ಯಾಕೀ ಹೇಳಿಕೆ ಕೊಟ್ರು

ಇಸ್ರೋ ವಿಜ್ಞಾನಿಗಳು ಹೊಸ ಮೈಲಿಗಲ್ಲು ಸಾಧಿಸಲು ಕಾತರರಾಗಿದ್ದಾರೆ. ಕೋಟ್ಯಾಂತರ ಭಾರತೀಯರು ಎದುರು ನೋಡ್ತಿರುವ ಚಂದ್ರಯಾನ-3 ಸಕ್ಸಸ್‌ಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಚಂದ್ರನ ಮೇಲೆ ಚಂದ್ರಯಾನ-3 ಸಾಫ್ಟ್‌ ಲ್ಯಾಂಡ್‌ ಆಗೋ ಭರವಸೆಯೂ ವಿಜ್ಞಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಐತಿಹಾಸಿಕ ಸಾಧನೆಗೆ ಕೌಂಟ್‌ಡೌನ್‌ ಶುರುವಾಗಿರುವಾಗಲೇ ಅಚ್ಚರಿಯ ಸಂಗತಿಯೊಂದು ವೈರಲ್ ಆಗಿದೆ.
ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisment

ಇದನ್ನೂ ಓದಿ: ಚಂದ್ರಯಾನ-3 ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್; ಇಸ್ರೋ ಸಾಧನೆಗೆ ಇನ್ನೊಂದೇ ಹೆಜ್ಜೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಸ್ರೋ ವಿಜ್ಞಾನಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳವೇ ಕೊಟ್ಟಿಲ್ಲ ಎಂದಿದ್ದಾರೆ. ಈ ಗಂಭೀರ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಸ್ಪಷ್ಟನೆ ನೀಡಿದೆ. ತೆಹ್ಸೀನ್ ಪೂನಾವಾಲಾ ಅವರು ಹೇಳಿರುವುದು ಸುಳ್ಳು ಸುದ್ದಿ. ಇದು ಶುದ್ಧ ಸುಳ್ಳು.. ಇಸ್ರೋ ವಿಜ್ಞಾನಿಗಳ ವೇತನ ನಿಲ್ಲಿಸಲಾಗಿಲ್ಲ. ವಿಜ್ಞಾನಿಗಳು ಪ್ರತಿ ತಿಂಗಳ ಕೊನೇ ದಿನ ತಮ್ಮ ಸಂಬಳವನ್ನು ಸ್ವೀಕರಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.

publive-image

ಇತ್ತೀಚೆಗೆ ತೆಹ್ಸೀನ್ ಪೂನಾವಾಲಾ ಅವರು ಪಾಡ್‌ಕಾಸ್ಟ್‌ನಲ್ಲಿ ಸಂದರ್ಶನ ನೀಡುವಾಗ ಕೇಂದ್ರ ಸರ್ಕಾರ ಇಸ್ರೋ ವಿಜ್ಞಾನಿಗಳಿಗೆ 3 ತಿಂಗಳ ಸಂಬಳವೇ ಕೊಟ್ಟಿಲ್ಲ. ಈ ವಿಚಾರ ಚರ್ಚೆಯಾಗಬೇಕು ಎಂದಿದ್ದರು. ತೆಹ್ಸೀನ್ ಪೂನಾವಾಲಾ ಅವರ ಈ ಹೇಳಿಕೆಯನ್ನು ಅವರ ಸಹೋದರ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕೂಡ ಖಂಡಿಸಿದ್ದಾರೆ. ನೀವು ಕಾಂಗ್ರೆಸ್‌ನ ಹಿಂಬಾಲಕರ ರೀತಿ ಹೇಳಿಕೆ ನೀಡಿದ್ದೀರಿ. ಇದು ಸತ್ಯಕ್ಕೆ ದೂರಾವಾಗಿದೆ. ಸಂಬಳ ಸಿಗದ 10 ಇಸ್ರೋ ವಿಜ್ಞಾನಿಗಳ ಹೆಸರನ್ನು ಬಹಿರಂಗ ಪಡಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

Advertisment

ಕಾಂಗ್ರೆಸ್ ಪಕ್ಷವನ್ನು ಆಗಾಗ ಸಮರ್ಥಿಸಿಕೊಳ್ಳುವ ತೆಹ್ಸೀನ್ ಪೂನಾವಾಲಾ ಅವರು ಏನೋ ಹೇಳಲು ಹೋಗಿ ಈಗ ಯಡವಟ್ಟು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಹೇಳಿಕೆಯನ್ನು ಮತ್ತೂ ಸಮರ್ಥಿಸಿಕೊಂಡಿದ್ದಾರೆ. ನಾನು ಹೇಳಿರುವುದು ಇಸ್ರೋ ವಿಜ್ಞಾನಿಗಳ ಪಾವತಿಯ ಬಗ್ಗೆ ಅಲ್ಲ. ಚಂದ್ರಯಾನ-3 ಯೋಜನೆಯಲ್ಲಿ ಕೆಲಸ ಮಾಡಿದ ಕೆಲವು ಎಂಜಿನಿಯರ್‌ಗಳಿಗೆ ವೇತನ ನೀಡಿಲ್ಲ. ಎಂಜಿನಿಯರ್‌ಗಳು ಕೂಡ ಇಸ್ರೋಗೆ ಸಂಬಂಧಪಟ್ಟವರು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಸ್ರೋ ವಿಜ್ಞಾನಿಗಳ ಈ ಸಂಬಳದ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment