/newsfirstlive-kannada/media/post_attachments/wp-content/uploads/2023/08/RAMULU.jpg)
2024 ರಲ್ಲಿ ನಡೆಯುವ ವಿಧಾನಪರಿಷತ್ ಚುನಾವಣೆ ರಾಜ್ಯ ಬಿಜೆಪಿ ತಯಾರಿ ಮಾಡಿಕೊಳ್ತಿದೆ. ಈ ಹಿನ್ನೆಲೆ 7 ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಬಿ. ಶ್ರೀರಾಮುಲು, ಸಿ.ಟಿ ರವಿ, ಆರ್.ಅಶೋಕ್, ಡಿ.ವಿ. ಸದಾನಂದಗೌಡ, ಕೆ.ಎಸ್. ಈಶ್ವರಪ್ಪ ಹಾಗೂ ಡಾ. ಸಿ.ಎನ್.ಅಶ್ವತ್ಥ್ನಾರಾಯಣ್ರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಯಾವ ಕ್ಷೇತ್ರಕ್ಕೆ ಯಾರು..?
- ಈಶಾನ್ಯ ಪದವೀಧರ ಕ್ಷೇತ್ರ- ಬಿ.ಶ್ರೀರಾಮುಲು
- ನೈರುತ್ಯ ಪದವೀಧರ ಕ್ಷೇತ್ರ- ಸಿ.ಟಿ ರವಿ
- ಬೆಂಗಳೂರು ಪದವೀಧರ ಕ್ಷೇತ್ರ-ಆರ್.ಅಶೋಕ್
- ನೈರುತ್ಯ ಶಿಕ್ಷಕರ ಕ್ಷೇತ್ರ-ಸಿ.ಟಿ.ರವಿ
- ಆಗ್ನೇಯ ಶಿಕ್ಷಕರ ಕ್ಷೇತ್ರ-ಡಿ.ವಿ.ಸದಾನಂದಗೌಡ
- ದಕ್ಷಿಣ ಶಿಕ್ಷಕರ ಕ್ಷೇತ್ರ-ಕೆ.ಎಸ್. ಈಶ್ವರಪ್ಪ
- ಬೆಂಗಳೂರು ಶಿಕ್ಷಕರ ಕ್ಷೇತ್ರ-ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ