/newsfirstlive-kannada/media/post_attachments/wp-content/uploads/2024/12/CT-Ravi-Lakshmi-Hebbalkar-1.jpg)
ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಘಟನೆಯ ಬಳಿಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೆ ಸಿಡಿದೆದ್ದಿದ್ದಾರೆ. ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರಿಗೆ ಸವಾಲು ಹಾಕಿದ್ದು, ಮಹತ್ವದ 2 ವಿಡಿಯೋಗಳನ್ನು ಇಂದು ರಿಲೀಸ್ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಳೆದ ಡಿಸೆಂಬರ್ 19ರಂದು ವಿಧಾನ ಪರಿಷತ್ನಲ್ಲಿ ಎಂಎಲ್‌ಸಿ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಹೀಗಾಗಿ ಅಶ್ಲೀಲ ಪದ ಬಳಸಿದ ಆ ಹೇಳಿಕೆಯ ವಿಡಿಯೋ ದಾಖಲೆ ರಿಲೀಸ್ ಮಾಡಿದ್ದೇನೆ ಎಂದಿದ್ದಾರೆ.
ವಿಧಾನಪರಿಷತ್‌ನಲ್ಲಿ ಎಂಎಲ್‌ಸಿ ಸಿ.ಟಿ ರವಿ ಅವರು ಮಾತನಾಡಿರುವ 2 ವಿಡಿಯೋ ರಿಲೀಸ್ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್ ಅಂದಿದ್ದಾರೆ. ತನ್ನ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಎಂದು ಗರಂ ಆಗಿದ್ದಾರೆ. ನೀವು ನನಗೆ ಆ ಪದ ಬಳಸಿದ್ದೀರಾ, ಬಹಳ ನೊಂದಿದ್ದೇನೆ. ಇಂತಹ ನೂರು ಸಿ.ಟಿ ರವಿಯನ್ನ ಎದುರಿಸಲು ನಾನು ಸಿದ್ಧ. ನನ್ನ ಬಳಿ ಎಲ್ಲಾ ದಾಖಲೆಗಳಿವೆ.
ಯಾವುದೇ ಕಾರಣಕ್ಕೂ ಸಿ.ಟಿ.ರವಿಯನ್ನ ಕ್ಷಮಿಸೋ ಪ್ರಶ್ನೆಯಿಲ್ಲ. ಮಹಿಳಾ ಕುಲವನ್ನ ಅವಮಾನಿಸಿದ ರವಿ ವಿರುದ್ಧ ಹೋರಾಡುತ್ತೇನೆ. ಸಿ.ಟಿ ರವಿಗೆ ಶಿಕ್ಷೆ ಆಗೋವರೆಗೂ ನಾನು ಸುಮ್ನೆ ಕೂರೋದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಶಪಥ ಮಾಡಿದ್ದಾರೆ.
ಮಾತು ಮುಂದುವರಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾನು ಕಾನೂನು ಹೋರಾಟವನ್ನ ಮುಂದುವರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅನ್ಯಾಯವಾಗಿದೆ ಎಂದು ನ್ಯಾಯ ಕೇಳುತ್ತೇನೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: BBK11; ಚೈತ್ರಾ- ಐಶ್ವರ್ಯ ನಡುವೆ ಬಿಸಿ ಬಿಸಿ ವಾಕ್ಸಮರ.. ಬಳೆಗಳನ್ನ ಒಡೆದುಕೊಂಡ ಸ್ಪರ್ಧಿ
ಬಿಜೆಪಿ ನಾಯಕರನ್ನ ನೋಡಿದರೆ ನನಗೆ ನಾಚಿಕೆ ಆಗುತ್ತೆ. ಮಹಿಳೆಯನ್ನ ನಿಂದಿಸಿದ ವ್ಯಕ್ತಿಗೆ ಬೆಂಬಲ ನೀಡುತ್ತಿದ್ದಾರೆ. ಸಿ.ಟಿ.ರವಿಗೆ ಅವರ ತಾಯಿ, ಹೆಂಡತಿಯಾದ್ರೂ ಸ್ವಲ್ಪ ಹೇಳಿ. ಆತ್ಮಸಾಕ್ಷಿ ಅಂತ ಇದ್ರೆ ತಮ್ಮ ತಪ್ಪಿನ ಅರಿವು ಮಾಡಿಕೊಳ್ಳಲಿ. ಒಂದು ಮಹಿಳೆ ಜೊತೆಗೆ ಸಚಿವೆಗೆ ಅನ್ಯಾಯವಾಗಿದೆ. ಜನ ಛೀಮಾರಿ ಹಾಕ್ತಾರೆ ಅಂತ ಸರ್ಕಾರವನ್ನ ದೂರುತ್ತಿದ್ದಾರೆ. ಮೂಲ ವಿಚಾರವನ್ನ ದಿಕ್ಕು ತಪ್ಪಿಸೋ ಪ್ರಯತ್ನ ಮಾಡ್ತಿದ್ದಾರಾ? ಬಿಜೆಪಿ ನಾಯಕರಿಗೆ ನಾಚಿಕೆ ಆಗ್ಬೇಕು, ಗೋಮುಖ ವ್ಯಾಘ್ರಗಳು ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ