Advertisment

Watch: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​ಗೆ ಪ್ರೀತಿಯಿಂದ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ ​​

author-image
Bheemappa
Updated On
ಕಾಂಗ್ರೆಸ್​ನಿಂದಲೂ ಇವತ್ತೇ 2ನೇ ಪಟ್ಟಿ ರಿಲೀಸ್ ನಿರೀಕ್ಷೆ.. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಿದ್ದು-DKS ನಡುವೆ ಒಮ್ಮತ?
Advertisment
  • ‘ಮೋದಿ ಸ್ವಾಗತ’ ವಿವಾದಕ್ಕೆ ಖುದ್ದು ಪ್ರಧಾನಿಯೇ ತೆರೆ
  • ಮೋದಿ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದು ಯಾಕೆ?
  • ಪ್ರಧಾನಿ ಮೋದಿ ಸ್ವಾಗತಿಸಲು ಸಿಎಂ, ಡಿಸಿಎಂ ಏಕೆ ಬರಲಿಲ್ಲ?

ಬೆಂಗಳೂರು: ಚಂದ್ರಯಾನ-3 ಸಕ್ಸಸ್ ಆದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪೀಣ್ಯದ ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದರು. ಇದೇ ವೇಳೆ ಪ್ರಧಾನಿಯವರು ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisment

ಚಂದ್ರಯಾನ-3 ಸಕ್ಸಸ್ ಆಗುವ ವೇಳೆ ನಾನು ವಿದೇಶದಲ್ಲಿದ್ದೆ. ಹೀಗಾಗಿ ವಿಜ್ಞಾನಿಗಳನ್ನ ತಕ್ಷಣಕ್ಕೆ ಬಂದು ಅಭಿನಂದಿಸಲು ಆಗಲಿಲ್ಲ. ನನ್ನ ಅನುಪಸ್ಥಿತಿಯಲ್ಲೂ ಇಸ್ರೋ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ತಮ್ಮನ್ನು ಸ್ವಾಗತಿಸಲು ರಾಜ್ಯಪಾಲ, ಸಿಎಂ, ಡಿಸಿಎಂ ಏಕೆ ಬರಲಿಲ್ಲ ಎಂಬುದಕ್ಕೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದರು. ವಿದೇಶದಿಂದ ನೇರ ಬೆಂಗಳೂರಿಗೆ ಬರುತ್ತಿದ್ದೇನೆ. ಆದ್ರೆ ಎಷ್ಟು ಗಂಟೆಗೆ ಬೆಂಗಳೂರಿಗೆ ತಲುಪುತ್ತೇನೆಂದು ತಿಳಿದಿರಲಿಲ್ಲ. ಹೀಗಾಗಿ ಪ್ರೋಟೋಕಾಲ್ ಪೂರೈಸದಂತೆ ನಾನು ಅವರಿಗೆ ಹೇಳಿದ್ದೆ. ನಾನು ಬರುವುದಕ್ಕಾಗಿಯೇ ಅಷ್ಟೊಂದು ಬೆಳಗಿನ ಜಾವ ಎದ್ದು ತೊಂದರೆ ತೆಗೆದುಕೊಳ್ಳಬೇಡಿ. ಇಸ್ರೋ ವಿಜ್ಞಾನಿಗಳನ್ನು ಭೇಟಿಯಾಗಿ ನಾನು ವಾಪಸ್ ಆಗುತ್ತೇನೆ ಎಂದಿದ್ದೆ. ಹೀಗಾಗಿ ಅವರು ಸ್ವಾಗತಿಸಲು ಏರ್ಫೋರ್ಟ್​ಗೆ ಬಂದಿರಲಿಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment