Advertisment

ಮುರುಘಾ ಶ್ರೀಗೆ ಮತ್ತೊಂದು ಸಂಕಷ್ಟದ ಆತಂಕ; ಇವತ್ತು ಶಿವಮೂರ್ತಿ ಶರಣರಿಗೆ ಬಿಗ್​ ಡೇ

author-image
Veena Gangani
Updated On
ಮುರುಘಾ ಶ್ರೀ ಬಂಧನಕ್ಕೆ ಹೊರಟ ಪೊಲೀಸರು.. ಬೇಲ್ ಸಿಕ್ಕ ಮೇಲೆ ಸ್ವಾಮೀಜಿ ಮಾಡ್ಕೊಂಡ ಯಡವಟ್ಟು ಏನು?
Advertisment
  • ಜೈಲಿನಿಂದ ಬಿಡುಗಡೆಯಾದರೂ ಮುರುಘಾ ಶ್ರೀಗೆ ಕಾಡಿದೆ ಚಿಂತೆ
  • ಇಂದು 2ನೇ ಪೋಕ್ಸೊ ಕೇಸ್ ವಿಚಾರಣೆ, ಸ್ವಾಮೀಜಿಗೆ ಆತಂಕ
  • ಮತ್ತೆ ಬಂಧನದ ಭೀತಿಯಲ್ಲಿ ಮುರುಘಾ ಶರಣರು

14 ತಿಂಗಳ ಬಳಿಕ ಜೈಲಿನಿಂದ ಬಂಧಮುಕ್ತ ಆಗಿರುವ ಮುರುಘಾ ಸ್ವಾಮೀಜಿ ಸದ್ಯ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೈಲಿನಿಂದ ಬಿಡುಗಡೆ ಆದರೂ ಸ್ವಾಮೀಜಿಗೆ ಮತ್ತೊಂದು ಚಿಂತೆ ಆವರಿಸಿದೆ. ಸದ್ಯ ಒಂದು ಕೇಸ್​​​ನಲ್ಲಿ ಜಾಮೀನು ಪಡೆದಿರೋ ಸ್ವಾಮೀಜಿಯನ್ನ ಮತ್ತೊಂದು ಪ್ರಕರಣ ಚಿಂತೆಗೆ ದೂಡಿದೆ.

Advertisment

publive-image

2ನೇ ಪೋಕ್ಸೊ ಕೇಸ್ ವಿಚಾರಣೆ, ಸ್ವಾಮೀಜಿಗೆ ಆತಂಕ!

ಜೈಲಿನಿಂದ ಬಿಡುಗಡೆಯಾದ ಬಳಿಕ ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿದ್ದ ಶಿವಮೂರ್ತಿ ಮುರುಘಾ ಸ್ವಾಮೀಜಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಸ್ವಾಮೀಜಿ 2ನೇ ಪೋಕ್ಸೋ ಪ್ರಕರಣ ಸಂಬಂಧ ಚಿತ್ರದುರ್ಗ ಕೋರ್ಟ್ ವಿಡಿಯೋ ಕಾನ್ಫರೆನ್ಸ್​​ನಲ್ಲಿ ವಿಚಾರಣೆ ನಡೆಸಿತ್ತು. ಸ್ವಾಮೀಜಿಯನ್ನು ಬಾಡಿ ವಾರೆಂಟ್​ ಮೇಲೆ ಕಸ್ಟಡಿಗೆ ಒಪ್ಪಿಸಬೇಕು ಅಂತ ಪೊಲೀಸರು ಮನವಿ ಮಾಡಿದ್ದರು. ಹೈಕೋರ್ಟ್​ ಆದೇಶ ಉಲ್ಲಂಘನೆ ಆಗುತ್ತೆ ಅಂತ ಆರೋಪಿಯ ಸದ್ಯದ ವಿಳಾಸದ ಬಗ್ಗೆ ಮಾಹಿತಿ ನೀಡುವಂತೆ ಸ್ವಾಮೀಜಿ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. 2ನೇ ಕೇಸ್​​​​ನಲ್ಲಿ ಇಂದು ಮುರುಘಾ ಸ್ವಾಮೀಜಿ ಭವಿಷ್ಯ ನಿರ್ಧಾರ ಆಗಲಿದ್ದು ಮತ್ತೆ ಅರೆಸ್ಟ್ ಆಗುವ ಆತಂಕದಲ್ಲಿದ್ದಾರೆ.

publive-image

ಪ್ರಕರಣ ಸಂಬಂಧ ವಕೀಲರಿಂದ ಮಾಹಿತಿ ಪಡೆದ ಸ್ವಾಮೀಜಿ

2ನೇ ಪೋಕ್ಸೋ ಪ್ರಕರಣ ಕುರಿತು ಸ್ವಾಮೀಜಿ ವಕೀಲರಿಂದ ಮಾಹಿತಿ ಪಡೆದಿದ್ದಾರೆ. ಜೈಲಿನಿಂದ ಬಿಡುಗಡೆಯಾದ್ರೂ ನೆಮ್ಮದಿ ಸಿಕ್ಕಿಲ್ಲ. ಇಂದು 2ನೇ ಪ್ರಕರಣ ಏನಾಗಬಹುದು ಎಂದು ಮರುಘಾ ಶ್ರೀಗಳು ಆತಂಕಕ್ಕೆ ಜಾರಿದ್ದಾರೆ. ಇನ್ನು ಇವತ್ತು ಬೆಳಗ್ಗೆಯೇ ಎದ್ದ ಸ್ವಾಮೀಜಿ ವಾಕಿಂಗ್ ಮುಗಿಸಿ ಲಿಂಗಪೂಜೆ ನೇರವೇರಿಸಿದ್ದಾರೆ. ಸ್ವಾಮೀಜಿಯ ಬೇಕು-ಬೇಡಗಳನ್ನು ಶಿಷ್ಯ ಬಸವ ಪ್ರಭು ಒದಗಿಸಿದ್ದಾರೆ. ವಿರಕ್ತಮಠದಲ್ಲಿ ಕೆಲ ಭಕ್ತರನ್ನು ಸ್ವಾಮೀಜಿ ಭೇಟಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಹೊರ ಜಿಲ್ಲೆಗಳಿಂದಲೂ ಹೆಚ್ಚು ಭಕ್ತರಿಂದ ಬರುವ ಕಾರಣ ಕಿರಿಕಿರಿ ತಪ್ಪಿಸಿಕೊಳ್ಳಲು ಸ್ವಾಮೀಜಿ ಬೇರೆ ಕಡೆ ವಾಸ್ತವ್ಯ ಹೂಡ್ತಾರಾ ಅನ್ನೋ ಚರ್ಚೆಯೂ ನಡೆದಿದೆ. ಅದೇನೇ ಇರಲಿ 14 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ಸ್ವಾಮೀಜಿ ಚಿತ್ತ ನಾಳಿನ ಕೋರ್ಟ್​ ವಿಚಾರಣೆಯತ್ತ ನೆಟ್ಟಿದೆ. ಒಂದು ವೇಳೆ ಕೋರ್ಟ್ ಜಾಮೀನು ನೀಡಿದ್ರೆ ಸ್ವಾಮೀಜಿ ರಿಲೀಫ್ ಆಗಲಿದ್ದಾರೆ. ವ್ಯತಿರಿಕ್ತ ತೀರ್ಪು ಬಂದ್ರೆ ಮತ್ತೆ ಬಂಧನ ಆಗುವ ಸಾಧ್ಯತೆ ಇದ್ದು ಸ್ವಾಮೀಜಿ ಟೆನ್ಶನ್ ಹೆಚ್ಚಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment