Advertisment

ಜಸ್ಟ್ 26 ವರ್ಷಕ್ಕೆ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸ್ಥಾನ.. 2 ಬಾರಿ ಮುಖ್ಯಮಂತ್ರಿಯಾಗಿ ಸೇವೆ.. ಉಮ್ಮನ್ ಚಾಂಡಿ ರಾಜಕೀಯ ಜರ್ನಿ ರೋಚಕ..!

author-image
Ganesh
Updated On
ಜಸ್ಟ್ 26 ವರ್ಷಕ್ಕೆ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸ್ಥಾನ.. 2 ಬಾರಿ ಮುಖ್ಯಮಂತ್ರಿಯಾಗಿ ಸೇವೆ.. ಉಮ್ಮನ್ ಚಾಂಡಿ ರಾಜಕೀಯ ಜರ್ನಿ ರೋಚಕ..!
Advertisment
  • 50ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ರಾಜಕೀಯ ಬದುಕು
  • 11 ಬಾರಿ ಚುನಾವಣೆಯಲ್ಲಿ ಗೆದ್ದು ಕೇರಳದಲ್ಲಿ ಹೊಸ ಇತಿಹಾಸ
  • ಚಾಂಡಿ ಇನ್ನು ನೆನಪು ಮಾತ್ರ, ಶೋಕದಲ್ಲಿ ಮುಳುಗಿದ ಕಾಂಗ್ರೆಸ್

ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ನ ಹಿರಿಯ ನಾಯಕ ಉಮ್ಮನ್ ಚಾಂಡಿ (79) ಅವರು ನಿಧನರಾಗಿದ್ದಾರೆ. ಕ್ಯಾನ್ಸರ್​​​ನಿಂದ ಬಳಲುತ್ತಿದ್ದ ಚಾಂಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ಅವರ ಪುತ್ರ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

Advertisment

ಉಮ್ಮನ್ ಚಾಂಡಿ ರಾಜಕೀಯ ಜರ್ನಿ

ಎರಡು ಬಾರಿ ಮುಖ್ಯಮಂತ್ರಿಯಾಗಿ ಕೇರಳದ ಜನರ ಒಳಿತಿಗಾಗಿ ಶ್ರಮಿಸಿದ್ದರು. 2004 ರಿಂದ 2006 ಹಾಗೂ 2011ರಿಂದ 2016 ಅವಧಿಯಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದರು. ಮಾತ್ರವಲ್ಲ, 2006 ರಿಂದ 2011ರವರೆಗೆ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದರು.

publive-image

ಬರೋಬ್ಬರಿ 11 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಚಾಂಡಿ, 50 ವರ್ಷಗಳ ಕಾಲ ಕೇರಳದಲ್ಲಿ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ್ದರು. ಎರಡು ಬಾರಿ ಮುಖ್ಯಮಂತ್ರಿ ಹಾಗೂ ನಾಲ್ಕು ಬಾರಿ ಸಚಿವರಾಗಿ ರಾಜ್ಯದಲ್ಲಿ ಆಡಳಿತ ನಡೆಸಿದ್ದರು. 1970ರಲ್ಲಿ ಕೊಟ್ಟಾಯಂ ಜಿಲ್ಲೆಯ ಪುತ್ತುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದರು. ಅಲ್ಲಿಂದ ಸೋಲನ್ನೇ ಕಾಣದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬರೋಬ್ಬರಿ 11 ಬಾರಿ ಗೆಲುವು ಕಂಡಿದ್ದ ಚಾಂಡಿ, ಕೇರಳದಲ್ಲಿ ಅತಿ ಹೆಚ್ಚು ಬಾರಿ ಆರಿಸಿ ಬಂದಿದ್ದ ಏಕೈಕ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಉಮನ್ ಚಾಂಡಿ ಪಾತ್ರರಾಗಿದ್ದರು.

ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ

ಪುತ್ತುಪಳ್ಳಿಯ St ಜಾರ್ಜ್​​ ಹೈಸ್ಕೂಲ್​​ನಲ್ಲಿ ಓದಿದ್ದ ಚಾಂಡಿ, ಕಾಲೇಜು ದಿನಗಳನ್ನು ಕೊಟ್ಟಾಯಂನಲ್ಲಿರುವ CMS ಕಾಲೇಜಿನಲ್ಲಿ ಮುಗಿಸಿದ್ದರು. ನಂತರ ಎರ್ನಾಕುಲಂನಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದರು. ಬಳಿಕ ಕೇರಳ ಸ್ಟುಡೆಂಟ್ ಯೂನಿಯನ್ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕಿದ್ದ ಉಮ್ಮನ್ ಚಾಂಡಿ, ಒಂದು ದಿನ ಕೇರಳದ ಮುಖ್ಯಮಂತ್ರಿಯಾಗಿ ಮೆರೆದಿದ್ದರು.

Advertisment

publive-image

ಹಣಕಾಸು ಇಲಾಖೆ ಬಗ್ಗೆ ಹೆಚ್ಚು ಆಸಕ್ತಿ

ಹಣಕಾಸು ಮತ್ತು ಕಾರ್ಮಿಕ ಇಲಾಖೆ ಅವರ ನೆಚ್ಚಿನ ಕ್ಷೇತ್ರವಾಗಿತ್ತು. ಜೂನ್ 6, 2018ರಂದು ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿ ಚಾಂಡಿಯನ್ನು ನೇಮಕ ಮಾಡಿದ್ದರು. ಮಾತ್ರವಲ್ಲ, ಆಂಧ್ರಪ್ರದೇಶದ ಕಾಂಗ್ರೆಸ್​ ಉಸ್ತುವಾರಿಯಾಗಿಯೂ ನಿಯುಕ್ತಿಗೊಳಿಸಿದ್ದರು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಅದರ ವಿರುದ್ಧ ಹೋರಾಟವನ್ನು ಸಮರ್ಥವಾಗಿ ನಿಭಾಯಿಸಿದ್ದರ ಹಿನ್ನೆಲೆಯಲ್ಲಿ 2013ರಲ್ಲಿ ವಿಶ್ವಸಂಸ್ಥೆಯು ಅವರನ್ನು ಗೌರವಿಸಿತ್ತು. United Nations Public Service Award ನೀಡಿ ಚಾಂಡಿ ಅವರನ್ನು ಗೌರವಿಸಿತ್ತು.

publive-image

ಚಾಂಡಿ ನಿಧನ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕರು ಸೇರಿ ದೇಶದ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಉಮ್ಮನ್ ಚಾಂಡಿ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಓರ್ವ ಪುತ್ರಿ ವಿದೇಶದಲ್ಲಿದ್ದು, ಇನ್ನಿಬ್ಬರು ಕೇರಳದಲ್ಲಿಯೇ ಇದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಚಾಂಡಿ, ಇತ್ತೀಚೆಗಿನ ದಿನಗಳಲ್ಲಿ ಹೋಂ ಕೇರ್​​ ಸರ್ವೀಸ್​​ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರು.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment