/newsfirstlive-kannada/media/post_attachments/wp-content/uploads/2025/01/GOUTHAM_GAMBHIR.jpg)
ಹೇಳೋದೊಂದು ಮಾಡೋದೊಂದು. ಬೆಸ್ಟ್ ಎಕ್ಸಾಂಪಲ್ ಗೌತಮ್ ಗಂಭೀರ್ ಅನ್ನೋದ್ರಲ್ಲಿ ಡೌಟಿಲ್ಲ. ಇದಕ್ಕೆ ಕಾರಣ ಯಶಸ್ವಿ ಜೈಸ್ವಾಲ್ ವಿಚಾರದಲ್ಲಿ ತೆಗೆದುಕೊಂಡ ನಿಲುವು. ಅಷ್ಟಕ್ಕೂ ಗಂಭೀರ್ ನಿಲುವಿಗೂ ಜೈಸ್ವಾಲ್ಗೂ ಏನ್ ಸಂಬಂಧ?
ಏಷ್ಯಾಕಪ್ಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಈ ಮಿನಿ ಸಮರಕ್ಕೆ ಆಟಗಾರರು ಅಭ್ಯಾಸದ ಅಖಾಡಕ್ಕಿಳಿದಿದ್ದಾರೆ. ತಂಡ ಪ್ರಕಟವಾಗಿ ವಾರ ಕಳೆದ್ರೂ ಆಯ್ಕೆಯಲ್ಲಾದ ಪ್ರಮಾದಗಳ ಟಾಕ್ ನಿಂತಿಲ್ಲ. ಪ್ರಮುಖವಾಗಿ ಜೈಸ್ವಾಲ್ ವಿಷ್ಯದಲ್ಲಿ ತೆಗೆದುಕೊಂಡ ನಿಲುವು. ಇವತ್ತಿಗೂ ಪ್ರಶ್ನಾರ್ಥಕವೇ ಆಗಿದೆ. ಇದೇ ನಿಲುವು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಇಬ್ಬಗೆ ನೀತಿಯನ್ನ ಬಟಾಬಯಲು ಮಾಡಿದೆ. ಇದಕ್ಕೆ ಕಾರಣ ಹಿಂದೆ ಗಂಭೀರ್ ನೀಡಿದ್ದ ಒಂದೇ ಒಂದು ಹೇಳಿಕೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಹಾದಿಯಲ್ಲೇ ಹಾರ್ದಿಕ್ ಪಾಂಡ್ಯ.. ಏನದು?
ಯಶಸ್ವಿ ಜೈಸ್ವಾಲ್ ಟಿ20 ತಂಡದಲ್ಲಿ ಇರಬೇಕು ಎಂದು ನಂಬುತ್ತೇನೆ. ಕೇವಲ ಒಂದು ಟೂರ್ನಮೆಂಟ್‌ಗೆ ಅಲ್ಲ. ಮುಂದಿನ ವಿಶ್ವಕಪ್‌ಗೂ ಸಹ ಇರಬೇಕು. ಜೈಸ್ವಾಲ್ ಮೂರು ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾಕ್ಕೆ ಆಡಬೇಕು
ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೋಚ್
ಇಷ್ಟಕ್ಕೆ ಸುಮ್ಮನಾಗದ ಗೌತಮ್ ಗಂಭೀರ್, 2024ರ ಟಿ20 ವಿಶ್ವಕಪ್ ಆಯ್ಕೆ ಕುರಿತಾಗಿಯೇ ಸ್ವಾಗತ ಮಾಡಿದ್ರು. ಕೇವಲ ಒಂದು ಟೂರ್ನಿಯಲ್ಲ. ಮುಂದೇನು ಆಡಬೇಕು ಅಂತಾನೇ ಆರ್ಡರ್ ಮಾಡಿದ್ರು. ಆದ್ರೀಗ ಇದೇ ಹೆಡ್ ಕೋಚ್ ಗಂಭೀರ್ ಮುಖವಾಡ ಕಳಚುವಂತೆ ಮಾಡಿದೆ.
ಇವತ್ತು ಏನಾಯ್ತು?
2024ರ ಟಿ20 ವಿಶ್ವಕಪ್ನಲ್ಲಿ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದರು. ಹೀಗಾಗಿ ಏಷ್ಯಾಕಪ್ನಲ್ಲಿ ಮುಂಬೈಕರ್ಗೆ ಸುಲಭಕ್ಕೆ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಸ್ಥಾನದ ಜೊತೆಗೆ ಡಬಲ್ ಗುಡ್ನ್ಯೂಸ್ ಸಿಕ್ಕಿದ್ದು ಗಿಲ್ಗೆ ಆಗಿತ್ತು. 2024ರ ವಿಶ್ವಕಪ್ನಲ್ಲಿ ಸ್ಥಾನವನ್ನೇ ಪಡೆಯದ ಶುಭ್ಮನ್, ಜೈಸ್ವಾಲ್ನ ಓವರ್ ಟೇಕ್ ಮಾಡೋದು ಅಷ್ಟು ಸುಲಭದ್ದಲ್ಲ. ಸೆಲೆಕ್ಷನ್ ಕಮಿಟಿ ಜೈಸ್ವಾಲ್ಗೆ ಕೊಕ್ ನೀಡಿ ಶುಭ್ಮನ್ಗೆ ಅಸ್ತು ಎಂದಿದೆ. ಇದೀಗ ಇದೇ ಹೆಡ್ ಕೋಚ್ ಗೌತಮ್ ಗಂಭೀರ್, ವಿಶ್ವಕಪ್ ಅಲ್ಲ.. ಏಷ್ಯಾಕಪ್ನಲ್ಲೇ ಸ್ಥಾನ ನೀಡದೆ ಅನ್ಯಾಯ ಮಾಡಿದೆ. ಓಪನರ್ ಸ್ಲಾಟ್ಗೆ ಸ್ಟ್ರಾಂಗ್ ಕಂಟೆಂಡರ್ ಆಗಿದ್ದ ಜೈಸ್ವಾಲ್ಗೆ ಯಾಕಿಲ್ಲಾ ಸ್ಥಾನ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್ಗೆ ದ್ರಾವಿಡ್ ಶಾಕ್; ಕೋಚ್ ಹುದ್ದೆಗೆ ದಿಢೀರ್ ರಾಜೀನಾಮೆ..!
ಉತ್ತಮ ಪ್ರದರ್ಶನ ನೀಡಲಿಲ್ವಾ ಜೈಸ್ವಾಲ್?
ಓಪನರ್ ಸ್ಲಾಟ್ಗೆ ಬೆಸ್ಟ್ ಅಂಡ್ ಪರ್ಫೆಕ್ಟ್ ಚಾಯ್ಸ್. ಯಾರಂದ್ರೆ ಜೈಸ್ವಾಲ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಜೈಸ್ವಾಲ್ ಆಯ್ಕೆಗೆ ಐಪಿಎಲ್ ಪ್ರದರ್ಶನ ಹಿನ್ನಡೆ ಆಯ್ತಾ ಅಂದ್ರೆ ನಿಜಕ್ಕೂ ಇಲ್ಲ. ಕಳೆದ ಐಪಿಎಲ್ ಸೀಸನ್ಗಳಿಂದಲೂ ಜೈಸ್ವಾಲ್ ರನ್ ಹೊಳೆಯನ್ನೇ ಹರಿಸಿದ್ದಾರೆ.
ಇದನ್ನೂ ಓದಿ: ಬಿಸಿಸಿಐನ ಈ ನಡವಳಿಕೆ ಸರಿಯಿಲ್ಲ.. ದಿಗ್ಗಜರಿಗೆ ಕನಿಷ್ಠ ಗೌರವವೂ ಇಲ್ಲದಾಯಿತೇ..?
/filters:format(webp)/newsfirstlive-kannada/media/media_files/2025/08/12/gautam-gambhir-2025-08-12-15-35-21.jpg)
2023ರ ಐಪಿಎಲ್ನಲ್ಲಿ 14 ಪಂದ್ಯಗಳನ್ನಾಡಿದ್ದ ಯಶಸ್ವಿ ಜೈಸ್ವಾಲ್, 163.61ರ ಸ್ಟ್ರೈಕ್ ರೇಟ್‌ನಲ್ಲಿ 625 ರನ್ ಸಿಡಿಸಿದ್ರೆ, 2024ರ ಐಪಿಎಲ್ನಲ್ಲಿ 16 ಪಂದ್ಯಗಳನ್ನಾಡಿದ್ದ ಜೈಸ್ವಾಲ್, 155.9ರ ಸ್ಟ್ರೈಕ್ರೇಟ್ನಲ್ಲಿ 435 ರನ್ ಕೊಳ್ಳೆ ಹೊಡೆದಿದ್ದರು. 2025ರ ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಿಂದ 559 ರನ್ ಗಳಿಸಿದ ಜೈಸ್ವಾಲ್, 159.71ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಝಳಪಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಇದೇ ಫಿಯರ್ ಲೆಸ್ ಬ್ಯಾಟಿಂಗ್ನಿಂದಲೇ ಸದ್ದು ಮಾಡಿದ್ದಾರೆ.
ಟಿ20ಯಲ್ಲಿ ಯಶಸ್ವಿ ಜೈಸ್ವಾಲ್
ಟೀಮ್ ಇಂಡಿಯಾ ಪರ 23 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್, 36.15ರ ಬ್ಯಾಟಿಂಗ್ ಅವರೇಜ್ನಲ್ಲಿ 723 ರನ್ ಗಳಿಸಿದ್ದಾರೆ. 164.31ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. ಸ್ಥಾನ ಸಿಗದಿರುವುದು ನಿಜಕ್ಕೂ ವಿಪರ್ಯಾಸ.
ಮತ್ಯಾಕೆ ಅನ್ಯಾಯ?
ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಟಿ20ಯಲ್ಲಿ ರನ್ ಗಳಿಸಿದ್ದಾರೆ. ಇಂಪ್ಯಾಕ್ಟ್ ಫುಲ್ ಸ್ಟ್ರೈಕ್ರೇಟ್ ಇದೆ. ಆರಂಭದಿಂದಲೇ ಹೊಡಿಬಡಿ ಆಟವಾಡುವ ಜೈಸ್ವಾಲ್, ಟಿ20ಗೆ ಫಸ್ಟ್ ಚಾಯ್ಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾದ್ರೂ ಆಯ್ಕೆ ಮಾಡದಿರುವುದು ಟೀಮ್ ಇಂಡಿಯಾಕ್ಕಾದ ನಷ್ಟ. ಏಷ್ಯಾಕಪ್ನಲ್ಲೇ ಜೈಸ್ವಾಲ್ಗೆ ಸ್ಥಾನ ನೀಡದಿರುವುದು ಹೊಸ ಪ್ರಶ್ನೆ ಹುಟ್ಟುಹಾಕಿದೆ. ಅದೇ 2026ರ ಟಿ20 ವಿಶ್ವಕಪ್.
ಇದನ್ನೂ ಓದಿ:ಶ್ರೀಶಾಂತ್ಗೆ ಭಜ್ಜಿ ಹೊಡೆದಿದ್ದ ವಿಡಿಯೋ ರಿವೀಲ್ ಮಾಡಿದ ಲಲಿತ್ ಮೋದಿ VIDEO
2026ರ ಟಿ20 ವಿಶ್ವಕಪ್ಗೆ ಜಸ್ಟ್ 6 ತಿಂಗಳಷ್ಟೇ ಇದೆ. ಈ ಏಷ್ಯಾಕಪ್, 2026ರ ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡೇ ಪ್ರಕಟಿಸಲಾಗಿದೆ. ಜೈಸ್ವಾಲ್ಗೆ ಸ್ಥಾನ ಸಿಗದಿರುವುದು, ಟಿ20 ವಿಶ್ವಕಪ್ ಪ್ಲಾನ್ನಲ್ಲಿ ಜೈಸ್ವಾಲ್ ಇಲ್ಲ ಎಂಬುವುದರ ಸಂದೇಶವಲ್ದೇ ಮತ್ತೇನು? ಕೋಚ್ ಅಲ್ದಿದ್ದಾಗ ಜೈಸ್ವಾಲ್ ಟಿ20 ಆಡಬೇಕು. ಟಿ20 ವಿಶ್ವಕಪ್ ಆಡಬೇಕು ಅಂತಿದ್ದ ಗಂಭೀರ್, ಈಗ ಆ ಜೈಸ್ವಾಲ್ರನ್ನೇ ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ.
ಇದನ್ನೂ ಓದಿ: ಕೊಹ್ಲಿ ನಿವೃತ್ತಿಯಿಂದ ಕೋಟಿ ಕೋಟಿ ಲಾಸ್.. ಮತ್ತೊಬ್ಬ ಸ್ಟಾರ್ಗೆ ಪಟ್ಟಾಭಿಷೇಕ ಮಾಡಲು BCCI ಪ್ಲಾನ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ