Advertisment

ಶಿರಸಿಯಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ಒಂದು ಅನಾಥಾಶ್ರಮ.. ಇವರ ಸೇವೆಗೆ ಸೆಲ್ಯೂಟ್ ಹೊಡೆಯಲೇಬೇಕು..!

ಹಿಮ ಪ್ರದೇಶಗಳಲ್ಲಿ ವಾಸಿಸುವ ಯಾಕ್ ಮೃಗಗಳನ್ನು ಕರ್ನಾಟಕದಲ್ಲೂ ಕಣ್ತುಂಬಿಕೊಳ್ಳಬಹುದು. ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಲೆನಾಡ ಹೆಬ್ಬಾಗಿಲು ಶಿರಸಿಗೆ ಯಾಕ್ ಮೃಗಗಳು ಆಗಮಿಸಿವೆ. ಯಾಕ್ ಮೃಗಗಳನ್ನ ತಂದು ಸಾಕುವ ಧೈರ್ಯ ತೋರಿಸಿದ್ದಲ್ಲದೇ ಯಶಸ್ವಿಯಾಗಿ ಮಾಡುತ್ತಿದೆ ಅಮೇಜಿಂಗ್ ಪೆಟ್ ಪ್ಲ್ಯಾನೆಟ್.

author-image
Ganesh Kerekuli
amazing pet planet sirsi (4)
Advertisment
  • ಅನಾಥ ಜೀವಗಳ ಪಾಲಿನ ಸ್ವರ್ಗ ಇದು
  • ಶಿರಸಿಗೆ ಯಾಕ್ ಮೃಗಗಳು ಆಗಮಿಸಿವೆ, ನೀವೂ ನೋಡಬಹುದು
  • ಕಾಲು, ಕಣ್ಣು ಇಲ್ಲದ ಪ್ರಾಣಿಗಳಿಗೆ ಹೊಸ ಆಸರೆ

ಹಿಮ ಪ್ರದೇಶಗಳಲ್ಲಿ ವಾಸಿಸುವ ಯಾಕ್ ಮೃಗಗಳನ್ನು ಕರ್ನಾಟಕದಲ್ಲೂ ಕಣ್ತುಂಬಿಕೊಳ್ಳಬಹುದು. ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಲೆನಾಡ ಹೆಬ್ಬಾಗಿಲು ಶಿರಸಿಗೆ ಯಾಕ್ ಮೃಗಗಳು ಆಗಮಿಸಿವೆ. ಯಾಕ್ ಮೃಗಗಳನ್ನ ತಂದು ಸಾಕುವ ಧೈರ್ಯ ತೋರಿಸಿದ್ದಲ್ಲದೇ ಯಶಸ್ವಿಯಾಗಿ ಮಾಡುತ್ತಿದೆ ಅಮೇಜಿಂಗ್ ಪೆಟ್ ಪ್ಲ್ಯಾನೆಟ್.

Advertisment

ಇದನ್ನೂ ಓದಿ: ಕಳೆದ ವರ್ಷ 10, 20 ಕೋಟಿ ಜೇಬಿಗೆ ಇಳಿಸಿದರು.. ಈ ವರ್ಷ ಕಿಮ್ಮತ್ತೇ ಇಲ್ಲದ 7 ಬಿಗ್​ಪ್ಲೇಯರ್ಸ್​..!

amazing pet planet sirsi (6)

ಬೆನ್ನುಮೂಳೆ ಮುರಿದ ನಾಯಿಗಳು, ಹಲ್ಲಿಗಳು.. ಕಣ್ಣಿಲ್ಲದ ಗಿಳಿಗಳು, ಕಾಲು ತುಂಡಾದ ಜಾನುವಾರು, ಚರ್ಮರೋಗಕ್ಕೆ ತುತ್ತಾದ ಆಸ್ಟ್ರಿಚ್, ಹೀಗೆ ಅನಾರೋಗ್ಯ ಪೀಡಿತ ಜೀವಿಗಳಿಗೆ ಅಮ್ಮನ ಮಡಿಲಿನಂಥ ರಕ್ಷಣೆ. ಜೀವ ಇನ್ನೇನು ಹೋಗೇ ಬಿಟ್ಟಿತು ಎಂಬ ಸ್ಥಿತಿಯಲ್ಲಿ ಬಂದ ಜೀವಗಳು ಮರು ಜೀವ ಪಡೆದು ಜನಾಕರ್ಷಿಸುತ್ತಿವೆ. ಅನಾಥ ಪ್ರಾಣಿಪಕ್ಷಿಗಳಿಗಾಗಿಯೇ ಇರುವ ಅಮೇಜಿಂಗ್ ತಾಣವೇ ಅಮೇಜಿಂಗ್ ಪೆಟ್ ಪ್ಲಾನೆಟ್.

amazing pet planet sirsi (1)

ಶಿರಸಿಯ ಪ್ರಾಣಿಪ್ರಿಯ ರಾಜೇಂದ್ರ ಶಿರ್ಸಿಕರ್ ಹಾಗೂ ಪತ್ನಿ ಪೂಜಾರಾಜ್ ನಡೆಸುತ್ತಿರುವ ಅಮೇಜಿಂಗ್ ಪೆಟ್ ಪ್ಲ್ಯಾನೆಟ್. ಶಿರಸಿ-ಬನವಾಸಿ ರಸ್ತೆಯ ಶ್ರೀನಗರಕ್ಕೆ ಹೋಗುವ ಮಾರ್ಗದಲ್ಲಿ ಪೆಟ್ ಪ್ಲ್ಯಾನೆಟ್ ಇದೆ. ಗಾಯಗೊಂಡ ಸ್ಥಿತಿಯಲ್ಲಿರುವ ಪ್ರಾಣಿಗಳು, ಅನಾರೋಗ್ಯದಿಂದ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ರಾಣಿಗಳು ಈ ಪ್ಲ್ಯಾನೆಟ್ ಆಶ್ರಯ ಪಡೆದಿವೆ. ಪ್ರಾಣಿ ಸಂಕಷ್ಟದಲ್ಲಿರುವ ಸುದ್ದಿ ತಿಳಿದು ತಕ್ಷಣ ಧಾವಿಸುವ ರಾಜೇಂದ್ರ ಹಾಗೂ ಪತ್ನಿ ಪೂಜಾ ತಮ್ಮ ಜಾಗವನ್ನೇ ಪುನರ್ವಸತಿ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ.

Advertisment

ಇದನ್ನೂ ಓದಿ: ಬಿಹಾರ ಚುನಾವಣಾ ಫಲಿತಾಂಶದ ಎಫೆಕ್ಟ್.. ಸಿದ್ದರಾಮಯ್ಯರ ಕುರ್ಚಿ ಭದ್ರ..! ಹೆಂಗೆ..?

amazing pet planet sirsi (5)

ಮೊದಲು ಹವ್ಯಾಸಕ್ಕೆ ಆರಂಭವಾದ ಕಾಯಕಕ್ಕೆ ಈಗ ಪದ್ಮ ಸೇವಾ ಟ್ರಸ್ಟ್ ಅಡಿಯಲ್ಲಿ ಪುನರ್ವಸತಿ ಕೇಂದ್ರದ ಸ್ವರೂಪ ನೀಡಿದ್ದಾರೆ. ಈ ಪ್ಲ್ಯಾನೆಟ್‌ನಲ್ಲಿ ವಿವಿಧ ಜಾತಿಯ ಹಾವು, ಗಿಳಿಗಳು, ಬಾತುಕೋಳಿ, ಯುರೋಪಿನ ಮುಂಗುಸಿ, ಸೈಬೀರಿಯಾದ ಮುಂಗುಸಿ ಮೊದಲಾದ 50ಕ್ಕೂ ಹೆಚ್ಚು ಬಗೆಯ ಪ್ರಾಣಿ, ಪಕ್ಷಿಗಳಿವೆ.

ಇದನ್ನೂ  ಓದಿ:ಖಾತೆ ತೆರೆಯುವಲ್ಲೇ ವಿಫಲ.. ಚುನಾವಣಾ ಚಾಣಕ್ಯನಿಗೆ ಸಿಕ್ತಾ ಬಿಗ್​ ಮೆಸೇಜ್..?

Advertisment

amazing pet planet sirsi

ಕರ್ನಾಟಕದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಯಾಕ್ ಮೃಗ ಗಿಫ್ಟ್ ಆಗಿ ಶಿರಸಿಗೆ ಬಂದಿದೆ. ಫೆಬ್ರವರಿಯಲ್ಲಿ ಹಿಮಾಚಲ ಪ್ರದೇಶಕ್ಕೆ ಹೋದಾಗ ಅಲ್ಲಿನ ಜನರಿಗೆ ಪೆಟ್ ಪ್ಲ್ಯಾನೆಟ್ ಬಗ್ಗೆ ತಿಳಿಸಲಾಗಿತ್ತು. ಆಗ ಅವರು ಪ್ಲ್ಯಾನೆಟ್​ಗೆ ಏನೂ ಕೊಡಲು ಸಾಧ್ಯವಾಗದೇ ತಮ್ಮಲ್ಲಿಯ ಯಾಕ್ ಮೃಗಗಳನ್ನು ಕಳುಹಿಸಿಕೊಟ್ಟಿದ್ದಾರೆ. 14 ವರ್ಷದ ಒಂದು ಹೆಣ್ಣು, 2 ವರ್ಷದ ಒಂದು ಗಂಡು ಹಾಗೂ 10 ತಿಂಗಳಿನ ಒಂದು ಹೆಣ್ಣು ಯಾಕ್ ಸೇರಿ ಕುಟುಂಬವನ್ನು ದೀಪಾವಳಿಗೆ ಕಳಿಸಿದ್ದಾರೆ. 

ಇದನ್ನೂ ಓದಿ: 6 ಕೋಟಿ ವೀರನಿಗೂ ಸ್ಥಾನ ಇಲ್ಲ.. RCB ರಿಲೀಸ್ ಲಿಸ್ಟ್​ನಲ್ಲಿರೋ ಯಾರು, ಯಾರು?

amazing pet planet sirsi (3)

ಇಲ್ಲಿ ಒಂದು ದಶಕದಿಂದ ಶಿರ್ಸಿಕರ್ 1,600ಕ್ಕೂ ಹೆಚ್ಚು ಆಕಳು, ನಾಯಿ, ಕುದುರೆ, ಕಾಡುಬೆಕ್ಕು, ಪಾರಿವಾಳ, ಗೂಬೆ, ಎಲ್ಲವನ್ನೂ ಆರೈಕೆ ಮಾಡಿದ್ದಾರೆ. ಚಿಕಿತ್ಸೆ ಪಡೆಯುವ ಪ್ರಾಣಿಗಳನ್ನು ಗುಣಮುಖವಾದ ಮೇಲೆ ಪುನಃ ನಿಸರ್ಗದ ಮಡಿಲಿಗೆ ಸೇರಿಸಲಾಗುತ್ತದೆ.

Advertisment

amazing pet planet sirsi (7)

 ಉದ್ಯಾನವನಕ್ಕೆ ಇಂತಿಷ್ಟು‌ ದರ ನಿಗದಿಪಡಿಸಿದ್ದು, ಈ ಹಣವನ್ನು ಪ್ರಾಣಿಗಳ ಚಿಕಿತ್ಸೆಗೆ ಬಳಸುತ್ತಿದ್ದಾರೆ. ಪ್ರಾಣಿಗಳ ಜೀವನ ಕ್ರಮ, ಆಹಾರ, ಮೊಟ್ಟೆಯಿಡುವ, ಮರಿ ಮಾಡುವ ವಿಧಾನ, ಪಕ್ಷಿ ಸಂಕುಲ ರಕ್ಷಣೆ ಎಲ್ಲವನ್ನೂ ಇಲ್ಲಿ ವಿವರಿಸಲಾಗುತ್ತದೆ. 

ಇದನ್ನೂ ಓದಿ:24 ಕೋಟಿ ಬೆಲೆಯ ಸ್ಟಾರ್​ಗೆ ತಂಡದ ಡೋರ್ ಕ್ಲೋಸ್.. ಇವತ್ತು ಹಣೆಬರ ಪ್ರಕಟ..!

amazing pet planet sirsi (2)

ಶಾಲಾ ಮಕ್ಕಳಿಗೂ ಪ್ರಾಣಿಗಳ ವಿಶೇಷತೆಯನ್ನ ಪರಿಚಯ‌ ಮಾಡ್ತಾರೆ. ಪ್ರಾಣಿ ಪ್ರಿಯ ದಂಪತಿ ಹವ್ಯಾಸದಿಂದ ಆರಂಭವಾದ ಪ್ರಾಣಿ ಸಂರಕ್ಷಣಾ ಕಾಯಕ ಪೆಟ್ ಅಮೇಜಿಂಗ್ ಪ್ಲ್ಯಾನೆಟ್ ಆಗಿ ಬದಲಾಗಿದೆ. ಈಗ ಹಿಮಾಲಯದಿಂದ ತಂದ ಯಾಕ್ ಮೃಗ ಪ್ಲ್ಯಾನೆಟ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

Advertisment

ವಿಶೇಷ ವರದಿ: ಶ್ರೀಧರ್ ಜಿ.ಎಚ್, ನ್ಯೂಸ್ ಫಸ್ಟ್, ಶಿರಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

amazing pet planet sirsi
Advertisment
Advertisment
Advertisment