ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​ನಿಂದ ಬಿಗ್​ ಆಫರ್​​? ಈ ಬಗ್ಗೆ ಮಂಡ್ಯ ಸಂಸದೆ ಏನಂದ್ರು?

author-image
Ganesh Nachikethu
Updated On
ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​ನಿಂದ ಬಿಗ್​ ಆಫರ್​​? ಈ ಬಗ್ಗೆ ಮಂಡ್ಯ ಸಂಸದೆ ಏನಂದ್ರು?
Advertisment
  • ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧೆ ವಿಚಾರ
  • ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ ಸುಮಲತಾ
  • ಕಾಂಗ್ರೆಸ್ಸೋ ಬಿಜೆಪಿಯೋ? ಯಾವ ಪಕ್ಷದಿಂದ ಸ್ಪರ್ಧೆ..?

ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಹೀಗಾಗಿ ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಹೊರಟಿರೋ ಕಾಂಗ್ರೆಸ್​​ ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಆಪರೇಷನ್‌ ಹಸ್ತ ಮಾಡಲಿದೆ ಎಂಬ ಚರ್ಚೆ ಜೋರಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​, ನನಗೆ ಕಾಂಗ್ರೆಸ್​​ನಿಂದ ಯಾವುದೇ ಆಹ್ವಾನ ಬಂದಿಲ್ಲ. ನಾನು ಈಗ ಆರಾಮಾಗಿದ್ದೇನೆ. ನಾನು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೆ ಅಷ್ಟೇ. ನಾನು ಬಿಜೆಪಿ ಸದಸ್ಯೆ ಅಲ್ಲ ಎಂದರು.

ನ್ಯೂಸ್​ಫಸ್ಟ್​ ಜತೆ ಮಾತಾಡಿದ ಸುಮಲತಾ ಅಂಬರೀಶ್​​, ಕಾವೇರಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಈ ಬಾರಿ ಮಳೆಯಾಗದ ಕಾರಣ ಮಂಡ್ಯದಲ್ಲಿ ನೀರಿಗೆ ಸಮಸ್ಯೆ ಇದೆ. ರೈತರ ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡಲಿದ್ದೇವೆ. ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಆಗ್ರಹಿಸಿದರು.

ಕಾಂಗ್ರೆಸ್​ ಆಫರ್​ ಬಗ್ಗೆ ಹೇಳಿದ್ದೇನು..?

ನಾನು ಬಹಳ ಸಂತೋಷವಾಗಿದ್ದೇನೆ. ನನಗೆ ಕಾಂಗ್ರೆಸ್​ನಿಂದ ಯಾವ ಆಫರ್​ ಬಂದಿಲ್ಲ. ರಾಜಕೀಯ ನನಗೆ ಅನಿವಾರ್ಯ ಅಲ್ಲ, ಇದು ಕೇವಲ ಆಕಸ್ಮಿಕ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಮಾಡಲಾಗುತ್ತಿದೆ ಎಂಬ ವಿಚಾರದಲ್ಲಿ, ಯಾರೂ ನನಗೆ ಕಾಂಗ್ರೆಸ್‌ಗೆ ಆಹ್ವಾನ ನೀಡಿಲ್ಲ. ಬಿಜೆಪಿಗೆ ಸಪೋರ್ಟ್‌ ಮಾಡಿದ್ದೇನೆ ಹೊರತು ನಾನು ಪಕ್ಷದ ಸದಸ್ಯೆಯಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment