/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಆರಿದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ಆದಾಯ ಹೆಚ್ಚು ಅದರಿಂದ ಖುಷಿಯಾಗುತ್ತದೆ
- ಕೆಲವು ಸಣ್ಣಪುಟ್ಟ ಕಾರಣಗಳಿಂದ ಕುಟುಂಬದಲ್ಲಿ ಅಸಮಾಧಾನ
- ವಿದ್ಯಾರ್ಥಿಗಳಿಗೆ ಸಮಸ್ಯೆಯ ದಿನ
- ಕಾರ್ಯಕ್ಷೇತ್ರದಲ್ಲಿ ಒತ್ತಡಯಿರುವ ದಿನ
- ಮನಶ್ಚಾಂಚಲ್ಯ ಉಂಟಾಗಬಹುದು
- ಕಟ್ಟಡ ಸಾಮಗ್ರಿಯ ವ್ಯಾಪಾರಿಗಳಿಗೆ ಲಾಭದ ದಿನ
- ಗಣಪತಿ ಪ್ರಾರ್ಥನೆ ಮಾಡಿ
ವೃಷಭ
- ಹೊಸ ಕೆಲಸದ ಬಗ್ಗೆ ಉತ್ಸಾಹ ತೋರಿಸಬಹುದು
- ಬುದ್ಧಿವಂತರ ಸಂಪರ್ಕದಿಂದ ವ್ಯಾವಹಾರಿಕವಾಗಿ ಲಾಭವಾಗಬಹುದು
- ಮಾನಸಿಕ ಒತ್ತಡವಿರುವ ದಿನ
- ಮನೆ ಸಮಸ್ಯೆಗಳು ಬಗೆಹರಿಯುವ ವಾತಾವರಣವಿದೆ
- ಇಂದು ಪ್ರಯಾಣಕ್ಕೆ ಮುಂದಾಗಬಹುದು
- ಇಂದು ಹಣ ಹೂಡಿಕೆ ಬೇಡ ಆದರೆ ಅದರ ಬಗ್ಗೆ ಚಿಂತನೆ ಮಾಡಿ
- ಸುಬ್ರಹ್ಮಣ್ಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಮಿಥುನ
- ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ
- ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಯಿದೆ
- ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬಹುದು
- ಕುಟುಂಬದ ಜವಾಬ್ದಾರಿಯನ್ನ ಮರೆಯಬೇಡಿ
- ಇಂದು ನಾಯಕತ್ವದ ಕೆಲಸ ಬೇಡ
- ಯಾರೊಂದಿಗೂ ಜಗಳಕ್ಕೆ ಅವಕಾಶ ಮಾಡಿಕೊಡಬೇಡಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಕೆಲಸದಲ್ಲಿ ಬದಲಾವಣೆಯ ಸೂಚನೆಯಿದೆ
- ಸ್ವತಂತ್ರ ವ್ಯವಹಾರದಿಂದ ಲಾಭವಿದೆ
- ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ
- ಅಧಿಕಾರಿಗಳಿಂದ ಅಥವಾ ಮನೆಯ ಹಿರಿಯರಿಂದ ಪ್ರಶಂಸೆ ಸಿಗಬಹುದು
- ಹಳೆಯ ರೋಗಗಳಿದ್ದರೆ ಅದರಿಂದ ಮುಕ್ತಿ ಸಿಗಬಹುದು
- ಹೊಸ ಯೋಜನೆಗಳಿಂದ ಉತ್ಸುಕರಾಗಬಹುದು
- ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ಸಿಂಹ
- ಹೊಸ ವಿಚಾರಗಳನ್ನ ತಿಳಿಯಲು ಉತ್ಸುಕರಾಗಿರುತ್ತೀರಿ
- ಇಂದು ಕೆಲಸದ ಸ್ಥಳದಲ್ಲಿ ಒತ್ತಡ ಕಡಿಮೆ
- ಶುಭ ಕಾರ್ಯಗಳಲ್ಲಿ ಭಾಗಿಯಾಗಬಹುದು
- ವಿದ್ಯಾರ್ಥಿ ಜೀವನ ಸಂತೋಷಕರವಾಗಿರುತ್ತದೆ
- ಸ್ನೇಹಿತರ ವಿಚಾರದಲ್ಲಿ ಅಸಮಾಧಾನ
- ಇಂದು ಕೆಲವು ಘಟನೆಗಳು ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
- ಶಿವಾರಾಧನೆ ಮಾಡಿ
ಕನ್ಯಾ
- ಮುಖ್ಯವಾದ ಕೆಲಸಗಳಲ್ಲಿ ಅಡೆತಡೆಯಾಗಬಹುದು
- ವ್ಯಾಪಾರದಲ್ಲಿ ಸಮಸ್ಯೆಗಳು ಉಂಟಾಗಬಹುದು
- ಇಂದು ಆರೋಗ್ಯ ದುರ್ಬಲವಾಗಬಹುದು
- ಬೇರೆಯವರ ಅವಲಂಬನೆ ಅನಿವಾರ್ಯವಾಗಬಹುದು
- ಮಾನಸಿಕವಾದ ಭೀತಿ ಹೆಚ್ಚಾಗಬಹುದು
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ತುಲಾ
- ಇಂದು ವ್ಯಾವಹಾರಿಕವಾಗಿ ಜಯವಿದೆ
- ಕಾನೂನಿನ ಸಲಹೆ ಪಡೆಯಬಹುದು
- ಕುಟುಂಬದ ಜೊತೆ ಉತ್ತಮ ಬಾಂಧವ್ಯ ಬೆಳೆಸಬಹುದು
- ಹೊಸ ಉದ್ಯೋಗಕ್ಕೆ ಅವಕಾಶವಿದೆ
- ಪ್ರೇಮಿಗಳಿಗೆ ಕೆಲವು ಸಮಸ್ಯೆಗಳು ಪರಿಹಾರವಾಗಬಹುದು
- ಚುರುಕುತನದಿಂದ ಉತ್ತಮವಾದ ಫಲಿತಾಂಶವಿದೆ
- ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಇಂದು ಆದಾಯದಲ್ಲಿ ಹೆಚ್ಚಳವನ್ನ ಕಾಣಬಹುದು
- ನಿಮ್ಮ ನಡವಳಿಕೆಯಿಂದ ಜನ ಸಂತೋಷ ಪಡಬಹುದು
- ಐಷಾರಾಮಿ ಜೀವನಕ್ಕೆ ಆಸೆ ಪಡುತ್ತೀರಿ ಆದರೆ ಯಾವುದು ಈಡೇರುವುದಿಲ್ಲ
- ವಿವಾಹ ವಿಚಾರದಲ್ಲಿ ತೊಡಕು ಉಂಟಾಗಬಹುದು
- ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ
- ಇಂದು ಅನಗತ್ಯವಾದ ಚರ್ಚೆ, ವಾದ ಬೇಡ
- ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಧನುಸ್ಸು
- ಕಾರ್ಯ ಚಟುವಟಿಕೆ ಸುಧಾರಣೆ ಆಗಲಿದೆ
- ಆರ್ಥಿಕ ಲಾಭದ ಸಮಯ
- ದೂರದ ಊರಿಗೆ ಪ್ರಯಾಣ ಮಾಡುವ ಸಂಭವವಿದೆ
- ಆಪರಿಚಿತರಿಂದ ಮೋಸ ಆಗಬಹುದು
- ಆಸೆಗಳ ಪೂರೈಕೆಗೆ ಹೋರಾಡುತ್ತೀರಿ
- ಮಾನಸಿಕವಾಗಿ ನೆಮ್ಮದಿ ಇರುವುದಿಲ್ಲ
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಮಕರ
- ವಾದ ಮಾಡಬೇಡಿ ಅವಮಾನ ಆಗಬಹುದು
- ನಕಾರಾತ್ಮಕವಾದ ಜನರ ಸಹವಾಸದಿಂದ ನಿಮಗೆ ತೊಂದರೆಯಾಗಬಹುದು
- ಸ್ನೇಹಿತರ ಮಧ್ಯೆ ಜಗಳ ಆಗುವ ಸಾಧ್ಯತೆ ಹೆಚ್ಚಾಗಿದೆ
- ಸಂಗೀತಾಭಿಮಾನಿಗಳಿಗೆ ಸಂಗೀತ ತಜ್ಞರಿಗೆ ಶುಭದಿನ
- ಚಿಂತಿಸಿದೆ ಯಾವ ಕೆಲಸವನ್ನು ಮಾಡಬೇಡಿ
- ವೈಯಕ್ತಿಕವಾದ ಸಂಬಂಧದಲ್ಲಿ ಕಹಿಯ ಅನುಭವ ಆಗಲಿದೆ
- ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ವ್ಯಾಪಾರದಲ್ಲಿ ಅನಿರೀಕ್ಷಿತ ಬೆಳವಣಿಗೆಯಾಗಬಹುದು
- ಮನೋರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ
- ಇಂದು ಪ್ರೇಮಿಗಳು ಎಚ್ಚರವಾಗಿರಬೇಕು
- ಬಾಕಿಯಿರುವ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ
- ಮಾನಸಿಕವಾಗಿ ಸಮಾಧಾನ ಇರುವುದಿಲ್ಲ
- ಅತಿಥಿಗಳ ಜೊತೆ ಸಂವಾದ ಮಾಡುತ್ತೀರಿ ಸಮಾಧಾನ ಇರುವುದಿಲ್ಲ
- ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ
ಮೀನ
- ನಿಮ್ಮ ಜವಾಬ್ದಾರಿಯ ಬಗ್ಗೆ ಹೆಚ್ಚು ಗಮನಹರಿಸಿ
- ಆತ್ಮವಿಶ್ವಾಸವಿದ್ದರೆ ನಿಮಗೆ ಜಯವಿದೆ
- ಕಾನೂನು ವಿಚಾರದಲ್ಲಿ ಜಾಗೃತರಾಗಿರಿ
- ಪರಿಚಯದವರಿಂದ ಸಹಾಯದ ಸಾಧ್ಯತೆ ಇದೆ
- ಆಹಾರ ಸೇವನೆಯ ಬಗ್ಗೆ ಎಚ್ಚರಿಕೆಯಿರಲಿ
- ಮನೆಯಲ್ಲಿ ಸಮಾಧಾನ ಇರುವುದಿಲ್ಲ
- ಶಕ್ತಿ ದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ