Advertisment

ಅಜಿತ್ ರೈ ಪಿತ್ರಾರ್ಜಿತ ಆಸ್ತಿ ಕೇವಲ 5 ಎಕರೆ.. ಗಳಿಸಿದ್ದು ಕೋಟಿ ಕೋಟಿ; ವಿಚಾರಣೆ ತೀವ್ರಗೊಳಿಸಿದ ಲೋಕಾಯುಕ್ತ

author-image
Bheemappa
Updated On
Breaking News: ಬೆಳ್ಳಂಬೆಳಗ್ಗೆ ಕಳಂಕಿತ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಂಗಳೂರು, ಬಾಗಲಕೋಟೆ, ವಿಜಯಪುರದಲ್ಲಿ ಲೋಕಾಯುಕ್ತ ದಾಳಿ
Advertisment
  • ತನಿಖೆ ಹಿನ್ನೆಲೆಯಲ್ಲಿ ಇಂದು ಪುತ್ತೂರಿಗೆ ತೆರಳುವ ಸಾಧ್ಯತೆ..!
  • ಹುಟ್ಟೂರಿನಲ್ಲಿ 5 ಎಕೆರೆ ಭೂಮಿ ಹಾಗೂ ಐಷಾರಾಮಿ ಬಂಗಲೆ
  • ಇನ್ನಷ್ಟು ಮಹತ್ವದ ಮಾಹಿತಿ ಕಲೆ ಹಾಕಲಿರುವ ಲೋಕಾಯುಕ್ತ

ಬೆಂಗಳೂರು: 500 ಕೋಟಿ ರೂಪಾಯಿಗೂ ಅಧಿಕ ಬೇನಾಮಿ ಆಸ್ತಿ ಹೊಂದಿರುವ ಕೆ.ಆರ್​.ಪುರಂನ ಕೆಎಸ್​ಎಸ್​ ಅಧಿಕಾರಿಯಾಗಿದ್ದ ಅಜಿತ್ ಕುಮಾರ್​ ರೈ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Advertisment

ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಬಳಿಕ ವಿಚಾರಣೆ ಮಾಡಲೆಂದು 7 ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಈಗಾಗಲೇ 4 ದಿನ ಕಳೆದಿದ್ದು ವಿಚಾರಣೆಯನ್ನು ಅಧಿಕಾರಿಗಳು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಹೀಗಾಗಿ ಇನ್ನುಷ್ಟು ತನಿಖೆಗೆಂದು ಇವತ್ತು ಅಜಿತ್​ ರೈರನ್ನು ಪುತ್ತೂರುಗೆ ಕರೆದೊಯ್ಯುವ ಸಾಧ್ಯತೆ ಇದೆ.

publive-image

ಬೆಂಗಳೂರಿನಲ್ಲಿರುವ ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ಮಹಜರ್ ಮಾಡಿದ್ದಾರೆ. ಇದರಿಂದ ಇನ್ನಷ್ಟು ತನಿಖೆಗೆಂದು ಪುತ್ತೂರಿಗೆ ತೆರಳಲಿದ್ದಾರೆ. ರೈರವರ ಹುಟ್ಟೂರಿನಲ್ಲಿ ಪಿತ್ರಾರ್ಜಿತ ಆಸ್ತಿ ಇರುವುದು ಕೇವಲ 5 ಎಕರೆ ಭೂಮಿ ಹಾಗೂ ಐಷಾರಾಮಿ ಬಂಗಲೆ ಹಾಗೂ ಆಸ್ತಿ ಮಾಡಿದ ಬಗ್ಗೆ ಲೋಕಾಯುಕ್ತರು ಈಗಾಗಲೇ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಪುತ್ತೂರಿಗೆ ಕರೆದೊಯ್ದು ದಾಳಿ ವೇಳೆ ಸಿಕ್ಕಿರುವ ದಾಖಲೆಗಳ ಪ್ರಕಾರ ವಿಚಾರಣೆ ನಡೆಸಿ ಅಧಿಕಾರಿಗಳು ಮಹಜರ್ ಮಾಡಬಹುದು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment