Advertisment

ತನ್ನ ವಿರುದ್ಧ ಲಂಚ ಕೇಳಿದ ಆರೋಪ; ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದೇನು?

author-image
Ganesh Nachikethu
Updated On
ಯತೀಂದ್ರ ವಿರುದ್ಧ ಡಿಕೆಶಿ ಕೋಪ ಮಾಡಿಕೊಂಡ್ರಾ..? ಏನಿದು ಬಿಜೆಪಿ ಆರೋಪ..?
Advertisment
  • ಡಿಸಿಎಂ ಡಿಕೆಶಿ ವಿರುದ್ಧ ಗಂಭೀರ ಆರೋಪ
  • ಗಂಭೀರ ಆರೋಪ ಮಾಡಿದ ಗುತ್ತಿಗೆದಾರರು
  • ಈ ಬಗ್ಗೆ ಡಿಸಿಎಂ ಡಿಕೆಶಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬಾಕಿ ಬಿಲ್ ಕೊಡಲು ಡಿಸಿಎಂ ಡಿ.ಕೆ ಶಿವಕುಮಾರ್​​ ಲಂಚಕ್ಕೆ ಬೇಡಿಕೆ‌ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರೇ ಆರೋಪಿಸಿದ್ದಾರೆ. ಈ ತನ್ನ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರದ ಆರೋಪಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಅವರೇ ಉತ್ತರಿಸಿದ್ದಾರೆ.

Advertisment

ನನ್ನ ವಿರುದ್ಧ ಯಾರು ಬೇಕಾದರೂ ದೂರು ನೀಡಲಿದೆ. ಗುತ್ತಿಗೆದಾರರ ಸಂಘ ರಾಜ್ಯಪಾಲರಿಗೆ ದೂರು ನೀಡಿದ ವಿಚಾರ ಗೊತ್ತಿದೆ. ನಾನು ಯಾರ ಹೊಟ್ಟೆ ಮೇಲೂ ಹೊಡೆಯುವುದಿಲ್ಲ. ಕೆಲಸ ಮಾಡಿದ್ರೆ, ಬಿಲ್​ ಆಗಲಿದೆ ಎಂದರು.

ಎಷ್ಟೇ ಆರೋಪ ಮಾಡಿದ್ರೂ ನಾವು ದಾಖಲೆ ಸಮೇತ ಬರಲಿದ್ದೇವೆ. ದಾಖಲೆಗಳ ಮೂಲಕವೇ ಎಲ್ಲರಿಗೂ ಉತ್ತರ ನೀಡಲಿದ್ದೇವೆ. ಪ್ರೀತಿಯಿಂದ ದೂರು ಕೊಟ್ಟಿದ್ದಾರೆ. ಅಧಿಕಾರಿಗಳಿಗೆ ಹೋಗಿ ಬನ್ನಿ ಎಂದು ಸೂಚನೆ ನೀಡಿದ್ದೇನೆ ಎಂದರು.

ಸಿಟಿ ರವಿ ನನ್ನ ಸ್ನೇಹಿತ, ರಾಜ್ಯ ರಾಜಕಾರಣಕ್ಕೆ ಬರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ನಿಲ್ಲಿಸಬಾರದು ಎಂದು ಸೂಚನೆ ನೀಡಿದ್ದೇನೆ. ಎಲ್ಲಾ ಆರೋಪಗಳಿಗೆ ನಾನೇ ಉತ್ತರಿಸುತ್ತೇನೆ ಎಂದು ನಕ್ಕರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment