/newsfirstlive-kannada/media/post_attachments/wp-content/uploads/2023/10/MLA-Muniratna.jpg)
ಬೆಂಗಳೂರು: ಕಾಂಗ್ರೆಸ್ ಶಾಸಕರು, ಸಚಿವರ ಸಾಲು, ಸಾಲು ಹೇಳಿಕೆಗಳ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಎರಡು ಬಣ ಇರೋದು ಪಕ್ಕಾ. ಎರಡೂವರೆ ವರ್ಷಗಳಾದ ಮೇಲೆ ಕೇವಲ ಸಚಿವ ಸಂಪುಟ ಪುನಾರಚನೆ ಅಲ್ಲ ಸಿಎಂ ಸಿದ್ದರಾಮಯ್ಯ ಕೂಡ ಬದಲಾಗೋ ಸಾಧ್ಯತೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು ಚೆನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ 70 ಶಾಸಕರ ಬೆಂಬಲ ಇದೆ ಎಂದಿದ್ದಾರೆ. 70 ಶಾಸಕರ ಬೆಂಬಲವೊ? ಅಥವಾ 52 ಶಾಸಕರ ಬೆಂಬಲವೊ? ಹಾಗಾದರೆ ಉಳಿದ ಶಾಸಕರ ಬೆಂಬಲ ಸಿಎಂ ಸಿದ್ದರಾಮಯ್ಯರಿಗೆ ಇದೆ ಅಂತ ಆಯಿತು. ಈ ಮೂಲಕ ಕಾಂಗ್ರೆಸ್‌ನಲ್ಲಿ ಎರಡು ಬಣ ಇದೆ ಅನ್ನೋದು ಪಕ್ಕಾ ಆಯ್ತು ಎಂದರು. ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ, ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಶೆಟ್ಟಿ ಅವರು ಎರಡೂವರೆ ವರ್ಷಗಳಾದ ಮೇಲೆ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂದಿದ್ದಾರೆ. ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರು ಬದಲಾಗುತ್ತಾರೆ ಎಂದು ಮುನಿರತ್ನ ಅವರು ಭವಿಷ್ಯದ ಲೆಕ್ಕಾಚಾರ ತಿಳಿಸಿದ್ದಾರೆ.
Munirathna : ಎರಡೂವರೆ ವರ್ಷ ಆದ್ಮೇಲೆ ಡಿಕೆಶಿ ಸಿಎಂ ಆಗೋದು ನಿಶ್ಚಿತ
Click Here to Watch NewsFirst Kannada Live Updates
ಪ್ರತಿಕ್ಷಣದ ಸುದ್ದಿಗಾಗಿ ನ್ಯೂಸ್ ಫಸ್ಟ್ ಲೈವ್ ಲಿಂಕ್ ಕ್ಲಿಕ್ ಮಾಡಿ
LIVE Link : https://t.co/ikdQpTmK63@MunirathnaMLA@DKShivakumar@siddaramaiah@BJP4Karnatakapic.twitter.com/WyrdNJFqZN— NewsFirst Kannada (@NewsFirstKan)
Munirathna : ಎರಡೂವರೆ ವರ್ಷ ಆದ್ಮೇಲೆ ಡಿಕೆಶಿ ಸಿಎಂ ಆಗೋದು ನಿಶ್ಚಿತ
Click Here to Watch NewsFirst Kannada Live Updates
ಪ್ರತಿಕ್ಷಣದ ಸುದ್ದಿಗಾಗಿ ನ್ಯೂಸ್ ಫಸ್ಟ್ ಲೈವ್ ಲಿಂಕ್ ಕ್ಲಿಕ್ ಮಾಡಿ
LIVE Link : https://t.co/ikdQpTmK63@MunirathnaMLA@DKShivakumar@siddaramaiah@BJP4Karnatakapic.twitter.com/WyrdNJFqZN— NewsFirst Kannada (@NewsFirstKan) October 22, 2023
ಇನ್ನು, ಡಿಕೆ ಶಿವಕುಮಾರ್ ಸಿಎಂ ಆಗಲು ಅರ್ಹ ಎಂಬ ಶಾಸಕ ಹ್ಯಾರಿಸ್ ಹೇಳಿಕೆಗೆ ಮುನಿರತ್ನ ಅವರು ವ್ಯಂಗ್ಯವಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಬಹಳ ಲೇಟ್ ಆಗಿ ಸಿಎಂ ಆಗಬಹುದೇನೋ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹ್ಯಾರಿಸ್ ಸಿಎಂ ಆಗಬೇಕು. ಅವರ ಮಗ ನಲಪಾಡ್ ಡಿಸಿಎಂ ಆಗಬೇಕು. ಕಾಂಗ್ರೆಸ್‌ನಲ್ಲಿ ಈಗ ಅದೇ ರೀತಿ ನಡೆಯುತ್ತೆ ಅಲ್ವಾ? 135 ಜನರನ್ನ ಇಟ್ಟುಕೊಂಡು ಈಗಲೂ ಆಪರೇಷನ್ ಮಾಡ್ತಿದ್ದಾರೆ. ಇದು ಮೂಲ ಕಾಂಗ್ರೆಸ್‌ನವರಿಗೆ ಸಂಕಷ್ಟ ತಂದಿದೆ. ಪಕ್ಷದಲ್ಲಿ ಯಾಕಾದ್ರೂ ಇದ್ದೇವೋ ಅನ್ನೋ ಬೇಸರ ಶುರುವಾಗಿದೆ ಎಂದು ಮುನಿರತ್ನ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ