/newsfirstlive-kannada/media/post_attachments/wp-content/uploads/2024/10/MANJU-PAVAGADA.jpg)
ಕನ್ನಡ ಕಿರುತೆರೆ ನಟ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ಸಂಭ್ರಮದಲ್ಲಿದ್ದಾರೆ. ಬಿಗ್ಬಾಸ್ ಸೀಸನ್ 8ರ ವಿನ್ನರ್ ಆಗಿದ್ದ ಮಂಜು ಪಾವಗಡ ಅವರು ಸದ್ಯ ಜಂಟಿಯಾಗಿದ್ದಾರೆ.
ಇದನ್ನೂ ಓದಿ:ಲ್ಯಾಗ್ ಮಂಜುಗೆ ಲಾಕ್ ಆದ ‘ನಂದಿನಿ’.. ಬಿಗ್ ಬಾಸ್ ಮಂಜು ಪಾವಗಡ ಮನಗೆದ್ದ ಈ ಪೋರಿ ಯಾರು?
ಬಿಗ್ಬಾಸ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ಮಂಜು ಪಾವಗಡ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಮಂಜು ಅವರು ನಂದಿನಿ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ನ್ಯೂಸ್ ಫಸ್ಟ್ಗೆ ಲಭ್ಯವಾಗಿವೆ. ಸದ್ಯ ಮಂಜು ಅವರು ಕೈ ಹಿಡಿದ ಹುಡುಗಿಯ ಹೆಸರು ನಂದಿನಿ.
ಮಂಜು ಅವರ ಕೈ ಹಿಡಿದ ಹುಡುಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರು ಹಿರಿಯರ ಒಪ್ಪಿಗೆ ಮೇರೆಗೆ ಮಂಜು ಪಾವಗಡ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ಬಿಗ್ಬಾಸ್ ವಿನ್ನರ್ ಮಂಜು ಪಾವಗಡ ಅವರು ಅರೇಂಜ್ ಮ್ಯಾರೇಜ್ ಆಗುತ್ತಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮಂಜು ಅವರು ನಂದಿನಿ ಅವರ ಕೈಗೆ ಉಂಗುರವನ್ನು ತೊಡಿಸಿದ್ದಾರೆ.
ನವೆಂಬರ್ 13 ಹಾಗೂ 14ರಂದು ಪಾವಗಡದಲ್ಲಿ ಮಂಜು ಪಾವಗಡ ಹಾಗೂ ನಂದಿನಿ ಅವರ ಮದುವೆ ನಡೆಯಲಿದೆ. ಹಾಸ್ಯ ನಟನಾಗಿ ಮಂಜು ಪಾವಗಡ ಅವರು ಕಿರುತೆರೆ ವೀಕ್ಷಕರ ನೆಚ್ಚಿನ ನಟರಲ್ಲಿ ಒಬ್ಬರಾಗಿದ್ದಾರೆ.
ತಮ್ಮ ಸರಳತೆ, ಹಾಸ್ಯ ಪ್ರಜ್ಞೆಯಿಂದಲೇ ಮನೆ ಮಾತಾಗಿರುವ ನಟ ಮಂಜು ಪಾವಗಡ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಮಂಜು ಪಾವಗಡ ಅವರು ಬೆಂಗಳೂರಿನಲ್ಲಿಯೇ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದರು. ಹೊಸ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಇದನ್ನೂ ಓದಿ: ಇದನ್ನೂ ಓದಿ: ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ಬಾಸ್ ವಿನ್ನರ್ ಮಂಜು ಪಾವಗಡ
ಇದೀಗ ಮಂಜು ಪಾವಗಡ ಅವರು ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ನೆಚ್ಚಿನ ಹಾಸ್ಯ ನಟನಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ