Advertisment

ಇಸ್ರೇಲ್‌, ಹಮಾಸ್ ಉಗ್ರರ ಸಂಧಾನ ವಿಫಲ.. ಒತ್ತೆಯಾಳುಗಳ ಬಿಡುಗಡೆಗೆ ಭಯಾನಕ ಷರತ್ತು; ಯುದ್ಧ ಇನ್ನೂ ಘೋರ!

author-image
admin
Updated On
ಇಸ್ರೇಲ್‌, ಹಮಾಸ್ ಉಗ್ರರ ಸಂಧಾನ ವಿಫಲ.. ಒತ್ತೆಯಾಳುಗಳ ಬಿಡುಗಡೆಗೆ ಭಯಾನಕ ಷರತ್ತು; ಯುದ್ಧ ಇನ್ನೂ ಘೋರ!
Advertisment
  • 17 ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌, ಹಮಾಸ್ ಉಗ್ರರ ಯುದ್ಧ
  • ಒತ್ತೆಯಾಳುಗಳಿಂದ ಇಸ್ರೇಲ್ ಗಾಜಾ ಪಟ್ಟಿ ಮೇಲಿನ ದಾಳಿ ವಿಳಂಬ
  • ಗಾಜಾ ಪಟ್ಟಿಯ ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲ, ಇಂಧನವೂ ಇಲ್ಲ

ಸತತ 17 ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌, ಹಮಾಸ್ ಉಗ್ರರ ಯುದ್ಧ ನಿಲ್ಲೋ ಲಕ್ಷಣವೇ ಕಾಣುತ್ತಿಲ್ಲ. ಇಸ್ರೇಲ್ ಸೇನೆಯ ಭಯಾನಕ ದಾಳಿಗೆ ತತ್ತರಿಸಿರೋ ಹಮಾಸ್ ಉಗ್ರರು ಶರಣಾಗುವುದಕ್ಕೂ ಸಿದ್ಧರಿಲ್ಲ. ಯುದ್ಧದ ಮಧ್ಯೆ ಹಮಾಸ್ ಉಗ್ರರು ಇನ್ನಿಬ್ಬರು ಒತ್ತೆಯಾಳುಗಳನ್ನ ರೆಡ್ ಕ್ರಾಸ್ ವಶಕ್ಕೆ ನೀಡಿದ್ದಾರೆ.

Advertisment

ಕಳೆದ ವಾರ ಇಬ್ಬರನ್ನು ಬಿಡುಗಡೆ ಮಾಡಲಾಗಿತ್ತು. ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗೆ ಕತಾರ್ ದೇಶ ಮಧ್ಯಸ್ಥಿಕೆ ವಹಿಸಿದೆ. ಅಮೆರಿಕಾದಿಂದಲೂ ಒತ್ತೆಯಾಳುಗಳ ಬಿಡುಗಡೆಗೆ ಮಾತುಕತೆ ನಡೆಸಲಾಗಿದೆ. ಈ ಒತ್ತೆಯಾಳುಗಳ ಸುರಕ್ಷತೆಯ ದೃಷ್ಟಿಯಿಂದಲೇ ಇಸ್ರೇಲ್ ಭೂಸೇನೆಯ ಗಾಜಾ ಪಟ್ಟಿ ಮೇಲಿನ ದಾಳಿ ವಿಳಂಬವಾಗಿದೆ. ಅಮೆರಿಕಾ ಕೂಡ ಗಾಜಾಪಟ್ಟಿಯ ಮೇಲಿನ ದಾಳಿ ವಿಳಂಬಕ್ಕೆ ಸೂಚಿಸಿದೆ. ಇದೇ ವೇಳೆ ಹಮಾಸ್ ಉಗ್ರನೊಬ್ಬ ರಾಕೆಟ್ ದಾಳಿಗೂ ಮುನ್ನ ಜೋರಾಗಿ ನಗುತ್ತಾ ಸೆಲಬ್ರೇಷನ್ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಸ್ರೇಲ್‌ನ 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಉಗ್ರರು ಷರತ್ತು ಹಾಕುತ್ತಿದ್ದಾರೆ. ಗಾಜಾ ಪಟ್ಟಿಯ ಆಸ್ಪತ್ರೆಗಳಿಗೆ ಇಂಧನ ಪೂರೈಸಲು ಇಸ್ರೇಲ್‌ಗೆ ಬೇಡಿಕೆ ಇಡಲಾಗಿದೆ. ಗಾಜಾ ಪಟ್ಟಿಯ ಆಸ್ಪತ್ರೆಗಳಲ್ಲಿ ವಿದ್ಯುತ್ ಇಲ್ಲ, ಇಂಧನವೂ ಇಲ್ಲ. ಐಸಿಯು, ವಾರ್ಡ್‌ಗಳಲ್ಲಿ ಮಕ್ಕಳು, ನವಜಾತ ಶಿಶುಗಳ ಚಿಕಿತ್ಸೆಗೆ ಭಾರೀ ತೊಂದರೆ ಎದುರಾಗಿದೆ. ಹಮಾಸ್ ಉಗ್ರರ ಈ ಬೇಡಿಕೆಯಂತೆ ಇಂಧನ ಪೂರೈಸಲು ಇಸ್ರೇಲ್ ಒಪ್ಪಿಲ್ಲ. ಇದರಿಂದಾಗಿ ಒತ್ತೆಯಾಳುಗಳ ಬಿಡುಗಡೆಯ ಸಂಧಾನ ಮಾತುಕತೆ ವಿಫಲವಾಗಿದೆ.

Advertisment

ಇಸ್ರೇಲ್-ಹಮಾಸ್ ಕದನ ವಿರಾಮದ ಬಗ್ಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಕೂಡ ಗೊಂದಲದ ಹೇಳಿಕೆ ನೀಡಿದ್ದಾರೆ. ನಮಗೆ ಕದನ ವಿರಾಮ ಬೇಕು. ಕದನ ವಿರಾಮ ಅಲ್ಲ. ಮೊದಲು ಒತ್ತೆಯಾಳುಗಳು ಬಿಡುಗಡೆಯಾಗಬೇಕು. ಬಳಿಕ ನಾವು ಮಾತುಕತೆ ನಡೆಸಬಹುದು ಎಂದು ಅಮೆರಿಕಾದ ಶ್ವೇತ ಭವನದಲ್ಲಿ ಜೋ ಬೈಡೆನ್ ಅವರು ದ್ವಂದ್ವ ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment