ತಂದೆ ಅಂತ್ಯಕ್ರಿಯೆಗೆ ಹಣ ಖರ್ಚಾಗುತ್ತೆ ಎಂದು ಮೃತದೇಹವನ್ನು 2 ವರ್ಷ ಬಚ್ಚಿಟ್ಟ ಮಗ

author-image
admin
Updated On
ತಂದೆ ಅಂತ್ಯಕ್ರಿಯೆಗೆ ಹಣ ಖರ್ಚಾಗುತ್ತೆ ಎಂದು ಮೃತದೇಹವನ್ನು 2 ವರ್ಷ ಬಚ್ಚಿಟ್ಟ ಮಗ
Advertisment
  • ಎರಡು ವರ್ಷ ಬಚ್ಚಲು ಮನೆಯಲ್ಲೇ ತಂದೆಯ ಮೃತದೇಹ
  • ತಂದೆಯ ಅಂತ್ಯಕ್ರಿಯೆಗೆ ಅಷ್ಟೊಂದು ಹಣ ಖರ್ಚು ಮಾಡಬೇಕಲ್ಲಾ?
  • ರೆಸ್ಟೋರೆಂಟ್​​ನಲ್ಲಿನ ಬಚ್ಚಲು ಮನೆಯಲ್ಲಿ ಮೃತದೇಹ ಇಟ್ಟಿದ್ದ ಮಗ

ಜಪಾನ್‌ನಲ್ಲಿನ ಒಬ್ಬ ವ್ಯಕ್ತಿ ವಯಸ್ಸಾದ ಕಾರಣ ಅನಾರೋಗ್ಯದಿಂದ ಇತ್ತೀಚೆಗೆ ಮೃತನಾಗಿದ್ದ. ಆ ವ್ಯಕ್ತಿಯ ಮಗ ಆ ಮೃತ ತಂದೆಯ ಶವಕ್ಕೆ ಅಂತ್ಯಕ್ರಿಯೆ ನಡೆಸದೆ, ಬರೋಬ್ಬರಿ ಎರಡು ವರ್ಷ ಬಚ್ಚಲು ಮನೆಯಲ್ಲೇ ಬಚ್ಚಿಟ್ಟಿದ್ದಾನೆ. ಅದಕ್ಕೆ ಕಾರಣ ಅಲ್ಲಿ ಶವಯಾತ್ರೆಯೂ ದುಬಾರಿಯಾಗಿ ನಡೆಯುತ್ತೆ. ತಂದೆಯ ಅಂತ್ಯಕ್ರಿಯೆಗೆ ಅಷ್ಟೊಂದು ಹಣ ಖರ್ಚು ಮಾಡಬೇಕಲ್ಲಾ ಅಂತ ಯೋಚಿಸಿ ಇಂಥಾ ಅಮಾನುಷ ಕೆಲಸ ಮಾಡಿದ್ದಾನೆ.

ನೊಬುಹಿಕೊ ಸುಜುಕಿ.. 56 ವರ್ಷ ಈತ ಟೋಕಿಯೊದಲ್ಲಿನ ಚೈನೀಸ್​ ರೆಸ್ಟೋರೆಂಟ್ ಒಂದರ ಮಾಲೀಕ. ಅದು 2023ನೇ ಇಸವಿ, ಜನವರಿ ಆ ಸಮಯಕ್ಕೆ ಸುಜುಕಿ ತಂದೆಗೆ 86 ವರ್ಷ ಆಗಿತ್ತು. ಅದೇ ರೆಸ್ಟೊರೆಂಟ್​ನಲ್ಲಿ ಸುಜುಕಿ ತಂದೆ ಮರಣ ಹೊಂದಿದ್ದರು. ಅಂತ್ಯಕ್ರಿಯೆ ಖರ್ಚಿಗೆ ಹೆದರಿದ್ದ ಆತ, ಅಲ್ಲೇ ರೆಸ್ಟೋರೆಂಟ್​​ನಲ್ಲಿನ ಬಚ್ಚಲು ಮನೆಯಲ್ಲಿ ಮೃತದೇಹವನ್ನ ಇಟ್ಟಿದ್ದಾನೆ.

ವಾರದ ಹಿಂದೆ ದಿಢೀರ್ ರೆಸ್ಟೋರೆಂಟ್​ ಮುಚ್ಚಿದ್ದ ಮಗ!
ಸುಜುಕಿ ನಡೆಸುತ್ತಿದ್ದ ತನ್ನ ಚೈನೀಸ್ ರೆಸ್ಟೋರೆಂಟ್​ನ ಇತ್ತೀಚೆಗೆ ಒಂದು ವಾರ ಕಳೆದ್ರೂ ಸಹ ಓಪನ್​ ಮಾಡಿರ್ಲಿಲ್ಲವಂತೆ. ಆಗ ನೆರೆಹೊರೆಯವರಿಗೆ ಕಳವಳ ಶುರುವಾಗಿದೆ. ಲಾಸ್​​ನಲ್ಲೂ ಇಲ್ಲದ ರೆಸ್ಟೋರೆಂಟ್​ನ್ನ ಸುಜುಕಿ ಯಾಕೆ ತೆರೆಯುತ್ತಿಲ್ಲ ಎಂದು ಅನುಮಾನ ಬಂದು, ಅವರು ಸೀದಾ ವಿಷಯವನ್ನ ಪೊಲೀಸರಿಗೆ ಮುಟ್ಟಿಸಿದ್ದಾರೆ. ಕೂಡಲೇ ಸ್ಟಳಕ್ಕೆ ಬಂದ ಪೊಲೀಸರು ಸುಜುಕಿಯನ್ನ ವಿಚಾರಣೆ ನಡೆಸಿದ್ದಾರೆ.

publive-image

ಬಚ್ಚಲು ಮನೆಯಲ್ಲಿ ಅಸ್ಥಿಪಂಜರ ಕಂಡು ದಂಗಾದ ಪೊಲೀಸರು!
2 ವರ್ಷದಿಂದ ಮುಚ್ಚಿಟ್ಟಿದ್ದ ತಂದೆಯ ಮೃತ ದೇಹ ಈಗ ಅಸ್ಥಿಪಂಜರವಾಗಿದೆ. ಬಹುಶಃ ಆ ಅಸ್ಥಿಪಂಜರವನ್ನ ಎಲ್ಲಾದರೂ ಬಿಸಾಕೋ ಪ್ರಯತ್ನಲ್ಲಿದ್ದನೋ ಏನೋ.. ಆದರೆ ಪೊಲೀಸರ ಎಂಟ್ರಿಯಿಂದ ಸುಜುಕಿ ಭಯಭೀತನಾಗಿದ್ದ. ಸುಜುಕಿಯ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಈತ ಏನನ್ನೊ ಮುಚ್ಚಿಡುತ್ತಿದ್ದಾನೆ ಎಂದು ತಿಳಿದು ರೆಸ್ಟೋರೆಂಟ್​ ಸರ್ಚ್​​​ ಮಾಡಿದ್ದಾರೆ. ರೆಸ್ಟೋರೆಂಟ್​​ನಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಬಚ್ಚಲು ಮನೆಯ ಒಳಗೆ ಮಗ ಅಡಗಿಸಿಟ್ಟಿದ್ದ ತಂದೆಯ ಅಸ್ಥಿಪಂಜರ ಸಿಕ್ಕಿದೆ.

ಇದನ್ನೂ ಓದಿ: ಕೋಳಿ ಮಾಂಸ ತಿಂದ್ರೆ ಅಕಾಲಿಕ ಮರಣ, ಭಯಾನಕ ಕ್ಯಾನ್ಸರ್..! ವಾರದಲ್ಲಿ ಎಷ್ಟು ತಿನ್ನಬಹುದು..? 

ದಿಗ್ಭ್ರಮೆಗೊಂಡ ಪೊಲೀಸರು ಸುಜುಕಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸುಜುಕಿ ತನ್ನ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿ, ತಂದೆ ಶವ ಬಚ್ಚಿಡೋದರ ಹಿಂದಿನ ಕಥೆ ವಿವರಿಸಿದ್ದಾನೆ. ಏನೇ ಆರ್ಥಿಕ ಕಷ್ಟ ಇದ್ದರೂ ತಂದೆಯ ಕೊನೆಯ ಕಾರ್ಯಗಳನ್ನ ಮಾಡದೇ ಇದ್ದದ್ದು ತಪ್ಪು. ಅದೂ ಅಲ್ಲದೇ ಶವ ಬಚ್ಚಿಟ್ಟಿದ್ದು ಅಪರಾಧ. ಈ ಕಾರಣಕ್ಕೆ ಪೊಲೀಸರು ಸುಜುಕಿಯನ್ನ ಬಂಧಿಸಿದ್ದಾರೆ. ಜೊತೆಗೆ ತಂದೆಯ ಪಿಂಚಣಿಯನ್ನೂ ದುರುಪಯೋಗ ಮಾಡಿಕೊಂಡಿರಬಹುದು ಎಂದು ತನಿಖೆ ನಡೆಸುತ್ತಿದ್ದಾರೆ.

ಜಪಾನ್​ನಲ್ಲಿ ಅಂತಿಮ ಸಂಸ್ಕಾರಕ್ಕೆ ದುಬಾರಿ ಖರ್ಚು!
ಜಪಾನ್‌ನಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಅಂತಲೇ 1.3 ಮಿಲಿಯನ್. ಅಂದರೆ ಭಾರತದ ರೂಪಾಯಿ ಪ್ರಕಾರ 13 ಲಕ್ಷದವರೆಗೂ ಖರ್ಚಾಗುತ್ತೆ. ಇದು ಸಾಂಕ್ರಾಮಿಕ ರೋಗಗಳ ಸಮಯದಲ್ಲಿ ಕಮ್ಮಿಯಾಗಿದೆ. ಇಷ್ಟು ಹಣವನ್ನು ಅಂತ್ಯಕ್ರಿಯೆಗಾಗಿ ಬಳಕೆ ಮಾಡೋಕೆ ಜನ ಹಿಂದೇಟು ಹಾಕಿದ್ದಾರೆ. ಸುಜುಕಿ ಮಾಡಿದ್ದು ಮಾಡಿದ್ದು ಇದೇ ಮೊದಲಲ್ಲ. ಜಪಾನ್‌ನಲ್ಲಿ ಹೀಗೆ ಅನೇಕರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅದೇ 2023 ರಲ್ಲಿ, 56 ವರ್ಷದ ನಿರುದ್ಯೋಗಿ ಒಬ್ಬ, ಇದೇ ಅಂತ್ಯಕ್ರಿಯೆ ಖರ್ಚಿಗೆ ಹೆದರಿ, ತನ್ನ 72 ವರ್ಷದ ತಾಯಿಯ ಮೃತದೇಹವನ್ನ ಮೂರು ವರ್ಷಗಳ ಕಾಲ ಮನೆಯಲ್ಲೇ ಇಟ್ಟುಕೊಂಡಿದ್ದನಂತೆ. ಹಾಗೆ ಆಕೆಗೆ ಬರುವ ಪಿಂಚಣಿಯನ್ನು ಪಡೆಯುತ್ತಿದ್ದನಂತೆ. ಮುಂದಿನ ದಿನಗಳಲ್ಲಿ ಅಂತ್ಯಕ್ರಿಯೆ ಕಾರ್ಯಕ್ಕೆ ಒಂದು ಮಿಲಿಯನ್​ಗಿಂತ ಕಡಿಮೆ ಇದ್ದರೇ ಒಳಿತು ಅನ್ನೋ ಅಭಿಪ್ರಾಯ ಅಲ್ಲಿನ ಜನರದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment