/newsfirstlive-kannada/media/post_attachments/wp-content/uploads/2024/03/PRABUDEV_NISHVIKA.jpg)
ರಿಲೀಸ್ಗೆ ರೆಡಿಯಾಗಿರುವ ಕರಟಕ ದಮನಕ ಸಿನಿಮಾ ಹಾಡುಗಳಿಂದಲೇ ಸಖತ್ ಸೌಂಡ್ ಮಾಡುತ್ತಿದೆ. ಯೋಗರಾಜ್ ಭಟ್ ಅವರ ಲಿರಿಕ್ಸ್, ಪದಗಳ ಪ್ರಯೋಗಕ್ಕೆ ಕನ್ನಡ ಚಿತ್ರರಂಗ ಯಾವಾಗಲೋ ಮನಸೋತಿದೆ. ಇದೀಗ ತಾವೇ ನಿರ್ದೇಶನ ಮಾಡಿದ ಕರಟಕ ದಮನಕ ಮೂವಿಯ ಮತ್ತೊಂದು ಸಾಂಗ್ ರಿಲೀಸ್ ಆಗಿದ್ದು ಯೋಗರಾಜ್ ಭಟ್ ಅವರ ಸಾಹಿತ್ಯಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಈಗಾಗಲೇ ಈ ಸಿನಿಮಾದ ಸಾಂಗ್ಸ್ ಬಿಡುಗಡೆಯಾಗಿ ಫುಲ್ ಹಿಟ್ ಆಗಿವೆ. ಇದರ ಜೊತೆಗೆ ಚಿತ್ರತಂಡ ಇನ್ನೊಂದು ಸಾಂಗ್ ಅನ್ನು ರಿಲೀಸ್ ಮಾಡಿದೆ. ಉತ್ತರ ಕರ್ನಾಟದ ಸಿಂಗರ್ ಮಾಳು ನಿಪನಾಳ ಸೊಗಸಾಗಿ ಹಾಡನ್ನು ಹಾಡಿದ್ದು ಸಾಹಿತ್ಯವಂತೂ ಎಲ್ಲರನ್ನು ಸೆಳೆಯುವಂತೆ ಇದೆ. ಸಾಂಗ್ಗೆ ಹಾಕಿರುವ ಸೆಟ್ ಅಂತೂ ಕಲಪರ್ ಫುಲ್ ಆಗಿ ಇದ್ದು ಪ್ರಭುದೇವ, ನಿಶ್ವಿಕಾ ನಾಯ್ಡು ಮನಸಿಗೆ ಮುದ ನೀಡುವಂತೆ ಡ್ಯಾನ್ಸ್ ಮಾಡಿದ್ದಾರೆ.
ಹಿತ್ತಲಕ ಕರಿಬ್ಯಾಡ ಮಾವ ಬಲೆ ನಾಚಿಕೆ ಆಗತೈತಿ, ಒತ್ತಿಕೊಂಡು ನಿಲ್ಲಬೇಡ ಮಾವ, ಎದಿ ಗಾಬರಿ ಆಗತೈತಿ, ಗಡ, ಗಡ ಗಡ ನಡುಗಿಸಿ ಹೊಡಿ ನಿನ್ನ ನಡ ಎನ್ನುವ ಯೋಗರಾಜ್ ಭಟ್ರ ಹಾಡಿನ ಸಾಹಿತ್ಯ ಯಾವುದಕ್ಕೂ ಕಡಿಮೆ ಇಲ್ಲ. ಹಾಡಿನ ಪದಗಳ ಗುಚ್ಚ ಸರದಲ್ಲಿನ ಮಣಿಗಳಂತೆ ಜೋಡಿಸಲಾಗಿದೆ. ಭಟ್ರ ಹಾಡಿನ ಬಿಸಿ ಗೊತ್ತಾಗಬೇಕು ಅಂದ್ರ ನೀವು ಒಂದ್ಸಲಾ ಹಾಡನ್ನ ಕೇಳಬೇಕಾಗುತ್ತದೆ.
ಇದನ್ನು ಓದಿ:ಪ್ರಿಯಾ ಜೊತೆ ರೊಮ್ಯಾನ್ಸ್ ಮಾಡಿದ ಶಿವರಾಜ್ ಕುಮಾರ್.. ‘ಮೀಟದೇನೆ ವೀಣೆ’ ಸಾಂಗ್ ವಿಶೇಷ ಏನು?
ಫಸ್ಟ್ ಟೈಮ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಒಟ್ಟಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂವಿಗೆ ರಾಕ್ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡಿದ್ದು, ಭಟ್ರು ಡೈರೆಕ್ಟ್ ಮಾಡಿದ್ದಾರೆ. ಚಿತ್ರವು ಪಂಚತಂತ್ರದ ಪ್ರಮುಖ ಪಾತ್ರಗಳಾದ ಕರಟಕ ದಮನಕದಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಇನ್ನೇನು ಮುಂದಿನ ವಾರ ‘ಕರಟಕ ದಮನಕ’ ಬಿಡುಗಡೆ ಆಗಲಿದೆ. ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ