/newsfirstlive-kannada/media/post_attachments/wp-content/uploads/2023/10/LPG_Cylinder_Price_1.jpg)
ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. 19 ಕೆಜಿ LPG ಸಿಲಿಂಡರ್ ಬೆಲೆ ಇಳಿಕೆ ಆಗಿದೆ.
ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಸುಮಾರು 14.5 ರೂಪಾಯಿಯಿಂದ 17 ರೂಪಾಯಿವರೆಗೆ ಇಳಿಸಿವೆ.
ಇದನ್ನೂ ಓದಿ: ಕನ್ಫ್ಯೂಸ್ ಆಗ್ಬೇಡಿ.. ಈಕೆ ಬಾಲಿವುಡ್ ಬೆಡಗಿಯಲ್ಲ, ಕನ್ನಡದ ಕ್ಯೂಟ್ ನಟಿ; ಯಾರಿದು?
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಚೆನ್ನೈನಲ್ಲಿ 1900 ರೂಪಾಯಿ ಆಗಿದ್ದರೆ ಮುಂಬೈನಲ್ಲಿ 1700 ರೂಪಾಯಿ ಆಗಿದೆ. ದೆಹಲಿಯಲ್ಲಿ 1747 ರೂಪಾಯಿ ಆಗಿದೆ. ಹಾಗೆ ಕೋಲ್ಕತ್ತದಲ್ಲಿ 1851.50 ರೂಪಾಯಿ ಆಗಿದೆ. ಬೆಂಗಳೂರಲ್ಲಿ 1769.50 ರೂಪಾಯಿ ಇದೆ.
ಗೃಹ ಬಳಕೆಯ ಸಿಲಿಂಡರ್ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ ಏಪ್ರಿಲ್ 8 ರಂದು 803 ರೂಪಾಯಿಯಿಂದ 853 ರೂಪಾಯಿಗೆ ಏರಿಕೆ ಆಗಿತ್ತು. ಇನ್ನು ಉಜ್ವಲ್ ಸ್ಕೀಮ್ ಅಡಿಯಲ್ಲಿ ಬರುವ ಸಿಲಿಂಡರ್ ಬೆಲೆ 503 ರಿಂದ 553 ರೂಪಾಯಿಗೆ ಏರಿಕೆ ಆಗಿತ್ತು. ಈ ಬಾರಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ಇದನ್ನು ಓದಿ: ಪ್ಲೇ-ಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದ ಧೋನಿ.. IPL ಇತಿಹಾಸದಲ್ಲಿ ಚೆನ್ನೈ ಕೆಟ್ಟ ದಾಖಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ