Advertisment

ಕಷ್ಟದಲ್ಲಿ ಕೈ ಹಿಡಿದಿದ್ದ ಫ್ರೆಂಡ್​ನನ್ನು ಮರೆತ್ತಿಲ್ಲ ಕೂಲ್​ ಕ್ಯಾಪ್ಟನ್.. ಧೋನಿ ಗೆಳೆಯ ಚಿಟ್ಟು ಈಗ ಏನಾಗಿದ್ದಾರೆ?

author-image
Bheemappa
Updated On
ಕಷ್ಟದಲ್ಲಿ ಕೈ ಹಿಡಿದಿದ್ದ ಫ್ರೆಂಡ್​ನನ್ನು ಮರೆತ್ತಿಲ್ಲ ಕೂಲ್​ ಕ್ಯಾಪ್ಟನ್.. ಧೋನಿ ಗೆಳೆಯ ಚಿಟ್ಟು ಈಗ ಏನಾಗಿದ್ದಾರೆ?
Advertisment
  • MS ಧೋನಿ ದೀ ಅನ್​ಟೋಲ್ಡ್​ ಸ್ಟೋರಿ ಬಯೋಪಿಕ್​ನಲ್ಲಿ ಸ್ನೇಹಿತ
  • ಬಾಲ್ಯದ ಸ್ನೇಹಿತನ ಬದುಕಿಗೆ ಆಶ್ರಯವಾಗಿ ನಿಂತ ಎಂ.ಎಸ್​ ಧೋನಿ
  • ಇವತ್ತಿನ ಸಖತ್ ಸ್ಟೋರಿಯಲ್ಲಿ ಧೋನಿ ಸ್ನೇಹಿತ ಈಗ ಏನಾಗಿದ್ದಾನೆ?

ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರು ಬಂದ ದಾರಿಯನ್ನ ಎಂದು ಮರೆಯಬಾರದು ಅಂತಾರೆ. ಈ ಮಾತಿಗೆ ತಕ್ಕಂತೆ ಬದುಕ್ತಾ ಇದ್ದಾರೆ ಲೆಜೆಂಡ್ ಧೋನಿ. ಸಕ್ಸಸ್​ ಅನ್ನ ಪೀಕ್​ನಲ್ಲಿರುವ ಮಾಹಿ ಈಗಲು ಕಷ್ಟದ ದಿನಗಳಲ್ಲಿ ಜೊತೆ ನಿಂತವರನ್ನ ಬಿಟ್ಟಿಲ್ಲ. ಬಾಲ್ಯದ ಸ್ನೇಹಿತನ ಬದುಕಿಗೆ ಆಶ್ರಯವಾಗಿ ನಿಂತಿರೋ ಧೋನಿಯ ಕತೆಯನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

Advertisment

[caption id="attachment_4866" align="aligncenter" width="800"]publive-image ಸಿಮಂತ್ ಲೊಹಾನಿ ಅಲಿಯಾಸ್ ಚಿಟ್ಟು ಜೊತೆ M.S ಧೋನಿ[/caption]

ಮಹೇಂದ್ರ ಸಿಂಗ್ ಧೋನಿ ಈ ದಿಗ್ಗಜನ ಕ್ರಿಕೆಟ್ ಬದುಕೇ ಒಂದು ಸ್ಫೂರ್ತಿ. ಜೀರೋದಿಂದ ಆರಂಭಿಸಿ ಹಿರೋ ಆಗಿ ಬೆಳೆದಿರೋ ಧೋನಿ ಫ್ಯಾನ್ಸ್ ಪಾಲಿನ ಹೀರೋ. ಆದ್ರೆ, ಸ್ನೇಹಿತರ ಪಾಲಿಗೆ ಇಂದಿಗೂ ಅದೇ ಮಾಹಿ. ಮಾಹಿಯ ಫ್ರೆಂಡ್ ಲಿಸ್ಟ್ ತೆಗೆದ್ರೆ, ಸಿಮಂತ್ ಲೊಹಾನಿ ಅಲಿಯಾಸ್ ಚಿಟ್ಟು ಹೆಸರು ಮೊದಲ ಸಾಲಿನಲ್ಲಿ ಇರುತ್ತೆ. ಸೀಮಂತ್ ಲೊಹಾನಿ ಅಂದ್ರೆ ಧೋನಿಗೆ ಅಷ್ಟೊಂದು ಅಚ್ಚುಮೆಚ್ಚು. ಈ ಬೆಸ್ಟ್ ಸ್ನೇಹಿತನಿಲ್ಲದ ಮಾಹಿಯ ಜೀವನವೇ ಅಪೂರ್ಣ ಅನ್ನುವಷ್ಟರ ಮಟ್ಟಿಗೆ ಇಬ್ಬರು ಕುಚಿಕು ಗೆಳೆಯರು.

ಬೈಕ್​ನಲ್ಲಿ ಧೋನಿಯನ್ನು ಪಿಕ್​ ಮಾಡುತ್ತಿದ್ದ ಚಿಟ್ಟು

ಧೋನಿ ಹಾಗೂ ಶೀಮಂತ್ ಲೊಹಾನಿ ಬಾಲ್ಯದ ಸ್ನೇಹಿತರು. ಚಿಕ್ಕಂದಿನಿಂದಲೇ ಜೊತೆಯಾಗಿ ಆಡಿ ಬೆಳೆದವರು. ಕಾಲೇಜ್ ಟೈಮ್​ನಲ್ಲಿ ಎಕ್ಸಾಮ್ಸ್ ಇದ್ದಾಗ ಚಿಟ್ಟು ಮಾಹಿಯನ್ನ ತಮ್ಮ ಬೈಕ್​ನಲ್ಲಿ ಪಿಕ್ ಮಾಡ್ತಿದ್ರು. ಧೋನಿ ಬೇರೆ ರಾಜ್ಯದ ಪರ ಕ್ರಿಕೆಟ್ ಆಡುವಾಗಲು ಇವರೇ ಹೋಗಿ ನೆಚ್ಚಿನ ಸ್ನೇಹಿತನನ್ನ ಕರೆದುಕೊಂಡು ಬರುತ್ತಿದ್ದರು. ಎಂಎಸ್ ಧೋನಿ ದೀ ಅನ್​ಟೋಲ್ಡ್​ ಸ್ಟೋರಿ ಬಯೋಪಿಕ್ ನೋಡಿದ್ರೆ, ಈ ಕ್ಯಾರೆಕ್ಟರ್ ನಿಮಗೆ ನೆನಪಿರುತ್ತೆ.

Advertisment

publive-image

ಮಾಹಿಯ ಕ್ರಿಕೆಟ್ ಜರ್ನಿ ಆರಂಭವಾದಾಗಿನಿಂದ ಜೊತೆಗಿದ್ದ ಈ ಸೀಮಂತ್ ಲೊಮಾನಿ, ಈಗ ಬರೀ ಧೋನಿಯ ಬೆಸ್ಟ್ ಫ್ರೆಂಡ್ ಆಗಿ ಮಾತ್ರ ಉಳಿದಿಲ್ಲ. ಮಾಹಿಯ ಬ್ಯುಸಿನೆಸ್ ಪಾರ್ಟ್​ನರ್ ಆಗಿದ್ದಾರೆ. ಚಡ್ಡಿದೋಸ್ತ್ ಚಿಟ್ಟು ಅವರೇ ಧೋನಿ ಅವರ ಎಂಡೋರ​ಸ್ಮೆಂಟ್ ವ್ಯವಹಾರಗಳನ್ನ ನೋಡಿಕೊಳ್ತಿದ್ದಾರೆ. ಜೊತೆಗೆ ಧೋನಿ ಕ್ರಿಕೆಟ್ ಅಕಾಡಮಿಗೆ ಇವರೇ ಇನ್​ಚಾರ್ಜ್​. ಸ್ನೇಹಿತನನ್ನ ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡಿರೋ ಧೋನಿ ಅಂದು ಕಷ್ಟಕ್ಕೆ ನೆರವಾದವನನ್ನ, ಸುಖದಲ್ಲೂ ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment

Advertisment
Advertisment
Advertisment