Advertisment

VIDEO: '10 ಕೆಜಿ ಅಕ್ಕಿಯಲ್ಲಿ 1 ಗ್ರಾಂ ಕಡಿಮೆಯಾದ್ರೂ ಒಪ್ಪೋದಿಲ್ಲ'- ಸಿದ್ದರಾಮಯ್ಯ ಸರ್ಕಾರಕ್ಕೆ ಬಿಎಸ್‌ವೈ ಖಡಕ್‌ ಸವಾಲು

author-image
admin
Updated On
ಬಿಜೆಪಿಯಲ್ಲಿ ಮತ್ತೆ ಪುಟಿದೆದ್ದು ನಿಂತ ಬಿ.ಎಸ್​.ಯಡಿಯೂರಪ್ಪ.. ನಿನ್ನೆ ಬೆಂಗಳೂರಲ್ಲಿ ಮಾಡಿದ ಶಪಥ ಏನು ಗೊತ್ತಾ..?
Advertisment
  • ನೀವು ಎಲ್ಲಾದ್ರೂ ಅಕ್ಕಿಯನ್ನು ಖರೀದಿ ಮಾಡಿ ಅದು ನಮಗೆ ಗೊತ್ತಿಲ್ಲ
  • ಪ್ರಧಾನಿ ನರೇಂದ್ರ ಮೋದಿ ಅವ್ರು ಹೆಚ್ಚುವರಿ ಅಕ್ಕಿ ಕೊಡಲು ಒಪ್ಪಿರಲಿಲ್ಲ
  • 10 ಕೆಜಿ ಅಕ್ಕಿಯನ್ನು ಕೊಡಲೇಬೇಕು ಅದು ನಿಮ್ಮ ಜವಾಬ್ದಾರಿಯಾಗಿದೆ

ಶಿವಮೊಗ್ಗ: ಅನ್ಯಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿ ಕೊಟ್ಟ ಮೇಲೆ ರಾಜ್ಯ ರಾಜಕೀಯದಲ್ಲಿ ಅಕ್ಕಿ ಪಾಲಿಟಿಕ್ಸ್ ಜೋರಾಗಿದೆ. ವಿರೋಧ ಪಕ್ಷ ಬಿಜೆಪಿ ನಾಯಕರಂತೂ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು 10 ಕೆಜಿ ಅಕ್ಕಿಯಲ್ಲಿ 1 ಗ್ರಾಂ ಕಡಿಮೆಯಾದ್ರೂ ಜನ ಒಪ್ಪೋದಿಲ್ಲ. ನೀವು ಎಲ್ಲಾದ್ರೂ ಅಕ್ಕಿಯನ್ನು ಖರೀದಿ ಮಾಡಿ ಅದು ನಮಗೆ ಗೊತ್ತಿಲ್ಲ. ಆದ್ರೆ ಕೊಟ್ಟ ಭರವಸೆಯನ್ನು ಈಡೇರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

Advertisment

ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷದವರು ಉದ್ದೇಶಪೂರ್ವಕವಾಗಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಉಚಿತವಾಗಿ 5 ಕೆಜಿ ಅಕ್ಕಿಯನ್ನು ಕೊಡ್ತಿದೆ. ಹೆಚ್ಚುವರಿಯಾಗಿ ಕೊಡೋದಕ್ಕೆ ಕೇಂದ್ರ ಸರ್ಕಾರ ಏನು ಒಪ್ಪಿರಲಿಲ್ಲ ಎಂದರು.

ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋದ ನನ್ನ ಹೆಂಡ್ತಿ ಇನ್ನೂ ಬಂದಿಲ್ಲ.. ಫ್ರೀ ಬಸ್​ ಬಿಟ್ಟಾಗಿಂದ ಮನೆಯಲ್ಲಿ ಅಡುಗೆ ಮಾಡ್ತಿಲ್ಲ ಎಂದ ಪತಿರಾಯ

10 ಕೆಜಿ ಅಕ್ಕಿ ಕೊಡೋದು ರಾಜ್ಯ ಸರ್ಕಾರದ ಜವಾಬ್ದಾರಿ. ಸರ್ಕಾರ ಎಲ್ಲಾದ್ರೂ ಖರೀದಿ ಮಾಡಲಿ. ರಾಜ್ಯದ ಜನರಿಗೆ ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿಯನ್ನು ಕೊಡಲೇಬೇಕು. 10 ಕೆಜಿಯಲ್ಲಿ 1 ಗ್ರಾಂ ಕಡಿಮೆಯಾದ್ರೂ ಕೂಡ ಜನ ಒಪ್ಪುವುದಿಲ್ಲ. ಆದ್ರಿಂದ ಕೊಟ್ಟ ಭರವಸೆಯನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಬಿಎಸ್‌ವೈ ಹೇಳಿದರು.

Advertisment

publive-image

ಇನ್ನು, ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂಷಿಸೋದು ಸರಿಯಲ್ಲ. ಪ್ರಧಾನಿ ಮೋದಿ ಅವರು ಯಾವ ಸಂದರ್ಭದಲ್ಲೂ ಹೆಚ್ಚುವರಿಯಾಗಿ ಅಕ್ಕಿ ಕೊಡುತ್ತೇವೆ ಎಂದು ಹೇಳಿಲ್ಲ. ಈಗ ಕೊಡ್ತಾ ಇರೋ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಮೋದಿಯವರು ಕೊಡ್ತಿದ್ದಾರೆ. ಈಗಲಾದ್ರೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಗೊಂದಲ ಉಂಟು ಮಾಡಬಾರದು. ಅಕ್ಕಿಯನ್ನು ಎಲ್ಲಾದರೂ ತರಲಿ ಒಟ್ಟಿನಲ್ಲಿ ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿಯನ್ನು ಕೊಡಲೇಬೇಕು. ಅದು ಅವರ ಜವಾಬ್ದಾರಿಯಾಗಿದೆ. ಆ ಒತ್ತಾಯವನ್ನು ನಾನು ಮಾಡುತ್ತೇನೆ.

10 ಕೆಜಿ ಅಕ್ಕಿಯಲ್ಲಿ 1 ಗ್ರಾಂ ಕಡಿಮೆಯಾದ್ರೂ ಜನ ಒಪ್ಪೋದಿಲ್ಲ. ಎಲ್ಲಾದ್ರೂ ಅಕ್ಕಿಯನ್ನು ಖರೀದಿ ಮಾಡಲಿ ಕೊಟ್ಟ ಭರವಸೆಯನ್ನು ಸಿಎಂ ಸಿದ್ದರಾಮಯ್ಯ ಭರವಸೆ ಈಡೇರಿಸಬೇಕು ಎಂದು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment

Advertisment
Advertisment
Advertisment