ನೇಪಾಳದಲ್ಲಿ ಐಷಾರಾಮಿ ಹೋಟೆಲ್​​; ಭಾರತದಲ್ಲಿ ಕೋಟಿಗಟ್ಟಲೇ ಆಸ್ತಿ; ಖತರ್ನಾಕ್​​ ಕಳ್ಳ ಪೊಲೀಸರಿಗೆ ಸಿಕ್ಕಿದ್ದು ಹೇಗೆ?

author-image
Veena Gangani
Updated On
ನೇಪಾಳದಲ್ಲಿ ಐಷಾರಾಮಿ ಹೋಟೆಲ್​​; ಭಾರತದಲ್ಲಿ ಕೋಟಿಗಟ್ಟಲೇ ಆಸ್ತಿ; ಖತರ್ನಾಕ್​​ ಕಳ್ಳ ಪೊಲೀಸರಿಗೆ ಸಿಕ್ಕಿದ್ದು ಹೇಗೆ?
Advertisment
  • ಬರೋಬ್ಬರಿ 200ಕ್ಕೂ ಹೆಚ್ಚು ಮನೆಯಲ್ಲಿ ಕಳ್ಳತನ
  • ಈ ಖದೀಮನ ಆಸ್ತಿ ಕಂಡು ಪೊಲೀಸರೇ ಶಾಕ್​!
  • ಐಷಾರಾಮಿ ನಿವಾಸಗಳೇ ಈತನ ಮುಖ್ಯ ಟಾರ್ಗೆಟ್

ನವದೆಹಲಿ: ಬರೋಬ್ಬರಿ 200ಕ್ಕೂ ಹೆಚ್ಚು ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಹೈ ಪ್ರೊಫೈಲ್ ಖದೀಮನನ್ನು ದೆಹಲಿ ಪೊಲೀಸ್​​ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೋಜ್ ಚೌಬೆ (48) ಬಂಧಿತ ಆರೋಪಿ.

ಬಂಧಿತ ಆರೋಪಿಯ ಬಳಿ ಇರುವ ಆಸ್ತಿ ವಿವರವನ್ನು ಪರಿಶೀಲಿಸಿದ ಪೊಲೀಸ್​ ಅಧಿಕಾರಿಗಳು ಶಾಕ್​ ಆಗಿದ್ದಾರೆ. ಬಂಧಿತ ಆರೋಪಿ ಮನೋಜ್ ಚೌಬೆ 1997ರಲ್ಲಿ ದೆಹಲಿಗೆ ಬಂದಿದ್ದಾಗ ಕ್ಯಾಂಟೀನ್​ವೊಂದರಲ್ಲಿ ಕಳ್ಳತನ ಕೇಸ್​​ನಲ್ಲಿ ಸಿಕ್ಕಿಬಿದಿದ್ದ. ಬಳಿಕ  ಇದನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಕಳ್ಳ ಕದ್ದ ಹಣದಿಂದ ನೇಪಾಳದಲ್ಲಿ ಹೋಟೆಲ್ ನಿರ್ಮಿಸಿದ್ದಾರೆ. ದೇಶಾದ್ಯಂತ ಸುಮಾರು 500ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರೋ ಆರೋಪಿಗೆ ಇಬ್ಬರು ‌ಹೆಂಡತಿಯರು ಇದ್ದಾರೆ. ಓರ್ವ ಹೆಂಡತಿ ಲಕ್ನೋದಲ್ಲಿ ವಾಸವಾಗಿದ್ದು, ಮತ್ತೊಬ್ಬ ಪತ್ನಿ ದೆಹಲಿಯಲ್ಲಿದ್ದಾಳೆ. ಲಕ್ನೋದಲ್ಲಿ ಮನೆ, ಗೆಸ್ಟ್ ಹೌಸ್, ಅಪಾರ ಪ್ರಮಾಣದ ಆಸ್ತಿಯನ್ನು ಹೊಂದಿರುವ ಮನೋಜ್ ಚೌಬೆ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಖತರ್ನಾಕ್ ಕಳ್ಳನ ಸುಳಿವು ಸಿಕ್ಕಿದ್ದೇಗೆ..?

ಈ ಖತರ್ನಾಕ್ ಕಳ್ಳ ಕನಿಷ್ಠ ಒಂಬತ್ತು ಬಾರಿ ದೆಹಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರೂ ಪ್ರತಿ ಬಾರಿಯೂ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ.  ಹೇಗಾದರೂ ಮಾಡಿ ಈ ಕಳ್ಳನನ್ನು ಹಿಡಿಯಲೇಬೇಕೆಂದು ಪೊಲೀಸರು ಆತನ ಚಲನವಲನವನ್ನು ಗಮನಿಸುತ್ತಿದ್ದರು. ಒಂದು ದಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಾಡೆಲ್ ಟೌನ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಕಳ್ಳತನ ಮಾಡಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ. ಆದರೆ ಈ ಕುರಿತು ತನಿಖೆಗೆ ಮುಂದಾಗಿದ್ದ ಪೊಲೀಸ್​ ಅಧಿಕಾರಿಗಳು ಆತನ ಆಸ್ತಿ ವಿವರವನ್ನು ಕಂಡು ಶಾಕ್ ಆಗಿದ್ದಾರೆ​.

ಇನ್ನು, ಕಳ್ಳ ಮನೋಜ್ ಚೌಬೆಯ ಮಕ್ಕಳು ದೆಹಲಿಯ ಪ್ರತಿಷ್ಠಿತ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನೇಪಾಳದಲ್ಲಿ ದೊಡ್ಡ ಹೋಟೆಲ್ ಹೊಂದಿರೋ ಈತ ಭಾರತದಲ್ಲಿ ತನ್ನ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ಹೊಂದಿರುವುದು ತನಿಖೆ ಮೂಲಕ ತಿಳಿದು ಬಂದಿದೆ. ವಿಪರ್ಯಾಸ ಎಂದರೆ ಇಬ್ಬರು ಹೆಂಡತಿಗೂ ಈತ ಕಳ್ಳ ಎಂದು ತಿಳಿದಿಲ್ಲ. ಆರೋಪಿ 1997ರಲ್ಲಿ ದೆಹಲಿಗೆ ಬಂದಿದ್ದಾಗ ಕ್ಯಾಂಟೀನ್​ವೊಂದರಲ್ಲಿ ಕಳ್ಳತನ ಕೇಸ್​​ನಲ್ಲಿ ಸಿಕ್ಕಿಬಿದಿದ್ದ. ಐಷಾರಾಮಿ ಪ್ರದೇಶಗಳಲ್ಲಿರೋ ಮನೆಗಳೇ ಇತನ ಮುಖ್ಯ ಟಾರ್ಗೆಟ್​​ ಆಗಿತ್ತು ಎಂದು ವಾಯುವ್ಯ ದೆಹಲಿಯ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment