Advertisment

ಅಮೆರಿಕದಲ್ಲಿ ಹಿಂದೂಗಳ ಹಬ್ಬಕ್ಕೆ ರಜೆ.. ಮೋದಿ ಮೋಡಿ ಮಾಡಿದ ಬೆನ್ನಲ್ಲೇ ಭಾರತೀಯರಿಗೆ ಸಿಹಿಸುದ್ದಿ!

author-image
Bheemappa
Updated On
ಅಮೆರಿಕದಲ್ಲಿ ಹಿಂದೂಗಳ ಹಬ್ಬಕ್ಕೆ ರಜೆ.. ಮೋದಿ ಮೋಡಿ ಮಾಡಿದ ಬೆನ್ನಲ್ಲೇ ಭಾರತೀಯರಿಗೆ ಸಿಹಿಸುದ್ದಿ!
Advertisment
  • ಹಿಂದೂ ಹಬ್ಬಕ್ಕೆ ರಜೆ ಘೋಷಿಸಿದ ನ್ಯೂಯಾರ್ಕ್​ ಮೇಯರ್​
  • ಹಬ್ಬದ ದಿನದಂದು ಇನ್ನು ಮುಂದೆ ಶಾಲೆಗಳಿಗೆ ಸರ್ಕಾರಿ ರಜೆ
  • ಮೇಯರ್​ ನಿರ್ಧಾರಕ್ಕೆ USನಲ್ಲಿನ ಭಾರತೀಯರು ಫುಲ್​ ಖುಷ್

ವಾಷಿಂಗ್ಟನ್​ ಡಿ.ಸಿ: ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಮಾಡಿದ್ದೇ ತಡ ಅಲ್ಲಿ ಬದಲಾವಣೆ ಗಾಳಿ ಬೀಸಿದೆ. ದೀಪಾವಳಿಯಂದು ಶಾಲೆಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕೆಂದು ಹಲವು ವರ್ಷಗಳಿಂದ ಅಮೆರಿಕದಲ್ಲಿನ ಹಿಂದುಗಳ ಬೇಡಿಕೆಯಾಗಿತ್ತು. ಸದ್ಯ ಇದಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು ಅನಿವಾಸಿ ಭಾರತೀಯರು ಫುಲ್​ ಖುಷ್​ ಆಗಿದ್ದಾರೆ.

Advertisment

ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಅವರು ದೀಪಾವಳಿಯಂದು ಎಲ್ಲ ಶಾಲೆಗಳಿಗೆ ಸರ್ಕಾರಿ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸಭೆಯಲ್ಲಿದ್ದ ಎಲ್ಲ ಸದಸ್ಯರ ಒಮ್ಮತ ನಿರ್ಧಾರ ಮೇರೆಗೆ ಈ ಆದೇಶ ನೀಡಲಾಯಿತು ಎಂದು ಎರಿಕ್ ತಿಳಿಸಿದ್ರು. ಹಲವು ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ ಸರ್ಕಾರಿ ರಜೆ ನೀಡಬೇಕು ಎಂದು ಅಲ್ಲಿನ ಅನಿವಾಸಿ ಭಾರತೀಯರ ಬೇಡಿಕೆಯಾಗಿತ್ತು. ಆದ್ರೆ ಯಾರೂ ಕೂಡ ಇದಕ್ಕೆ ಸರಿಯಾಗಿ ಸ್ಪಂದನೆ ಮಾಡಿರಲಿಲ್ಲ ಎನ್ನಲಾಗಿದೆ.

publive-image

ಸದ್ಯ ಎರಿಕ್​ ಆಡಮ್ಸ್​ ಅವರು ಇದನ್ನು ತಮ್ಮ ಗಮನಕ್ಕೆ ತೆಗೆದುಕೊಂಡು ರಜೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್​ನಲ್ಲಿ, ಫೋಟೋಗಳನ್ನು ಶೇರ್​ ಮಾಡಿದ್ದು, ಕತ್ತಲೆ ಮೇಲೆ ಬೆಳಕಿನ ವಿಜಯದ ಸಂಕೇತ ದೀಪಾವಳಿ ಎಂದು ಮೇಯರ್ ಕ್ಯಾಪ್ಷನ್​ ಬರೆದಿದ್ದಾರೆ.

ದೀಪಾವಳಿ ಹಬ್ಬವನ್ನು ವಿದೇಶದಲ್ಲಿರುವ ಎಲ್ಲಾ ಭಾರತೀಯರು ಆಚರಣೆ ಮಾಡುತ್ತಾರೆ. ಇತ್ತೀಚೆಗೆ ಶ್ವೇತಭವನದಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ದೀಪಾವಳಿ ಆಚರಣೆ ಮಾಡಲಾಗಿತ್ತು. ಇದಕ್ಕೆ ಒತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದು ಅಲ್ಲದೇ ಮೊನ್ನೆ ಮೊನ್ನೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಭೇಟಿ ನೀಡಿ ಭಾರತಕ್ಕೆ ವಾಪಸ್ಸು ಆಗಿದ್ದರು. ಇದರ ಬೆನ್ನಲ್ಲೇ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದು ಭಾರತೀಯರಿಗೆ ಖುಷಿ ಕೊಟ್ಟಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment