/newsfirstlive-kannada/media/post_attachments/wp-content/uploads/2023/06/SACHIN_LAXMAN_1.jpg)
ವಿವಿಎಸ್ ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್ ಕಂಡ ಒನ್ ಆಫ್ ದೀ ಕ್ಲಾಸಿಕ್ ಬ್ಯಾಟ್ಸ್ಮನ್. ಆದರೆ ಲಕ್ಷ್ಮಣ್ ಟೆಸ್ಟ್ ಲೈಫ್ ಬದಲಿಸಿದ್ದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಶತಕಗಳ ಸರದಾರನ ಆ ಒಂದೇ ಒಂದು ಮಾತು ಲಕ್ಷ್ಮಣ್ ಹೆಸರು ಇತಿಹಾಸದ ಪುಟ ಸೇರಲು ಕಾರಣವಾಯಿತು. ಆ ಸ್ಫೂರ್ತಿದಾಯಕ ಕಥೆಯನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
/newsfirstlive-kannada/media/post_attachments/wp-content/uploads/2023/06/SACHIN_LAXMAN_BAJJI-300x169.jpg)
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್. ಈ ಸಾಲಿಗೆ ನಿಲ್ಲುವ ಮತ್ತೊಬ್ಬ ಆಟಗಾರ ಅಂದ್ರೆ ಅದು ವಿವಿಎಸ್ ಲಕ್ಷ್ಮಣ್. ಕ್ಲಾಸ್ ಆಟಕ್ಕೆ ಹೆಸರುವಾಸಿಯಾಗಿರೋ ಲಕ್ಷ್ಮಣ್ ವೃತ್ತಿ ಜೀವನದಲ್ಲಿ ಅದೆಷ್ಟೋ ಮೆಮೊರೆಬಲ್ ಇನ್ನಿಂಗ್ಸ್ ಕಟ್ಟಿದ್ದಾರೆ. ಆ ಪೈಕಿ 1999 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬಾರಿಸಿದ 167 ರನ್ ಅನ್ನ ಯಾರೊಬ್ಬರು ಮರೆಯಲಾರರು. ಯಾಕಂದ್ರೆ ಅದೊಂದು ಎಪಿಕ್ ಇನ್ನಿಂಗ್ಸ್. ಇಂತಹ ಎವರ್ ಗ್ರೀನ್ ಇನ್ನಿಂಗ್ಸ್ ಕಾರಣವಾಗಿದ್ದು ಸಚಿನ್ ತೆಂಡೂಲ್ಕರ್ರ ಆ ಒಂದೇ ಒಂದು ಸ್ಫೂರ್ತಿದಾಯಕ ಮಾತು.
/newsfirstlive-kannada/media/post_attachments/wp-content/uploads/2023/06/SACHIN_LAXMAN-300x169.jpg)
ಹೌದು, 1999 ರಲ್ಲಿ ಭಾರತ ತಂಡ ಆಸಿಸ್ ಪ್ರವಾಸ ಕೈಗೊಂಡಿತ್ತು. ಮೊದಲೆರಡು ಟೆಸ್ಟ್ ಪಂದ್ಯಗಳನ್ನ ಸೋತು ಸುಣ್ಣವಾಗಿತ್ತು. ಆಗ ಸಚಿನ್ ಮತ್ತು ಲಕ್ಷ್ಮಣ್ ಡಿನ್ನರ್ ಮುಗಿಸಿ ವಾಕಿಂಗ್ ಮಾಡುತ್ತಿದ್ದರು. ಆಗ ಸಚಿನ್ ಅವರು ಲಕ್ಷ್ಮಣ್ಗೆ ಒಂದು ಮಾತನ್ನು ಹೇಳ್ತಾರೆ. ಅದೇನಂದ್ರೆ ನೀವು ನನಗಿಂತ ಟ್ಯಾಲೆಂಟೆಡ್ ಅಂತಾರೆ. ಸಚಿನ್ರ ಈ ಮಾತು ಲಕ್ಷ್ಮಣ್ ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಮಾಸ್ಟರ್ ಬ್ಲಾಸ್ಟರ್ ಮಾತು ಕೇಳಿದ ಮೇಲೆ ಲಕ್ಷ್ಮಣ್ ಬ್ಯಾಟಿಂಗ್ನಲ್ಲಿ ಮಿಂಚಲಾರಂಭಿಸಿದ್ರು. ಸಿಡ್ನಿ ಟೆಸ್ಟ್ನಲ್ಲಿ ಅಮೋಘ 167 ರನ್ ಹೊಡೆದ್ರೆ, ಕ್ರಿಕೆಟ್ ಕಾಶಿ ಕೊಲ್ಕತ್ತಾದಲ್ಲಿ 232 ರನ್ ಬಾರಿಸಲು ಕ್ರಿಕೆಟ್ ದೇವರ ಸ್ಫೂರ್ತಿಯ ಮಾತುಗಳೇ ಕಾರವಾಯ್ತು. ಇದನ್ನ ಸ್ವತಃ ವಿವಿಎಸ್ ಲಕ್ಷ್ಮಣ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us