ದೂರು ನೀಡಿದ್ದವರಿಗೆ ಬೆದರಿಕೆ ಹಾಕಿದ್ರಾ ಉಪೇಂದ್ರ ಫ್ಯಾನ್ಸ್​​? ಏನಿದು ಹೊಸ ಸ್ಟೋರಿ?

author-image
Ganesh Nachikethu
Updated On
Advertisment
  • ರಿಯಲ್​ ಸ್ಟಾರ್​ ಉಪೇಂದ್ರ ವಿರುದ್ಧ ಜಾತಿ ನಿಂದನೆ ಆರೋಪ
  • ದೂರು ನೀಡಿದ್ದವರಿಗೆ ಬೆದರಿಕೆ ಹಾಕಿದ್ರಾ ಉಪೇಂದ್ರ ಫ್ಯಾನ್ಸ್​​?
  • ನಟ ಉಪೇಂದ್ರ ಶುರುವಾಯ್ತು ಮತ್ತೊಂದು ಸಂಕಷ್ಟ; ಏನದು?

ಬೆಂಗಳೂರು: ಸೋಷಿಯಲ್​ ಮೀಡಿಯಾ ಲೈವ್​ನಲ್ಲಿ ಅವಹೇಳನಕಾರಿ ಪದ ಬಳಸಿದ್ದ ಬುದ್ಧಿವಂತನ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ಕೂಡ ನಡೆದಿವೆ. ಈ ಮಧ್ಯೆ ಒಂದು ಎಫ್‌ಐಆರ್‌ಗೆ ಕೋರ್ಟ್​ನಿಂದ ಉಪೇಂದ್ರ ಸ್ಟೇ ಕೂಡಾ ತಂದಿದ್ದಾರೆ. ಇದರ ಬೆನ್ನಲ್ಲೇ ನಟ ಉಪೇಂದ್ರ ಫ್ಯಾನ್ಸ್​​ನಿಂದ ದೂರು ಕೊಟ್ಟವರಿಗೆ ಬೆದರಿಕೆ ಬರ್ತಿದ್ಯಂತೆ.

ಇವತ್ತು ಪೊಲೀಸ್​ ಆಯುಕ್ತರ ಕಚೇರಿಗೆ ಬಂದಿದ್ದ ದೂರುದಾರ ಗೋಪಾಲ್ ಗಿರಿಯಪ್ಪ ನನಗೆ ಜೀವ ಬೆದರಿಕೆ ಕರೆಗಳು ಬರ್ತಿದೆ. ದಯವಿಟ್ಟು ನನಗೆ ರಕ್ಷಣೆ ಕೊಡಿ ಎಂದು ಕಮಿಷನರ್​ ಬಳಿ ಮನವಿ ಮಾಡಿದ್ರು.

ಉಪೇಂದ್ರ ಬಳಸಿದ ಪದವನ್ನೇ ಬಳಸಿ ಸದ್ಯ ಕಾಂಟ್ರವರ್ಸಿಗೆ ಸಿಕ್ಕಿ ಹಾಕಿಕೊಂಡಿರೋದು ಸಚಿವ ಎಸ್.ಎಸ್​ ಮಲ್ಲಿಕಾರ್ಜುನ್ ಅವರ ವಿರುದ್ಧ ದಿವಾಕರ್​ ಅನ್ನೋರು ದೂರು ನೀಡಿದ್ರು. ಆದ್ರೆ ದೂರು ನೀಡಿದ್ರೂ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಲ್ಲ. ಹೀಗಾಗಿ ಎಫ್​ಐಆರ್​ ದಾಖಲಿಸುವಂತೆ ದಿವಾಕರ್​ ಮನವಿ ಮಾಡಿದ್ದಾರೆ.

ತಪ್ಪು ಯಾರು ಮಾಡಿದ್ರೂ ತಪ್ಪೇ. ಅಂಥಾದ್ರಲ್ಲಿ ಉಪ್ಪಿ ಅಭಿಮಾನಿಗಳು ದೂರು ಕೊಟ್ಟವರ ಮೇಲೆ ಬೆದರಿಕೆ ಹಾಕ್ತಿರೋದು ತಪ್ಪು. ಇದ್ರ ಜೊತೆಗೆ ಸಚಿವರ ವಿರುದ್ಧ ದೂರು ಕೊಟ್ರೂ ಎಫ್‌ಐಆರ್‌ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ಮಾಡ್ತಿರೋದು ಅಷ್ಟೇ ತಪ್ಪು. ನಟ ಉಪೇಂದ್ರ ಅವ್ರ ವಿಚಾರದಲ್ಲಿ ತಕ್ಷಣಕ್ಕೆ ಆದ ಕ್ರಮ ಸಚಿವರ ವಿರುದ್ಧ ಯಾಕಿಲ್ಲ? ಅವ್ರ ಬಗ್ಗೆ ಯಾಕೆ ಮೌನ? ಅನ್ನೋ ಪ್ರಶ್ನೆ ಜನರನ್ನ ಕಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment