Biparjoy Cyclone: ಬಿಪರ್​ಜಾಯ್ ರೌದ್ರಾವಾತಾರಕ್ಕೆ ಉಡುಪಿಯ ಕಾಪು ಬೀಚ್​ ಬಳಿ ಕಟ್ಟೆಚ್ಚರ

author-image
Bheemappa
Updated On
Biparjoy Cyclone: ಬಿಪರ್​ಜಾಯ್ ರೌದ್ರಾವಾತಾರಕ್ಕೆ ಉಡುಪಿಯ ಕಾಪು ಬೀಚ್​ ಬಳಿ ಕಟ್ಟೆಚ್ಚರ
Advertisment
  • ಗುಜರಾತ್, ಮಹಾರಾಷ್ಟ್ರದಲ್ಲಿ ಬಿಪರ್‌ಜಾಯ್ ಸೈಕ್ಲೋನ್​ ಭಯವೋ ಭಯ
  • ಚಂಡಮಾರುತದಿಂದ ಬೀಚ್​ ಬಳಿ ಪ್ರವಾಸಿಗರ ಸಂಚಾರ ಸಂಪೂರ್ಣ ನಿಷೇಧ
  • ಕರ್ನಾಟಕದ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿವೆ ದೊಡ್ಡ, ದೊಡ್ಡ ಗಾತ್ರದ ಅಲೆಗಳು

ಉಡುಪಿ: ಗುಜರಾತ್​, ಮಹಾರಾಷ್ಟ್ರ ಸೇರಿದಂತೆ ದೇಶದ ಕೆಲ ರಾಜ್ಯಗಳ ಕರಾವಳಿ ಭಾಗದಲ್ಲಿ ಬಿಪರ್​ಜಾಯ್ ಸೈಕ್ಲೋನ್​ ರೌದ್ರಾವಾತಾರ ತಾಳಿದೆ. ಬಿರುಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಬಿಪರ್​ಜಾಯ್ ಚಂಡಮಾರುತದ ಎಫೆಕ್ಟ್ ಕರ್ನಾಟಕದ ಕರಾವಳಿ ಭಾಗದ ಪ್ರದೇಶಗಳಿಗೂ ತಟ್ಟಲಿದೆ.

ಈ ಹಿನ್ನೆಲೆಯಲ್ಲಿ ಉಡುಪಿಯ ಪ್ರಸಿದ್ಧ ಕಾಪು ಬೀಚ್ ಬದಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಸ್ಥಳೀಯರಿಗೆ ಹಾಗೂ ಪ್ರವಾಸಿಗರು ಬೀಚ್​ ಬಳಿ ಸುಳಿಯದಂತೆ ಸೂಚನೆ ನೀಡಲಾಗುತ್ತಿದೆ. ಕಾಪು ಬೀಚ್, ಕಾಪು ಲೈಟ್ ಹೌಸ್‌ಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಬೀಚ್ ಬದಿ ಹಗ್ಗ ಕಟ್ಟಿ ಸಮುದ್ರದ ನೀರಿನಲ್ಲಿ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಈಗಾಗಲೇ ದಡಕ್ಕೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಇಂದು ಸಂಜೆ ವೇಳೆಗೆ ಅಲೆಗಳ ಅಬ್ಬರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment