newsfirstkannada.com

×

ಕಿಂಗ್​ ಕೊಹ್ಲಿ ವಿಶ್ವ ದಾಖಲೆ.. ಪರಮ ಗುರುವಿಗೆ ಶಿರಬಾಗಿ ನಮಿಸಿದ ವಿರಾಟ.!

Share :

Published November 16, 2023 at 7:07am

    ದಾಖಲೆ ಮುರಿದ್ರೂ ಮರೆಯಲಿಲ್ಲ ಅಭಿಮಾನ.!

    ವಾಂಖೆಡೆಯಲ್ಲಿ ಕ್ರಿಕೆಟ್​ ದೇವರನ್ನೇ ಮೀರಿ ನಿಂತ ಕೊಹ್ಲಿ

    ಸಚಿನ್​ ತವರಲ್ಲಿ ಸಚಿನ್​ ಎದುರು ಸಚಿನ್​ ದಾಖಲೆ ಬ್ರೇಕ್​

ಅಪಾರ ನಿರೀಕ್ಷೆ ಇಟ್ಟುಕೊಂಡು ವಾಂಖೆಡೆ ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೆ ಕಿಂಚಿತ್ತೂ ನಿರಾಸೆಯಾಗಲಿಲ್ಲ. ಜಯಭೇರಿ ಬಾರಿಸಿದ ಟೀಮ್​ ಇಂಡಿಯಾ ಫೈನಲ್​ ಎಂಟ್ರಿ ಕೊಟ್ರೆ, ಕಿಂಗ್​ ಕೊಹ್ಲಿ ವಿಶ್ವ ದಾಖಲೆಯನ್ನ ನಿರ್ಮಿಸಿಯೇ ಬಿಟ್ರು. ವಾಂಖೆಡೆ ಅಂಗಳದಲ್ಲಿ ಬೊಂಬಾಟ್​ ಆಟವಾಡಿದ ವಿರಾಟ್​ ಕೊಹ್ಲಿ, ಕ್ರಿಕೆಟ್​ ದೇವರನ್ನೇ ಮೀರಿ ನಿಂತರು.

2008 ಅಗಸ್ಟ್​ 18.. ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ಗೆ ಕಾಲಿಟ್ಟ ಆ ದಿನ ಯಾರು ಅಂದುಕೊಂಡಿರಲಿಲ್ಲ. ಮುಂದೊಂದು ದಿನ ಈತ ಕ್ರಿಕೆಟ್​ ಲೋಕವನ್ನ ಸುಲ್ತಾನನಂತೆ ಆಳ್ತಾನೆ ಅಂತಾ. ಸಚಿನ್​​ ತೆಂಡುಲ್ಕರ್​ ಮಾರ್ಚ್​ 16, 2012ರಂದು 49ನೇ ಏಕದಿನ ಸೆಂಚುರಿ ಸಿಡಿಸಿದಾಗಲೂ ಯಾರೂ ಅಂದುಕೊಂಡಿರಲಿಲ್ಲ. ಈ ದಾಖಲೆಯನ್ನ ಯಾರಾದ್ರೂ ಒಬ್ರು ಬ್ರೇಕ್​ ಮಾಡ್ತಾರೆ ಅಂತಾ.. ಆದ್ರೆ, ಯಾರು ಏನನ್ನ ಅಂದು ಕೊಂಡಿರಲಿಲ್ವೋ ಅದು ನಡೆದೇ ಬಿಡ್ತು.

ನ್ಯೂಜಿಲೆಂಡ್​ ವಿರುದ್ಧದ ನಿನ್ನೆಯ ಕದನದಲ್ಲಿ ಕೊಹ್ಲಿ ಶತಕ ಸಿಡಿಸಲಿ ಅನ್ನೋ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ನನಸಾಗಿ ಬಿಡ್ತು. ಸೂಪರ್​ ಡೂಪರ್​ ಆಟವಾಡಿದ ವಿರಾಟ್​ ಕೊಹ್ಲಿ ಅತ್ಯದ್ಭುತ ಇನ್ನಿಂಗ್ಸ್​ ಕಟ್ಟಿದ್ರು. ಕಿವೀಸ್​ ಬೌಲರ್​ಗಳ ಬೆವರಿಳಿಸಿದ ವಿರಾಟ್​, ದಾಖಲೆಯ 50ನೇ ಏಕದಿನ ಶತಕವನ್ನ ಸಿಡಿಯೇ ಬಿಟ್ರು.

ಸಚಿನ್​ ಮುಂದೆಯೇ ದಾಖಲೆ ಮುರಿದ ವಿರಾಟ

ಯಾರು ಅಂದು ಅಸಾಧ್ಯ ಅಂದಿದ್ರೋ ಆ ದಾಖಲೆ ನಿನ್ನೆ ಪುಡಿ ಪುಡಿಯಾಯ್ತು. ಸಚಿನ್​ ತೆಂಡುಲ್ಕರ್​ರದ್ದೇ ಹೋಮ್​ ಗ್ರೌಂಡ್​ನಲ್ಲಿ, ಸಚಿನ್​ ತೆಂಡುಲ್ಕರ್​ರ ದಾಖಲೆಯೇ ಬ್ರೇಕ್​ ಆಯ್ತು.. ಇದಕ್ಕೆ ಸ್ವತಃ ಸಚಿನ್​ ತೆಂಡುಲ್ಕರ್​ ಪ್ರತ್ಯಕ್ಷ ಸಾಕ್ಷಿಯಾದ್ರು. ಕ್ರಿಕೆಟ್​ ದೇವರ ದಾಖಲೆಯನ್ನ ಕಿಂಗ್​ ಕೊಹ್ಲಿ ಉಡೀಸ್​ ಮಾಡಿದ್ರು.

ಇದನ್ನು ಓದಿ:4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ತೆಂಡುಲ್ಕರ್ ಮುಂದೇನೇ 50ನೇ ಶತಕ ಸಿಡಿಸಿದ ವಿರಾಟ್

ಪರಮ ಗುರುವಿಗೆ ಶಿರಬಾಗಿ ನಮಿಸಿದ ವಿರಾಟ.!

ವಾಂಖೆಡೆಯಲ್ಲಿ ಕಿಂಗ್​ ಕೊಹ್ಲಿ ಸಿಡಿಸಿದ ಶತಕ ಕ್ರಿಕೆಟ್​ ಇತಿಹಾಸದ ಮಹತ್ವದ ಮೈಲಿಗಲ್ಲು. ಈವರೆಗೆ ಯಾರೂ ಮಾಡದ ಸಾಧನೆಯನ್ನ ಮಾಡಿದ ವಿರಾಟ್​, ಕ್ರಿಕೆಟ್​ ದೇವರನ್ನೇ ಮೀರಿದ್ರು. ಸಾಧನೆಯಲ್ಲಿ ಹಿಂದಿಕ್ಕಿದ್ರು. ಆದ್ರೆ, ಮಾಸ್ಟರ್​ ಬ್ಲಾಸ್ಟರ್​ ಮೇಲಿನ ಅಭಿಮಾನ ಮಾತ್ರ ಕಿಂಚಿತ್ತೂ ಕುಂದಲಿಲ್ಲ. ಶತಕ ಸಿಡಿಸಿದ ಬೆನ್ನಲ್ಲೇ ಕೊಹ್ಲಿ, ಪರಮಗುರುವಿಗೆ ಶಿರಬಾಗಿ ನಮಿಸಿದ್ರು.

ಪತ್ನಿ ಅನುಷ್ಕಾ, ಹೀರೋ ಸಚಿನ್​ಗೆ ಶತಕ ಅರ್ಪಣೆ.!

ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ, ವಿರಾಟ್​ ಕೊಹ್ಲಿ ಅಕ್ಷರಶಃ ಭಾವುಕರಾಗಿದ್ರು. ಇನ್ನಿಂಗ್ಸ್​ ಅಂತ್ಯದ ಬಳಿಕ ಕೊಹ್ಲಿ ನೆನೆದಿದ್ದು ಜೀವನದ ಇಬ್ಬರು ಪ್ರಮುಖ ವ್ಯಕ್ತಿಗಳನ್ನ. ಒಬ್ಬರ ತನ್ನ ಜೀವನದ ಹೀರೋ ಸಚಿನ್​ ತೆಂಡುಲ್ಕರ್​, ಇನ್ನೊಬ್ರು ತನ್ನ ಜೀವನ ಸಂಗಾತಿ ಅನುಷ್ಕಾ ಶರ್ಮಾ…!

ಇದನ್ನು ಓದಿ: ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದ ಹಂತಕರು.. ಭೀಕರ ಅನಾಹುತ ತಪ್ಪಿಸಿ ಹೀರೋ ಆದ ಪೈಲಟ್​​

ನಾನು ಕೊಲ್ಕತ್ತಾದಲ್ಲೂ ಇದನ್ನೇ ಹೇಳಿದ್ದೆ. ಈಗ ತಾನೆ ಸಚಿನ್​ ತೆಂಡುಲ್ಕರ್​ ನನ್ನನ್ನ ಅಭಿನಂದಿಸಿದ್ರು. ಇದೆಲ್ಲವೂ ನನಗೆ ಕನಸಿನಂತೆ ಭಾಸವಾಗ್ತಿದೆ. ಅನುಷ್ಕಾ ಅಲ್ಲಿ ಕೂತಿದ್ರು. ಸಚಿನ್​ ಪಾಜಿ ಇದ್ರು. ಇದನ್ನ ವಿವರಿಸೋದು ತುಂಬಾ ಕಷ್ಟ. ನಾನು ಅತಿ ಹೆಚ್ಚು ಪ್ರೀತಿಸುವ ನನ್ನ ಜೀವನ ಸಂಗಾತಿ ಅಲ್ಲಿ ಕುಳಿತಿದ್ರು. ನನ್ನ ಹೀರೋ ಅಲ್ಲಿ ಕುಳಿತಿದ್ರು. ಅವರ ಎದುರು, ವಾಂಖೆಡೆಯ ಅಭಿಮಾನಿಗಳ ಎದುರು ನಾನು 50ನೇ ಶತಕ ಸಿಡಿಸಿದ್ದು ಅದ್ಭುತ ಅನುಭವ.

ವಿರಾಟ್​ ಕೊಹ್ಲಿ, ಕ್ರಿಕೆಟಿಗ

ಅಂದು ಪಾದ ಮುಟ್ಟಿದ್ದ.. ಸಚಿನ್​ ಭಾವುಕ ನುಡಿ..!

ಯಾರಿಗೆ ನೆನಪಿದ್ಯೋ ಇಲ್ವೋ. ವಿರಾಟ್ ಕೊಹ್ಲಿ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ದಿನ PRANK ಸುಳಿಗೆ ಸಿಲುಕಿ ಸಚಿನ್​ ತೆಂಡುಲ್ಕರ್​ ಪಾದ ಮುಟ್ಟಿ ನಮಸ್ಕರಿಸಿದ್ರು. ಈಗ ನೋಡಿದ್ರೆ, ಸಚಿನ್​ರನ್ನೇ ಮೀರಿ ನಿಂತಿದ್ದಾರೆ. ಈ ಹಿಂದೆ ಸಚಿನ್ ತೆಂಡುಲ್ಕರ್​ ಯಾವಾಗ 49ನೇ ಸೆಂಚುರಿ ಸಿಡಿಸಿದ್ರೋ ಆಗಲೇ ಕೊಹ್ಲಿ ನನ್ನ ದಾಖಲೆ ಬ್ರೇಕ್​ ಮಾಡ್ತಾರೆ ಎಂಬ ಭವಿಷ್ಯ ನುಡಿದಿದ್ರು. ಆ ಭವಿಷ್ಯ ಈಗ ನಿಜವಾದ ಬೆನ್ನಲ್ಲೇ ಕ್ರಿಕೆಟ್​ ದೇವರು ಭಾವುಕರಾಗಿದ್ದಾರೆ.

‘ಪಾದ ಮುಟ್ಟಿದ್ದ ಬೆನ್ನಲ್ಲೇ ಮನಸ್ಸನ್ನೂ ಮುಟ್ಟಿದೆ’

ನಾನು ನಿನ್ನನ್ನ ಮೊದಲ ಬಾರಿಗೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಭೇಟಿಯಾದಾಗ ತಂಡದ ಆಟಗಾರರು ನಿನ್ನನ್ನ ಪ್ರಾಂಕ್​​ ಮಾಡಿದ್ರು. ನೀನು ನನ್ನ ಪಾದಗಳನ್ನ ಮುಟ್ಟಿದ್ದೆ. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದರೆ ಶೀಘ್ರದಲ್ಲೇ ನೀನು ನಿನ್ನ ಉತ್ಸಾಹ ಮತ್ತು ಕೌಶಲ್ಯದಿಂದ ನನ್ನ ಹೃದಯವನ್ನೇ ಮುಟ್ಟಿದೆ. ಆ ಚಿಕ್ಕ ಹುಡುಗ ‘ವಿರಾಟ್’ ಎಂಬ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಒಬ್ಬ ಭಾರತೀಯ ನನ್ನ ದಾಖಲೆಯನ್ನು ಮುರಿದಿದ್ದಕ್ಕಿಂತ ಹೆಚ್ಚಿನ ಸಂತೋಷ ಏನು ಇಲ್ಲ. ಬಿಗ್​​ ಸ್ಟೇಜ್​ನಲ್ಲಿ, ವಿಶ್ವಕಪ್​ ಸೆಮಿಫೈನಲ್​​ನಂತಹ ದೊಡ್ಡ ವೇದಿಕೆಯಲ್ಲಿ ಅದರಲ್ಲೂ ನನ್ನ ತವರು ನೆಲದಲ್ಲಿ ದಾಖಲೆ ಮುರಿದಿದ್ದು ವಿಶೇಷ.
ಸಚಿನ್​ ತೆಂಡುಲ್ಕರ್​ – ಮಾಜಿ ಕ್ರಿಕೆಟಿಗ

ಇದೇ ವಾಂಖೆಡೆಯಲ್ಲಿ ಅಂದು ಸಚಿನ್ ಹೊತ್ತು ಮೆರೆಸಿದ್ದ ವಿರಾಟ.!

2011ರ ವಿಶ್ವಕಪ್​ ಗೆದ್ದ ಕ್ಷಣ ಅದು.. 28 ವರ್ಷಗಳ ಅಸಂಖ್ಯ ಭಾರತೀಯರ ಕನಸು ನನಸಾಗಿತ್ತು. ಎಲ್ಲಾ ಸಾಧನೆ ಮಾಡಿದ್ರೂ ವಿಶ್ವಕಪ್​ ಗೆದ್ದಿಲ್ಲ ಎಂಬ ಸಚಿನ್​ ತೆಂಡುಲ್ಕರ್​ರ ಕೊರಗು ನೀಗಿತ್ತು. ಆ ಸಂಭ್ರಮಾಚರಣೆಯಲ್ಲಿ ಸಚಿನ್​ ತೆಂಡುಲ್ಕರ್​ರನ್ನ ಯಂಗ್​ ವಿರಾಟ್​ ಕೊಹ್ಲಿ ಇದೇ ವಾಂಖೆಡೆ ಮೈದಾನದ ಸುತ್ತ ಹೊತ್ತು ಮೆರೆಸಿದ್ರು.. ಇದೀಗ ಅದೇ ಮೈದಾನದಲ್ಲಿ ಸಚಿನ್​ರನ್ನೇ ಮೀರಿಸಿ ನಿಂತಿದ್ದಾರೆ. ವಿರಾಟ ಯಾತ್ರೆ ಹೀಗೆ ಮುಂದುವರೆಯಲಿ ಅನ್ನೋದು ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್​ ಕೊಹ್ಲಿ ವಿಶ್ವ ದಾಖಲೆ.. ಪರಮ ಗುರುವಿಗೆ ಶಿರಬಾಗಿ ನಮಿಸಿದ ವಿರಾಟ.!

https://newsfirstlive.com/wp-content/uploads/2023/11/KOHLI-5.jpg

Load More