/newsfirstlive-kannada/media/post_attachments/wp-content/uploads/2025/05/monalisa4.jpg)
ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ದಿನದಿಂದ ದಿನಕ್ಕೆ ಮೊನಾಲಿಸಾ ಹೊಸ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ನನ್ನ ಮಗಳು..’ ಬೇಹುಗಾರಿಕೆ ಆರೋಪ ಹೊತ್ತ ಜ್ಯೋತಿ ಮಲ್ಹೋತ್ರ ಬಗ್ಗೆ ತಂದೆ ಏನಂದ್ರು..?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್ ಬ್ಯುಸಿಯಾಗಿದ್ದಾರೆ.
ಅದರಲ್ಲೂ ಮೇಕಪ್, ಫೋಟೋಶೂಟ್, ಡ್ಯಾನ್ಸ್, ಸಿನಿಮಾ ಅಂತ ಮೊನಾಲಿಸಾ ಕಾಲ ಕಳೆಯುತ್ತಿದ್ದಾರೆ. ಮೇಕಪ್ ಆರ್ಟಿಸ್ಟ್ಗಳು ಮೊನಾಲಿಸಾರನ್ನೇ ಬಿಡುತ್ತಿಲ್ಲ. ಹೊಸ ಹೊಸ ರೀತಿಯಲ್ಲಿ ಮೊನಾಲಿಸಾಗೆ ಮೈಕಪ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಮೊನಾಲಿಸಾ ವಧುವಿನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು.
ಅಮೇರಾ ಲ್ಯಾಬ್ ಡೈಮಂಡ್ ಆಭರಣ ಶಾಪ್ನವರು ಮೊನಾಲಿಸಾ ಮೈಮೇಲೆ ತಮ್ಮ ಜ್ಯುವೆಲ್ಲರ್ಸ್ ಹಾಕಿಸಿ ಫೋಟೋಶೂಟ್ ಮಾಡಿದ್ದಾರೆ. ಬ್ಲಾಕ್ ಸೂಟ್ನಲ್ಲಿ ಡೈಮಂಡ್ ನೆಕ್ಲೇಸ್ ಧರಿಸಿಕೊಂಡು ಫೋಟೋಗೆ ಥೇಟ್ ಬಾಲಿವುಡ್ ಮಾಡೆಲ್ಗಳ ಹಾಗೇ ಪೋಸ್ ಕೊಟ್ಟಿದ್ದಾರೆ ಮಹಾಕುಂಭ ಮೊನಾಲಿಸಾ.
View this post on Instagram
ಇನ್ನೂ, ಮೊನಾಲಿಸಾಳ ಇದೇ ಲುಕ್ ನೋಡಿದ ನೆಟ್ಟಿಗರಂತೂ, ಅದ್ಭುತವಾಗಿದೆ, ಸುಂದರವಾಗಿ ಕಾಣ್ತಾ ಇದ್ದೀರಿ ಅಂತೆಲ್ಲಾ ಕಾಮೆಂಟ್ಸ್ ಹಾಕಿ ಶುಭ ಹಾರೈಸುತ್ತಿದ್ದಾರೆ. ಮತ್ತೆ ಮೊನಾಲಿಸಾಳ ಅಂದಕ್ಕೆ ಫಿದಾ ಆಗುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ