ಪ್ರಿಯಾಂಕ್​ ಖರ್ಗೆಗೆ 5000 ರೂಪಾಯಿ ದಂಡ; ಸಚಿವರು ಮಾಡಿದ ಅಂಥ ತಪ್ಪು ಏನು..?

author-image
Bheemappa
Updated On
ಮೊದಲು ಮೋದಿ ವಿದ್ಯಾರ್ಹತೆ ಬಗ್ಗೆ ಸ್ಪಷ್ಟಪಡಿಸಲಿ -ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲ್
Advertisment
  • ದಂಡ ಪಾವತಿಸಲು ಒಪ್ಪಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ
  • ಯಾರೋ ಮಾಡಿದ ತಪ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆಗೆ ದಂಡ
  • ಗೃಹಲಕ್ಷ್ಮೀ ಯೋಜನೆ ಜಾರಿ ವೇಳೆ ಯಡವಟ್ಟು ಮಾಡಿದ ಬೆಂಬಲಿಗರು

ಕಲಬುರಗಿ: ಪಾಲಿಕೆಯ ರಸ್ತೆಗಳಲ್ಲಿ ಅನುಮತಿ ಪಡೆಯದೇ ಬ್ಯಾನರ್​ಗಳನ್ನು ಅಳವಡಿಸಿದ್ದಕ್ಕೆ ಕಲಬುರಗಿ ಉಸ್ತುವಾರಿ ಸಚಿವ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದಂಡ ವಿಧಿಸಲಾಗಿದೆ.

‌ಸಚಿವ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರವಿರುವ ಬ್ಯಾನರ್​ಗಳನ್ನು ನಗರದ ರಸ್ತೆಗಳಲ್ಲಿ ಅಳವಡಿಸಲಾಗಿತ್ತು. ಇದಕ್ಕೆ ಮಹಾನಗರ ಪಾಲಿಕೆಯ ಅನುಮತಿಯನ್ನು ಅವರ ಬೆಂಬಲಿಗರು ಪಡೆದಿರಲಿಲ್ಲ. ಹೀಗಾಗಿ ಕಲಬುರಗಿ ‌ಮಹಾನಗರ ಪಾಲಿಕೆಯು ಪ್ರಿಯಾಂಕ್ ಖರ್ಗೆಯವರಿಗೆ 5,000 ರೂಪಾಯಿ ದಂಡವನ್ನು ವಿಧಿಸಿದೆ.

publive-image

ನಿನ್ನೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ನಗರದ ಹಲವೆಡೆ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರವಿರುವ ಬ್ಯಾನರ್​ಗಳನ್ನು ಹಾಕಲಾಗಿತ್ತು. ಇದಕ್ಕೆ ಅನುಮತಿ ಪಡೆಯದೇ ಇರುವುದಕ್ಕೆ ಪಾಲಿಕೆ ಅಧಿಕಾರಿಗಳು ಸಚಿವರಿಗೆ ದಂಡ ಹಾಕಿದ್ದಾರೆ. ಪಾಲಿಕೆ ಕ್ರಮವನ್ನು ಬೆಂಬಲಿಸಿರುವ ಸಚಿವರು ದಂಡದ ಮೊತ್ತವನ್ನು ಪಾವತಿಸಲು ಒಪ್ಪಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment