ಬರೀ ವಂಶಿಕಾ ಹೆಸರಲ್ಲಿ ವಂಚಿಸಿಲ್ಲ ನಿಶಾ ನರಸಪ್ಪ; ಶೋಗಳಲ್ಲಿ ಜಡ್ಜ್‌ ಬುಕ್ ಮಾಡಲು 3-5 ಲಕ್ಷ ವಸೂಲಿ ಆರೋಪ

author-image
Veena Gangani
Updated On
ಬರೀ ವಂಶಿಕಾ ಹೆಸರಲ್ಲಿ ವಂಚಿಸಿಲ್ಲ ನಿಶಾ ನರಸಪ್ಪ; ಶೋಗಳಲ್ಲಿ ಜಡ್ಜ್‌ ಬುಕ್ ಮಾಡಲು 3-5 ಲಕ್ಷ ವಸೂಲಿ ಆರೋಪ
Advertisment
  • ​ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ‘ನಿಶಾ’ ವಂಚನೆ ಕೇಸ್
  • ಆ್ಯಡ್ ಶೂಟ್, ಮಕ್ಕಳ ಟ್ಯಾಲೆಂಟ್ ನೆಪದಲ್ಲಿ ಮೋಸದ ಬಲೆ, ವಂಚನೆ
  • ಲಕ್ಷ, ಲಕ್ಷ ಪಡೆದು ಐಶಾರಾಮಿ ಲೈಫ್ ಲೀಡ್ ಮಾಡುತ್ತಿದ್ದ ಆರೋಪ

ಬೆಂಗಳೂರು: ​ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿದ್ದ ಆರೋಪಿ ನಿಶಾ ನರಸಪ್ಪಳ ವಿರುದ್ಧ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. ಮಿಸ್ಟರ್ ಆ್ಯಂಡ್​​​​​ ಮಿಸಸ್​​​ ಬೆಂಗಳೂರು ಫ್ಯಾಷನ್ ಶೋ ಮಾಡ್ತಿನಿ. ಫ್ಯಾಷನ್ ಶೋ ಅಲ್ಲಿ ಗೆದ್ದವರಿಗೆ ಲಕ್ಷಾಂತರ ರೂಪಾಯಿ ನಗದು ಬಹುಮಾನ ನೀಡುತ್ತೇವೆ. ಹೀಗಾಗಿ ಜಡ್ಜ್​​ಗಳನ್ನು ಬುಕ್ ಮಾಡಲು ಹಣ ನೀಡಿ ಎಂದು ಯುವಕ ಹಾಗೂ ಯುವತಿಯರಿಗೆ ವಂಚನೆ ಮಾಡಿದ್ದಾರೆ. ಒಬ್ಬೊಬ್ಬರಿಂದ ಸುಮಾರು 3 ರಿಂದ 5 ಲಕ್ಷ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಸದ್ಯ ಈ ಕೇಸ್​​ ಸಂಬಂಧ ವಂಚನೆಗೆ ಒಳಗಾದ ಮಕ್ಕಳ ಪೋಷಕರು, ಯುವಕರು ಮತ್ತು ಯುವತಿಯರು ಸದಾಶಿವನಗರ ಪೊಲೀಸ್​​ ಠಾಣೆಗೆ ದೌಡಾಯಿಸಿ ಆರೋಪಿ ನಿಶಾ ನರಸಪ್ಪಳ ವಿರುದ್ಧ ದೂರನ್ನು ದಾಖಲಿಸುತ್ತಿದ್ದಾರೆ. ಹಲವು ಪೋಷಕರ ಹತ್ತಿರ ಕೂಡ ಲಕ್ಷ, ಲಕ್ಷ ಪಡೆದು ವಂಚನೆ ಮಾಡಿದ್ದಾಳೆ. ಕೂಡಲೇ ವಂಚಕಿ ನಿಶಾ ನರಸಪ್ಪಳನ್ನು ಅರೆಸ್ಟ್​​ ಮಾಡುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ.

publive-image

ನಿಶಾ ನರಸಪ್ಪ ಕಳ್ಳಾಟ: ಪ್ರಕರಣ 01

ಸದಾಶಿವನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾಲದ ರೂಪದಲ್ಲಿ ಹಾಗೂ ಇನ್ವೆಸ್ಟ್ ಮಾಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದಳು. ಮೊದಲು ಲಾಭಾಂಶದ ಹಣ ಕೊಟ್ಟು ಎರಡರಷ್ಟು ಹಣ ಪಡೆದು ವಂಚನೆ ಮಾಡುತ್ತಿದ್ದಳು ಆರೋಪಿ ನಿಶಾ ಎನ್ನಲಾಗಿದೆ.

ಇದನ್ನೂ ಓದಿ: ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷ, ಲಕ್ಷ ವಂಚನೆ ಆರೋಪ; ಪೊಲೀಸ್ ಠಾಣೆಗೆ ದೂರು

publive-image

ನಿಶಾ ನರಸಪ್ಪ ಕಳ್ಳಾಟ: ಪ್ರಕರಣ 02

ಬೆಂಗಳೂರು ಹೊರಹೊಲಯದಲ್ಲಿನ ರೆಸಾರ್ಟ್​ಗಳಲ್ಲಿ ಶೂಟಿಂಗ್ ಮಾಡುವ ಮೂಲಕ ಪೋಷಕರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಕೇವಲ ಮಕ್ಕಳಷ್ಟೇ ಅಲ್ಲ ಸಾಕಷ್ಟು ಮಂದಿಗೆ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಲಕ್ಷಾಂತರ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಸದಾಶಿವನಗರ ಠಾಣೆಗೆ  ಸಾಲು ಸಾಲು ದೂರುಗಳು ಬರುತ್ತಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ 'ಫಿಲ್ಮಿ ಫಸ್ಟ್' ವೀಕ್ಷಿಸಿ

Advertisment