/newsfirstlive-kannada/media/post_attachments/wp-content/uploads/2023/11/muruga-shree.jpg)
ದಾವಣಗೆರೆ: ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಮತ್ತೊಮ್ಮೆ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಅರೆಸ್ಟ್ ವಾರಂಟ್ ನೀಡಿದ ಹಿನ್ನೆಲೆಯಲ್ಲಿ ದಾವಣಗೆರೆ ವಿರಕ್ತ ಮಠಕ್ಕೆ ಪೊಲೀಸರು ಆಗಮಿಸಿದ್ದರು. ಮಠಕ್ಕೆ ಅರೆಸ್ಟ್ ವಾರಂಟ್ ಹಿಡಿದುಕೊಂಡು ಬಂದ ಪೊಲೀಸರು ಸೀದಾ ಮಠದ ಕೋಣೆ ಒಳಗಿಂದ ಮುರುಘಾ ಶರಣರನ್ನು ಕರೆದೊಯ್ದಿದ್ದಾರೆ.
ತನಿಖಾಧಿಕಾರಿ ಡಿವೈಎಸ್‌ಪಿ ಅನಿಲ್, ಸಿಪಿಐ ಮುದ್ದುರಾಜ್ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಿತ್ತು. ವಿರಕ್ತ ಮಠದ ಶ್ರೀಗಳ ಕೋಣೆಗೆ ತೆರಳಿದ ಪೊಲೀಸರು ಅರೆಸ್ಟ್ ವಾರೆಂಟ್ ತೋರಿಸಿ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: BREAKING: ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಬಿಗ್ ಶಾಕ್; ಮತ್ತೆ ಬಂಧಿಸಲು ಕೋರ್ಟ್ ಆದೇಶ
ಏನಿದು 2ನೇ ಪೋಕ್ಸೋ ಕೇಸ್?
2022ರ ಅಕ್ಟೋಬರ್ 25ರಂದು ಶ್ರೀಗಳ ವಿರುದ್ಧ 2ನೇ ಕೇಸ್
ಇಬ್ಬರು ಬಾಲಕಿಯರಿಂದ ಲೈಂಗಿಕ ಕಿರುಕುಳದ ಆರೋಪ
2ನೇ ಕೇಸ್ ಹಿನ್ನಲೆ ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಕೆ
ಚಿತ್ರದುರ್ಗ ಪೊಲೀಸರಿಂದ 761 ಪುಟಗಳ ಚಾರ್ಜ್‌ಶೀಟ್
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ
2ನೇ ಕೇಸ್ ಸಂಬಂಧ ಶ್ರೀಗಳ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಜಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ