/newsfirstlive-kannada/media/post_attachments/wp-content/uploads/2025/02/chandan.jpg)
ಕನ್ನಡದ ಸ್ಟಾರ್ ಗಾಯಕ, ನಟ ಚಂದನ್ ಶೆಟ್ಟಿ ಬಹಳ ದಿನಗಳ ಬಳಿಕ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ವೀವ್ ಆಗಿರೋ ಗಾಯಕ ಹೊಸ ಪೋಸ್ಟ್ ಶೇರ್ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.
ಇದನ್ನೂ ಓದಿ:ಫೋಟೋ ಶೇರ್ ಮಾಡಿದ ಸ್ಟಾರ್ ಗಾಯಕ ಚಂದನ್ ಶೆಟ್ಟಿ.. ಸಿಕ್ಕಾಪಟ್ಟೆ ವೈರಲ್..!
ಹೌದು, ಕನ್ನಡದಲ್ಲಿ ಹಲವು ಹಿಟ್ ಸಾಂಗ್‌ಗಳನ್ನು ನೀಡಿರುವ ಚಂದನ್ ಶೆಟ್ಟಿ ಅವರ ಸಂಯೋಜನೆ ಮೂಡಿ ಬಂದಿದ್ದ ಕಾಟನ್ ಕ್ಯಾಂಡಿ ಸಾಂಗ್ ಸಖತ್ ವೈರಲ್ ಆಗಿದೆ. ಈ ಕಾಟನ್ ಕ್ಯಾಂಡಿ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಿಟ್ ಆಗಿದೆ ದಾಖಲೆ ನಿರ್ಮಿಸಿದೆ. ಇದರ ಮಧ್ಯೆ ಸ್ಟಾರ್ ಗಾಯಕ ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್ನಲ್ಲಿ ಹೊಸ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇನ್ನೂ, ಚಂದನ್ ಶೆಟ್ಟಿ ಅವರು ಶೇರ್ ಮಾಡಿಕೊಂಡ ಫೋಟೋ ನೋಡಿ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರು ಹಂಚಿಕೊಂಡ ಫೋಟೋದಲ್ಲಿ ಕ್ಲೀನ್ ಶೇವ್ ಮಾಡಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋ ನೋಡಿದ ಅಭಿಮಾನಿಗಳು, ಏನ್ ಸರ್ ಇದು, ಮತ್ತೆ ನೀವು ಕಾಲೇಜಿಗೆ ಹಿಂತಿರುಗಬಹುದು, ಮ್ಯಾರೇಜ್ ಪ್ರಪೋಸ್ ಬರ್ತಾ ಇವೆ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ. ಸದ್ಯ ಇದೇ ಫೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ