/newsfirstlive-kannada/media/post_attachments/wp-content/uploads/2023/11/HAMPI_VISIT_CM_SIDDARAMAIAH.jpg)
ಸಿಎಂ ಸಿದ್ದರಾಮಯ್ಯ ನೇತೃತ್ವದ ಗ್ಯಾರಂಟಿ ಸರ್ಕಾರ ಆಂತರಿಕ ಬೇಗುದಿಯಿಂದ ಬೇಯುತ್ತಿದೆ. ಸರ್ಕಾರ ಉಳಿಯಲ್ಲ ಅಂತ ವಿಪಕ್ಷಗಳು ಬೊಬ್ಬೆ ಹಾಕ್ತಿರುವ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಹಂಪಿಗೆ ಭೇಟಿ ನೀಡ್ತಿದ್ದಾರೆ. ಹಂಪಿಗೆ ಕಾಲಿಟ್ರೆ ಅಧಿಕಾರ ಹೋಗುತ್ತೆ ಅನ್ನೋ ಚರ್ಚೆಯ ನಡುವೆ ಸಿಎಂ ಭೇಟಿ ಭಾರೀ ಕುತೂಹಲಕ್ಕೆ ಕಾರಣ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ಜೊತೆಗೆ ವಿಚಾರವಾದಿ ನಾಯಕ. ಚಾಮರಾಜನಗರ ಜಿಲ್ಲೆಗೆ ಹೋದ್ರೆ ಅಧಿಕಾರ ಕಳೆದುಕೊಳ್ತಾರೆ ಅನ್ನೋ ಮಾತಿತ್ತು. ಮೌಢ್ಯಗಳಿಗೆ ಸೆಡ್ಡು ಹೊಡೆದಿದ್ದ ಸಿಎಂ ಸಿದ್ದರಾಮಯ್ಯ ಸುಮಾರು 10ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಅವರ ಅಧಿಕಾರಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ಇದೀಗ ಹಂಪಿಗೂ ಕೂಡ ಸಿಎಂ ಸಿದ್ದರಾಮಯ್ಯ ಭೇಟಿ ನೀಡ್ತಿದ್ದು ಮತ್ತೆ ಅಧಿಕಾರ ಕಳೆದುಕೊಳ್ಳುವ ಮಾತು ಕೇಳಿ ಬಂದಿದೆ.
[caption id="attachment_27485" align="alignnone" width="800"] ಹಂಪಿಯ ದೇವಾಲಯಗಳು[/caption]
ಸುವರ್ಣ ಕರ್ನಾಟಕ ಸಂಭ್ರಮ ಪ್ರಯುಕ್ತ ಸಿಎಂ ಭೇಟಿ
ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನಲೆ ಇಂದಿನಿಂದ 2 ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ವಿಜಯನಗರ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ವಿಜಯನಗರಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಇವತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಸಿಎಂ 2 ದಿನದ ಪ್ರವಾಸ!
- ಇಂದಿನಿಂದ 2 ದಿನಗಳು ಸಿಎಂ ಸಿದ್ದು ವಿಜಯನಗರ ಪ್ರವಾಸ
- ಬೆಳಗ್ಗೆ 11.15ಕ್ಕೆ ಹೊಸಪೇಟೆಗೆ ಆಗಮಿಸಲಿರೋ ಸಿಎಂ ಸಿದ್ದು
- ಹೊಸಪೇಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
- ಸಂಜೆ 4.45ಕ್ಕೆ ಹಂಪಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ
- ಸಂಜೆ 5 ಗಂಟೆಗೆ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಸಿಎಂ ಭೇಟಿ
- ಬಳಿಕ ಕರ್ನಾಟಕ-50ರ ಸಂಭ್ರಮ ಜ್ಯೋತಿ ರಥಯಾತ್ರೆಗೆ ಚಾಲನೆ
- 5.50ಕ್ಕೆ ಕನ್ನಡಾಂಬೆ ನುಡಿನಮನ ಕಾರ್ಯಕ್ರಮ ಉದ್ದೇಶಿಸಿ ಮಾತು
- ರಾತ್ರಿ ಹೊಸಪೇಟೆ ಖಾಸಗಿ ಹೊಟೇಲ್‌ನಲ್ಲಿ ಸಿಎಂ ಸಿದ್ದು ವಾಸ್ತವ್ಯ
- ನಾಳೆ ಬೆಳಗ್ಗೆ 9 ಗಂಟೆಗೆ ರಸ್ತೆ ಮೂಲಕ ಕೊಪ್ಪಳಕ್ಕೆ ಸಿಎಂ ಪ್ರಯಾಣ
ಸಿಎಂ ವಿರೂಪಾಕ್ಷನ ದರ್ಶನ ಪಡೆಯಲಿದ್ದಾರೆ- ನಾಗೇಂದ್ರ
ಸಿಎಂ ಸ್ಥಾನದಲ್ಲಿರೋರು ಹಂಪಿ ವಿರೂಪಾಕ್ಷ ದರ್ಶನ ಪಡೆದ್ರೆ ಅಧಿಕಾರ ಹೋಗುತ್ತೇ ಅನ್ನೋ ಪ್ರತೀತಿ ಇದೆ. ಹೀಗಾಗಿ ಸಿಎಂ ವಿರೂಪಾಕ್ಷನ ದರ್ಶನ ಪಡೀತಾರಾ ಅನ್ನೋ ಚರ್ಚೆ ಜೋರಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಚಿವ ಬಿ.ನಾಗೇಂದ್ರ ಸಿಎಂ ಯಾವುದೇ ಮೌಢ್ಯ ನಂಬೋದಿಲ್ಲ. ವಿರೂಪಾಕ್ಷನ ದರ್ಶನ ಪಡೆಯಲಿದ್ದಾರೆ ಎಂದಿದ್ದಾರೆ.
ಈ ನಡುವೆ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಮುಂಬರುವ ದಿನಗಳಲ್ಲಿ ವಾಲ್ಮೀಕಿ ಸಮುದಾಯದ ನಾಯಕ ಸಿಎಂ ಆಗ್ತಾರೆ. ಆದ್ರೆ ಯಾರು ಅಂತಾ ನಾನು ಹೇಳೋಕೆ ಆಗಲ್ಲ ಅಂದಿರೋದು ತೀವ್ರ ಕೂತುಹಲ ಮೂಡಿಸಿದೆ.
[caption id="attachment_27484" align="alignnone" width="800"] ಪೊಲೀಸರು[/caption]
ಸಿಎಂ ಭೇಟಿ ಹಿನ್ನೆಲೆ, ಪೊಲೀಸ್ ಬಿಗಿ ಬಂದೋಬಸ್ತ್!
ಇನ್ನು ಇವತ್ತು ಹೊಸಪೇಟೆ, ಹಂಪಿಗೆ ಸಿಎಂ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಜಯನಗರ ಎಸ್ಪಿ ಶ್ರೀಹರಿಬಾಬು, ಸೇರಿದಂತೆ ಇಬ್ಬರು ಎಸ್ಪಿ, ಇಬ್ಬರು ASP, 10 ಮಂದಿ ಡಿವೈಎಸ್ಪಿ, ಸಿಪಿಐಗಳು, ಪಿಎಸ್ಐಗಳು, ಹೋಂ ಗಾರ್ಡ್ ಸಿಬ್ಬಂದಿ ಸೇರಿ ಕೆಎಸ್ಆರ್ಪಿ, ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ.
ಮೂಢನಂಬಿಕೆಗೆ ಜೋತು ಬಿದ್ದು ಅನೇಕ ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಕಾಲಿಟ್ಟಿರಲಿಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಮೌಢ್ಯಕ್ಕೆ ಸೆಡ್ಡು ಹೊಡೆದು ಜಿಲ್ಲೆಗೆ ಭೇಟಿ ನೀಡುವ ಮೂಲಕ ಶಾಪವಿಮೋಚನೆ ಮಾಡಿದ್ದರು. ಇದೀಗ ಹಂಪಿಗೂ ಸಿಎಂ ಭೇಟಿ ನೀಡ್ತಿದ್ದು ಕಳಂಕ ತೊಳೆಯುತ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ