Advertisment

‘ಟೈಟಾನಿಕ್’ ಅವಶೇಷ ನೋಡಲು ಹೋಗಿದ್ದ ಜಲಂತರ್ಗಾಮಿ ನೌಕೆ ಮಿಸ್ಸಿಂಗ್.. ಹೇಗೆ ನಡೀತಿದೆ ಶೋಧಕಾರ್ಯ..?

author-image
Ganesh
Updated On
‘ಟೈಟಾನಿಕ್’ ಅವಶೇಷ ನೋಡಲು ಹೋಗಿದ್ದ ಜಲಂತರ್ಗಾಮಿ ನೌಕೆ ಮಿಸ್ಸಿಂಗ್.. ಹೇಗೆ ನಡೀತಿದೆ ಶೋಧಕಾರ್ಯ..?
Advertisment
  • ಭಾನುವಾರ ಮುಂಜಾನೆ ಜಲಂತರ್ಗಾಮಿ ಮಿಸ್ಸಿಂಗ್
  • 96 ಗಂಟೆಗಳ ಕಾಲ ಉಸಿರಾಡುವಷ್ಟು ಆಕ್ಸಿಜನ್ ಮಾತ್ರ ಇತ್ತು
  • ಒಬ್ಬರು ಒಂದು ಟ್ರಿಪ್ ಮಾಡಲು ಎಷ್ಟು ಕೋಟಿ ಕೊಡಬೇಕು ಗೊತ್ತಾ?

‘ಟೈಟಾನಿಕ್ ಹಡಗು ದುರಂತ’ದ ಹೊಸ ಅನ್ವೇಷಣೆ ಮತ್ತು ಅದರ ಅವಶೇಷಗಳ ವೀಕ್ಷಣೆಗೆ ಹೊರಟಿದ್ದ ಪ್ರವಾಸಿ ಜಲಂತರ್ಗಾಮಿ (Tourist Submarine) ನಿಗೂಢವಾಗಿ ನಾಪತ್ತೆ ಆಗಿದೆ. ಬೆನ್ನಲ್ಲೇ ಉತ್ತರ ಅಟ್ಲಾಂಟಿಕ್​ ತನಿಖೆ ಶುರುಮಾಡಿದೆ. ಮತ್ತೊಂದು ಕಡೆ, ನಾಪತ್ತೆಯಾದವರ ಸಂಪರ್ಕ ಸಾಧಿಸಿ ಅವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಕಾಣೆಯಾಗಿರುವ ಟೂರಿಸ್ಟ್​ ಸಬ್​​ಮರಿನ್​​ನಲ್ಲಿ ಪಾಕಿಸ್ತಾನದ ಶ್ರೀಮಂತ ವ್ಯಕ್ತಿ ಸೇರಿ ಒಟ್ಟು 5 ಮಂದಿ ಪ್ರವಾಸಿಗರಿದ್ದರು ಎಂದು ಹೇಳಲಾಗಿದೆ. ಆದರೆ ಅಮೆರಿಕ ಕೋಸ್ಟ್​ಗಾರ್ಡ್​ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

Advertisment

ಆಗಿದ್ದು ಏನು..?

OceanGate Expeditions ಒಡೆತನದ ಟೈಟಾನಿಕ್ ಎಂಬ ಹೆಸರಿನ ಪ್ರವಾಸಿ ಸಬ್​ಮರ್ಸಿಬಲ್ (Submersible: ನೀರಿನ ಆಳದಲ್ಲಿ ಕಾರ್ಯನಿರ್ವಹಿಸಬಲ್ಲ ಜಲನೌಕೆ) ಕಳೆದ ಭಾನುವಾರ (ಜೂನ್ 20) ಬೆಳಗ್ಗೆ, ಟೈಟಾನಿಕ್ ಹಡಗು ದುರಂತದ ವೀಕ್ಷಣೆಗೆ ಹೊರಟಿತ್ತು. 5 ಸಿಬ್ಬಂದಿಯೊಂದಿಗೆ ಹೊರಟಿದ್ದ ಈ ನೌಕೆ, ಸುಮಾರು ಎರಡು ಗಂಟೆಗಳ ಬಳಿಕ ಸಂಪರ್ಕವನ್ನು ಕಳೆದುಕೊಂಡಿದೆ. ನಂತರ ಸಂಪರ್ಕ ಸಾಧಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ಅಮೆರಿಕ ಕೋಸ್ಟ್​ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಉತ್ತರ ಅಟ್ಲಾಂಟಿಕ್​ನ ಕೇಪ್ ಕೋಡ್​ನಿಂದ ಸುಮಾರು 900 ಮೈಲಿ ದೂರ ಪ್ರಯಾಣಿಸ್ತಿದ್ದಂತೆ ಸಂಪರ್ಕ ಕಳೆದುಕೊಂಡಿದೆ. ಅದು ಸುಮಾರು 13000 ಫೀಟ್ ನೀರಿನ ಆಳಕ್ಕೆ ಹೋಗಿದೆ ಎಂದು ಅಂದಾಜಿಸಲಾಗಿದೆ. ಈ ಜಲಂತರ್ಗಾಮಿ ನಿನ್ನೆ ಸಂಜೆ ವೇಳೆಗೆ ಕೇವಲ 40 ಗಂಟೆಗಿಂತ ಕಡಿಮೆ ಅವಧಿಗೆ ಉಸಿರಾಡಲು ಆಕ್ಸಿಜನ್ ಇದೆ. ಅದಕ್ಕಿಂತ ಹೆಚ್ಚಿನ ಗಾಳಿಯನ್ನು ನೌಕೆ ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮಲ್ಲಿರುವ ರಕ್ಷಣಾ ವ್ಯವಸ್ಥೆಯಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಅವರ ರಕ್ಷಣೆಗಾಗಿ ಕೆಲಸ ಮಾಡ್ತಿದ್ದೇವೆ. ಅದಕ್ಕಾಗಿ ನಾವು ಎಲ್ಲಾ ರೀತಿಯ ಸಾಹಸಗಳನ್ನೂ ಮಾಡ್ತಿದ್ದೇವೆ. ಆದಷ್ಟು ಬೇಗ ಅವರನ್ನು ರಕ್ಷಣೆ ಮಾಡಬೇಕಿದೆ. ಅದಕ್ಕಾಗಿ ನಮ್ಮ ತಂಡ ನಿರಂತರ ಶ್ರಮಪಡುತ್ತಿದೆ.

ಜಮಿ ಫ್ರೆಡೆರಿಕ್, ಕೋಸ್ಟ್​ ಗಾರ್ಡ್​ ಕ್ಯಾಪ್ಟನ್

Advertisment

ವರದಿಗಳ ಪ್ರಕಾರ, ನಿನ್ನೆಯವರೆಗೆ ಅಮೆರಿಕ ಕೋಸ್ಟ್​ ಗಾರ್ಡ್​, ಕೆನಡಿಯನ್ ಕೊಸ್ಟ್​ ಗಾರ್ಡ್, ಅಮೆರಿಕ ನೌಕ ಸೇನೆ ಮತ್ತು ಏರ್​ ನ್ಯಾಷನಲ್ ಗಾರ್ಡ್​ ಸಿಬ್ಬಂದಿ ಸೇರಿ ಒಟ್ಟು 76000 ಸ್ಕ್ವೇರ್​ ಮೈಲು ದೂರದವರೆಗೆ ಕೂಂಬಿಂಗ್ ಮಾಡಿದೆ. ಇದುವರೆಗೂ ನೌಕೆ ಇರುವ ಯಾವುದೇ ಸುಳಿವು ಸಿಗಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗಿನ ವರದಿ ಪ್ರಕಾರ, ಶೋಧಕಾರ್ಯದ ವೇಳೆ ಜೋರಾದ ಸೌಂಡ್ ಒಂದು ಕೇಳಿಸಿದೆ ಅಂತಾ ವರದಿಯಾಗಿದೆ. ಕೇವಲ ಜಲಮಾರ್ಗದಲ್ಲಿ ಮಾತ್ರವಲ್ಲದೇ, ವೈಮಾನಿಕ ವ್ಯವಸ್ಥೆಗಳ ಮೂಲಕವೂ ಶೋಧಕಾರ್ಯ ನಡೆಯುತ್ತಿದೆ. ಅಮೆರಿಕದ ವಿಶೇಷ ವಿಮಾನಗಳಾದ C-130, P8 Poseidon ಅವುಗಳ ಮೂಲಕವೂ ಹುಡುಕಾಟ ನಡೆಯುತ್ತಿದೆ.

publive-image

ಪ್ರವಾಸಿಗರ ಬಿಟ್ಟು ಯಾಱರಿದ್ದರು? 

ನೌಕೆಯಲ್ಲಿ ಆಪರೇಟರ್​ ಸೇರಿ ನಾಲ್ವರು ಮಿಷನ್ ಸ್ಪೆಷಲಿಸ್ಟ್​ಗಳಿದ್ದರು. ಇನ್ನು ಪ್ರವಾಸಿಗರಲ್ಲಿ ಬ್ರಿಟಿಷ್ ಬಿಲಿಯನೇರ್, ಅಡ್ವೆಂಚರ್ ಟ್ರಾವೆಲರ್ ಆಗಿರುವ ಹಮಿಶ್ ಹಾರ್ಡಿಂಗ್ ಕೂಡ ಇದ್ದರು ಎಂದು ಸಿಬಿಎಸ್​ ನ್ಯೂಸ್​ ಖಚಿತಪಡಿಸಿದೆ.

ಯಾರು ಹಮೀಶ್ ಹಾರ್ಡಿಂಗ್..?

59 ವರ್ಷದ ಹಮೀಶ್ ಹಾರ್ಡಿಂಗ್ ಬ್ರಿಟಿಷ್​ ಕೋಟ್ಯಾಧಿಪತಿ. ಇವರು ದೊಡ್ಡ ಉದ್ಯಮಿಯಾಗಿದ್ದು, ಸಾಹಸಿ ಅಡ್ವೆಂಚರ್​ಗಳಲ್ಲೂ ಹೆಸರು ಮಾಡಿದ್ದಾರೆ. ಇವರು Titanic shipwreck expedition ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕವಾಗಿ ತಿಳಿಸಿದ್ದರು. ಇವರು ನಾಪತ್ತೆಯಾಗಿರುವ ಸಬ್​ಮರಿನ್​​ನಲ್ಲಿದ್ದರು ಅನ್ನೋದನ್ನು ಅವರ ಕಂಪನಿ Action Aviation ದೃಢಪಡಿಸಿದೆ.

Advertisment

ಇನ್ಯಾರಿದ್ದರು?

ಕೋಸ್ಟ್​ಗಾರ್ಡ್​ ಸಿಬ್ಬಂದಿ ಇದುವರೆಗೂ, ಸಾರ್ವಜನಿಕವಾಗಿ ನಾಪತ್ತೆಯಾದ ಜಲನೌಕೆಯಲ್ಲಿ ಯಾರಿದ್ದರು ಎಂದು ತಿಳಿಸಿಲ್ಲ. ಕೆಲವು ವರದಿಗಳ ಪ್ರಕಾರ, ಬ್ರಿಟಿಷ್ ಬಿಲಿಯನೇರ್ ಹಾರ್ಡಿಂಗ್ ಜೊತೆಗೆ ಬ್ರಿಟಿಷ್ ಮತ್ತು ಪಾಕಿಸ್ತಾನಿ ಉದ್ಯಮಿ ಶಹಬಾಜ್ ದಾವೂದ್, ಪುತ್ರ ಸುಲೇಮನ್, ಫ್ರೆಂಚ್ ಎಕ್ಸ್​ಪ್ಲೋರೆರ್ ಪೌಲ್ -ಹೆನ್ರಿ ನರ್ಜೋಲೆಟ್ ಮತ್ತು ಸ್ಟಾಕ್ಟನ್ ರಶ್ ಇದ್ದರು ಎಂದು ವರದಿ ಮಾಡಿವೆ. ದಾವೂದ್ ಕುಟುಂಬ ಉದ್ಯಮದಲ್ಲಿ ಭಾರೀ ಹೆಸರು ಮಾಡಿದೆ. ವಿಶ್ವಕ್ಕೆ ಇವರ ಕುಟುಂಬ ಪರಿಚಯ ಇದೆ.

ಸಮುದ್ರದಾಳದ ವಿಹಾರ ಬಲು ದುಬಾರಿ

ಕಾಣೆಯಾಗಿರುವ ನೌಕೆಯು OceanGate Expeditions ಒಡೆತನದ್ದಾಗಿದೆ. ಈ ಜಲಂತರ್ಗಾಮಿಯು ಸಮುದ್ರದ ಆಳವನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಕರೆದುಕೊಂಡು ಹೋಗಲಿದೆ. ವರದಿಗಳ ಪ್ರಕಾರ, ಒಂದು ಸೀಟ್​ಗೆ ಬರೋಬ್ಬರಿ 2.28ಕೋಟಿ ರೂಪಾಯಿ ಆಗಿದೆ. ಪ್ರತಿನಿತ್ಯ ಇದು, ಸುಮಾರು 6 ರಿಂದ 8 ಗಂಟೆಗಳ ಕಾಲ ದುರಂತ ಸ್ಥಳವನ್ನು ಪ್ರವಾಸಿಗರಿಗೆ ತೋರಿಸುತ್ತಿತ್ತು. ಇನ್ನು ಸಬ್​​​​ಮರಿನ್​ನಲ್ಲಿ ಸುಮಾರು 96 ಗಂಟೆಗಳ ಕಾಲ ಉಸಿರಾಡುವಷ್ಟು ಆಕ್ಸಿಜನ್ ಇತ್ತು.

1912ರ ಟೈಟಾನಿಕ್ ಹಡಗಿನ ದುರಂತದ ಕಥೆ

1912ರಲ್ಲಿ ಇಂಗ್ಲೆಂಡಿನ ಸೌತ್‌ಹ್ಯಾಂಪ್ಟನ್‌ನಿಂದ ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟಿದ್ದ Titanic ಹಡಗು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೆ ಒಳಗಾಯಿತು. ‘ಮುಳುಗಲಾರದ ಹಡಗು’ ಎಂದು ಭಾರೀ ಪ್ರಚಾರ ಪಡೆದಿದ್ದ ಟೈಟಾನಿಕ್‌ ಹಡಗಿನ ದುರಂತ, ಮಾನವರ ಇತಿಹಾಸದಲ್ಲೇ ಅತ್ಯಂತ ಕರಾಳ ದುರಂತವಾಗಿದೆ. ‘ವೈಟ್ ಸ್ಟಾರ್ ಲೈನ್’ ಎಂಬ ಸಾರಿಗೆ ಸಂಸ್ಥೆ ಒಡೆತನದಲ್ಲಿದ್ದ ಟೈಟಾನಿಕ್ ನೌಕೆಯನ್ನು ಬೆಲ್‌ಫಾಸ್ಟ್‌ನ ಹಾರ್ಲಂಡ್ ಅಂಡ್ ವುಲ್ಫ್ ಸಂಸ್ಥೆ ನಿರ್ಮಿಸಿತ್ತು. ಆ ಸಮಯದ ಅತ್ಯಂತ ದೊಡ್ಡ ಹಾಗೂ ಐಷರಾಮಿ ಹಡಗುಗಳಲ್ಲಿ ಟೈಟಾನಿಕ್ ಅಗ್ರಸ್ಥಾನ ಪಡೆದುಕೊಂಡಿತ್ತು.

Advertisment

1912 ಏಪ್ರಿಲ್ 14-15ರ ಮಧ್ಯರಾತ್ರಿ ನ್ಯೂಯಾರ್ಕ್‌ಗೆ ತೆರಳುತ್ತಿದ್ದಾಗ ನ್ಯೂಫೌಂಡ್‌ಲ್ಯಾಂಡಿನ ತೀರದಿಂದ ಸುಮಾರು 640 ಕಿಲೋಮೀಟರ್ ದೂರದಲ್ಲಿ ಐಸ್​ಬರ್ಗ್​​ಗೆ ಡಿಕ್ಕಿ ಹೊಡೆದು ಅಪ್ಪಳಿಸಿತ್ತು. ಪರಿಣಾಮ ಏಪ್ರಿಲ್ 15 ಮುಂಜಾನೆ 2.20 ರ ಸಮಯದಲ್ಲಿ ಹಡಗು ಮುಳುಗಿತ್ತು. ಹಡಗಿನಲ್ಲಿ 800 ಸಿಬ್ಬಂದಿ ಸೇರಿ 2220 ಪ್ರಯಾಣಿಕರಿದ್ದರು. ಆದರೆ ಲೈಫ್ ಬೋಟ್ ಸೀಮಿತ ಪ್ರವಾಸಿಗರ ಅನುಕೂಲಕ್ಕೆ ಇತ್ತು. 17000 ಪ್ರವಾಸಿಗರು ಬಳಸಿಕೊಳ್ಳಬಹುದಾಗಿದ್ದರೂ ಅದನ್ನು ಯಾರೂ ಕೂಡ ಸರಿಯಾಗಿ ಬಳಿಸಿಕೊಳ್ಳಲಿಲ್ಲ. ಹೀಗಾಗಿ ಕೇವಲ 705 ಮಂದಿ ಮಾತ್ರ ಬದುಕುಳಿದು, 1500ಕ್ಕೂ ಹೆಚ್ಚು ಪ್ರವಾಸಿಗರು ಪ್ರಾಣಬಿಟ್ಟಿದ್ದರು. ಟೈಟಾನಿಕ್ ಹಡಗು ಮುಳುಗಿ ಒಂದು ಶತಕ ಕಳೆದ ನಂತರ Newfoundland coastನಿಂದ 400 ಮೈಲಿ ದೂರದಲ್ಲಿ ಅದು ಧ್ವಂಸಗೊಂಡಿದೆ. ಅದನ್ನು ವೀಕ್ಷಿಸಲು ಈ ಜಲಂತರ್ಗಾಮಿ ಹೋಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment