Advertisment

ಕೇರಳದಿಂದ ಕರ್ನಾಟಕಕ್ಕೂ ನಿಫಾ ವೈರಸ್​​ ಕಾಲಿಡುವ ಆತಂಕ.. ಆರೋಗ್ಯ ಇಲಾಖೆಯಿಂದ ಹೈ-ಅಲರ್ಟ್​​​

author-image
Veena Gangani
Updated On
ಕೇರಳದಿಂದ ಕರ್ನಾಟಕಕ್ಕೂ ನಿಫಾ ವೈರಸ್​​ ಕಾಲಿಡುವ ಆತಂಕ.. ಆರೋಗ್ಯ ಇಲಾಖೆಯಿಂದ ಹೈ-ಅಲರ್ಟ್​​​
Advertisment
  • ನಿಫಾ ಕೇರಳ ಗಡಿ ದಾಟದಂತೆ ಕರುನಾಡಿನಲ್ಲಿ ಬೇಲಿ!
  • ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ
  • 706 ಸಂಪರ್ಕಿತರ ಮೇಲೆ ತೀವ್ರ ನಿಗಾ, ಎಲ್ಲೆಡೆ ಅಲರ್ಟ್

ಕೇರಳದಲ್ಲಿ ಆತಂಕ ಸೃಷ್ಟಿಸಿರೋ ನಿಫಾ ವೈರಸ್​ ರಾಜ್ಯದ ಗಡಿದಾಟಲು ಹೊಂಚುಹಾಕಿ ಕುಳಿತಿದೆ. ದೇವರ ನಾಡಲ್ಲಿ 6 ಜನರ ದೇಹಹೊಕ್ಕಿ ಇಬ್ಬರ ಉಸಿರು ನಿಲ್ಲಿಸಿರೋ ನಿಫಾ, ಕರ್ನಾಟಕದ ಗಡಿಭಾಗದಲ್ಲೂ ಆತಂಕ ಮರುಕಳಿಸುತ್ತಿದೆ. ಹೀಗಾಗಿ ರಾಜ್ಯದ ಗಡಿಭಾಗದಲ್ಲಿ ವೈರಸ್​ಗೆ ಬೇಲಿ ಹಾಕಲು ಆರೋಗ್ಯ ಇಲಾಖೆ ಸಜ್ಜಾಗುತ್ತಿದೆ.

Advertisment

publive-image

ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ 6ಕ್ಕೇರಿಕೆ!

ಕೇರಳದ ಕೋಝಿಕ್ಕೋಡ್​ ಜಿಲ್ಲೆಯಲ್ಲಿ ನಿಫಾ ವೈರಸ್​ ಭೀತಿ ಜನರ ನಿದ್ದೆಗಡಿಸಿದೆ. ದಿನೇ ದಿನೇ ತನ್ನ ಸಂಖ್ಯಾಬಲವನ್ನ ಹೆಚ್ಚಿಸಿಕೊಳ್ತಿರೋ ವೈರಸ್​ ನಿನ್ನೆ ಐದಂಕಿಯನ್ನ ತಲುಪಿ ಆತಂಕ ಸೃಷ್ಟಿಸಿತ್ತು. ನಿನ್ನೆಯೂ ಸಹ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು, 39 ವರ್ಷದ ವ್ಯಕ್ತಿಯೊಬ್ಬರಲ್ಲಿ ವೈರಸ್​ ಪತ್ತೆಯಾಗಿದೆ. ಕೋಝಿಕ್ಕೋಡ್ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಕೇರಳದ ಕೋಝಿಕ್ಕೋಡ್​ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ನಿನ್ನೆ ಮತ್ತು ಇವತ್ತು ರಜೆ ನೀಡಲಾಗಿದೆ.

publive-image

706 ಸಂಪರ್ಕಿತರ ಮೇಲೆ ನಿಗಾ.. ಎಲ್ಲೆಡೆ ಅಲರ್ಟ್​

ತನ್ನ ಸಂಖ್ಯಾ ಬಲವನ್ನ 6ಕ್ಕೆ ಹೆಚ್ಚಿಸಿಕೊಂಡಿರೋ ನಿಫಾ ಹಲವರ ದೇಹ ಹೊಕ್ಕಿರುವ ಸೂಚನೆ ನೀಡುತ್ತಿದೆ. ಕೇರಳದ ಕೋಝಿಕ್ಕೋಡ್​ ಜಿಲ್ಲೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 706 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ 77 ಮಂದಿ ಹೈ ರಿಸ್ಕ್ ಕೆಟಗರಿ ವ್ಯಕ್ತಿಗಳಾಗಿದ್ದು, 153 ಮಂದಿ ಆರೋಗ್ಯ ಇಲಾಖೆಯ ಸಿಬ್ಬಂದಿ ಎಂದು ತಿಳಿದುಬಂದಿದೆ. ಸದ್ಯ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ನಿಗಾದಲ್ಲಿದ್ದಾರೆ. ಇನ್ನೂ ಸೋಂಕಿತ 9 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ

ಕೇರಳದಲ್ಲಿ ನಿಫಾ ವೈರಸ್ ಭಯದ ವಾತಾವರಣ ಸೃಷ್ಟಿಸಿರುವ ಹಿನ್ನಲೆ ಗಡಿ ಜಿಲ್ಲ್ಲೆ ದಕ್ಷಿಣ ಕನ್ನಡದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ತೆರೆಯಲಾಗಿದೆ. ಬಾವಲಿಯಿಂದ ಜ್ವರ ಹರಡುವುದರಿಂದ ಹಕ್ಕಿಗಳು ತಿಂದು ಬಿಟ್ಟ ಹಣ್ಣುಗಳನ್ನು ತಿನ್ನದಂತೆ ಸೂಚನೆ ನೀಡಲಾಗಿದೆ. ಜ್ವರದ ಲಕ್ಷಣ ಕಂಡುಬಂದಲ್ಲಿ ವೈದ್ಯರಲ್ಲಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಅಂತ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.

Advertisment

publive-image

ಚಾಮರಾಜನಗರದಲ್ಲೂ ಆರೋಗ್ಯ ಇಲಾಖೆ ಅಲರ್ಟ್

ಗಡಿ ಜಿಲ್ಲೆ ಚಾಮರಾಜನಗರದ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಂದಿ ಸೇರಿದಂತೆ ಮಾಂಸಾಹಾರ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸಲಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಕಾಡಂಚಿನಲ್ಲಿ 158 ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ವಿಶೇಷ ನಿಗಾ ವಹಿಸಿದೆ. ಒಟ್ಟನಲ್ಲಿ ದೇಶದಲ್ಲಿ ಆತಂಕ ಸೃಷ್ಟಿಸಿರೋ ನಿಫಾ ದೇವರ ನಾಡನ್ನ ತಲ್ಲಣಗೊಳಿಸಿದೆ. ವೈರಸ್​ ಉಗ್ರರೂಪ ತಾಳಿ ಎಲ್ಲೆಡೆ ವ್ಯಾಪಿಸಿ ಜನರ ಜೀವ ಹಿಂಡುವ ಮುನ್ನ ಎಲ್ಲರೂ ಮುಂಜಾಗೃತ ಕ್ರಮಗಳನ್ನ ಅನುಸರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment