Advertisment

ಮಾಯಾನೋ, ಮಾಟಾನೋ, ಜೋತಿಷ್ಯಾನೋ, ಧರ್ಮಾನೋ.. ಹೆಚ್​ಡಿಕೆಗೆ ಡಿ.ಕೆ ಶಿವಕುಮಾರ್​ ತಿರುಗೇಟು

author-image
AS Harshith
Updated On
ದಳಕ್ಕೆ DK ಗಾಳ..!! ಕುಮಾರಸ್ವಾಮಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಡಲು ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್..!
Advertisment
  • ರಾಜ್ಯ ರಾಜಕಾರಣದಲ್ಲಿ ವಾಮಾಚಾರದ ಚರ್ಚೆ
  • ಮಾಜಿ ಸಿಎಂ ಎಚ್​ಡಿಕೆ ಮಾತಿಗೆ ತಿರುಗೇಟು ನೀಡಿದ ಡಿಕೆಶಿ
  • ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಮೂರು ವರ್ಷದ ಶ್ರಮವಿದೆ ಎಂದ ಡಿಸಿಎಂ

ರಾಜ್ಯ ರಾಜಕಾರಣದಲ್ಲಿ ಮತ್ತೆ ವಾಮಾಚಾರದ ಚರ್ಚೆ ಶುರುವಾಗಿದೆ. ಇತ್ತೀಚಿಗೆ ಮಾಜಿ ಸಿಎಂ ಎಚ್​ ಡಿ ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಇದೀಗ ಡಿಸಿಎಂ ಡಿ ಕೆ ಶಿವಕುಮಾರ್​ ತಿರುಗೇಟು ನೀಡಿದ್ದಾರೆ. ಮಾಯಾನೋ, ಮಾಟಾನೋ, ಜೋತಿಷ್ಯಾನೋ, ಧರ್ಮಾನೋ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಮೂರು ವರ್ಷದ ಶ್ರಮವಿದೆ ಎಂದು ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದಾರೆ.

Advertisment

ಹೆಚ್​ ಡಿ ಕುಮಾರಸ್ವಾಮಿ ಏನಂದ್ರು?

ಡಿಕೆ ಶಿವಕುಮಾರ್​ ಜ್ಯೋತಿಷ್ಯದಲ್ಲಿ ಹಲವಾರು ರೀತಿ ಕುತಂತ್ರ ಮಾಡ್ತಾರೆ. ಅದರ ಕೃತಕ ಶಕ್ತಿ ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಕೃತಕ ಶಕ್ತಿ ಬಹಳ ದಿನ ಇರಲ್ಲ. ಡಿಕೆಶಿಗೆ ಅವಧಿ ಪೂರ್ಣ ಆಗಲ್ಲ ಗೊತ್ತಿರಬಹುದು. ನಮಗಿಂತ ಹೆಚ್ಚು ಜ್ಯೋತಿಷ್ಯಶಾಸ್ತ್ರ ನಂಬಿದವರು. ಜ್ಯೋತಿಷ್ಯದಲ್ಲಿ ಹಲವಾರು ರೀತಿ ಕುತಂತ್ರ ಮಾಡ್ತಾರೆ ಎಂದು ಹೇಳಿದ್ದರು. ಈ ವಿಚಾರವಾಗಿ ಡಿಕೆಶಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.

ಸದ್ಯ ರಾಜ್ಯ ರಾಜಕಾರಣದಲ್ಲಿ ವಾಮಾಚಾರದ ಚರ್ಚೆ ಶುರುವಾಗಿದೆ. ರಾಜಕಾರಣಿಗಳು ಒಂದೊಂದರಂತೆ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಈ ವಿಚಾರ ಯಾವ ಮಟ್ಟ ತಲುಪಲಿದೆ ಅನ್ನೋದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment